ಗೊಂಬೆಯಾಟಗಳು ವಿಜ್ಞಾನ ಸಂವಹನಕ್ಕೆ ಪರಿಣಾಮಕಾರಿ ಮಾಧ್ಯಮ-ರವಿ ಭಜಂತ್ರಿ

Source: sonews | By Staff Correspondent | Published on 19th September 2019, 11:07 PM | State News |

ಬೆಳಗಾವಿ: ಯಾವುದೇ ಕ್ಲಿಷ್ಟಕರ ವಿಷಯಗಳನ್ನು ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥೈಸಲು ಗೊಂಬೆಯಾಟದಂತಹ ಜಾನಪದ ಪ್ರಕಾರಗಳು ಪರಿಣಾಮಕಾರಿ ಮಾಧ್ಯಮಗಳಾಗಬಲ್ಲದು, ಆ ನಿಟ್ಟಿನಲ್ಲಿ ವಿಜ್ಞಾನವನ್ನು ಸುಲಭವಾಗಿ ಜನರಿಗೆ ಮುಟ್ಟಿಸುವಲ್ಲಿ ಹಾಗೂ ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಆರೋಗ್ಯ ಹಾಗೂ ದೈನಂದಿನ ಜೀವನಕ್ಕೆ ಸಂಬಂಧಿತ ತಪ್ಪು ಕಲ್ಪನೆಗಳ ನಿವಾರಣೆ ಮಾಡಿ ಸಮಾಜದಲ್ಲ್ಲಿ ವೈಜ್ಞಾನಿಕ ಅರಿವು ಹಾಗೂ ಮನೋಭಾವನೆ ಮೂಡಿಸಿ ವಿಜ್ಞಾನ ಸೂಕ್ಷ್ಮ ಸಮಾಜ ನಿರ್ಮಾಣವನ್ನು ಮಾಡಲು ಗೊಂಬೆಯಾಟದಂತಹ ಜಾನಪದ ಮಾಧ್ಯಮವನ್ನು ಬಳಸುವ ಅವಶ್ಯಕತೆಯಿದೆ ಎಂದು ಖ್ಯಾತ ಸಾಹಿತಿ ಹಾಗೂ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ರವಿ ಭಜಂತ್ರಿ ಅಭಿಪ್ರಾಯ ಪಟ್ಟರು. 

ಇವರು ಸೇವಕ ಸಂಸ್ಥೆಯು ಸ್ಥಳೀಯ ಮಹಾಂತೇಶ ನಗರ ರಹವಾಸಿಗಳ ಸಂಘ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಾಂತೇಶ ನಗರದಲ್ಲಿನ ಮಹಾಂತ ಭವನ ಇಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜಾನ ಇಲಾಖೆ, ವಿಜಾನ ಮತ್ತು ತಂತ್ರಜಾನ ಸಂವಹನ ಪರಿಷತ್ತು, ನವದೆಹಲಿ ಇವರ ನೆರವಿನಡಿಯಲ್ಲಿ ವಿಜಾನ ಪದವೀಧರರು, ವಿಜಾನ ಶಿಕ್ಷಕರು ಹಾಗೂ ಬಿ. ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿರುವ  “ಸಾಂಪ್ರದಾಯಕ ಗೊಂಬೆಯಾಟಗಳ ಮೂಲಕ ವಿಜ್ಞಾನ ಸಂವಹನ” ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಾಮಾಯಾಣ ಹಾಗೂ ಮಹಾಭಾರತ ದಂತಹ ಕ್ಲಿಷಕರವಾದ ಜನಸಮಾನ್ಯರ ಜ್ಞಾನಕ್ಕೆ ನಿಲುಕದ ಮಹಾ ಗ್ರಂಥಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವಲ್ಲಿ ಗೊಂಬೆಯಾಟದಂತಹ ಆಕರ್ಷಕ ಜಾನಪದ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದ್ದವು. ಹೀಗೆ ಸಾಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವಲ್ಲಿ ಇಂತಹ ಮಾದ್ಯಮಗಳ ಬಳಕೆ ಸೃಜನಾತ್ಮಕ ಪರಿಕಲ್ಪನೆಯಾಗಿದೆ.   ಶಿಕ್ಷಣ ಒಬ್ಬ ವ್ಯಕ್ತಿಯನ್ನು ರೂಪಿಸುವ, ಬೆಳೆಸುವ ಹಾಗೂ ಸಮಾಜವನ್ನು ಬದಲಾಯಿಸುವ ಪ್ರಬಲ ಅಸ್ತ್ರ. ವಿಜ್ಞಾನ ಸತ್ಯ. ವೈಜ್ಞಾನಿಕ ಮನೋಭಾವನೆ ಬೆಳೆದಾಗಲೇ ಸಮಾಜದಿಂದ ಮೌಡ್ಯಗಳು ದೂರವಾಗಲು, ಸ್ವಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.  ಪರಿಣಾಮಕಾರಿ ಸಂವಹನದ ಮಹತ್ವವನ್ನು ವಿವರಿಸಿದ ಇವರು ವ್ಯಕ್ತಿ ಎತ್ತರ ಎತ್ತರ ಬೆಳೆಯುವುದಕ್ಕಿಂತ ಹತ್ತಿರ ಹತ್ತಿರ ಬೆಳೆದರೆ ಸಂವಹನ ಸಾಧ್ಯವಾಗುವುದು. ಯಾವ ವಿಷಯಗಳು ಭಯ ಹುಟ್ಟಿಸುವುದೋ ಆ ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯಲು ಸಾಧ್ಯವಾಗುವುದಿಲಾ. ಬದಲಿಗೆ ಭರವಸೆ ಹುಟ್ಟಿಸುವ ವಿಷಯಗಳು ತಮ್ಮದಾಗಿಸಲು ಸಾಧ್ಯ ಆದುದರಿಂದ ನಮ್ಮದೇ ಆದ ಜಾನಪದ ಹಾಗೂ ಸಾಂಪ್ರದಾಯಕ ಮಾಧ್ಯಮಗಳಿಂದ ಕ್ಲಿಷ್ಠಕರವಾದ ವಿಜ್ಞಾನ ವಿಷಯಗಳನ್ನು ಸುಲಭವಾಗಿ ಕಲಿಯಲು ಸಹಾಯವಾಗುವುದು.   ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ, ಯುವಕರಲ್ಲಿ ಹಾಗೂ ಮಕ್ಕಳಲ್ಲಿ ವೈಜ್ಞಾನಿಕ ಭಾವನೆ ಮೂಡಿಸುವ ಸಲುವಾಗಿ ವಿಜ್ಞಾನವನ್ನು ಜಾನಪದ ಮಾಧ್ಯಮಗಳು, ಸಾಂಪ್ರದಾಯಕ ಗೊಂಬೆಯಾಟಗಳ ಮೂಲಕ ಸಮಾಜಕ್ಕೆ ಮುಟ್ಟಿಸುವ ಸೇವಕ ಸಂಸ್ಥೆಯ ಆನಂದ ಲೋಬೊ ರವರ ಪ್ರಯತ್ನ ಶ್ಲಾಘನೀಯ ಎಂದರು. 

ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾಲಯ ಸಂಗೊಳ್ಳಿ ರಾಯಣ್ಣಾ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಬಿ. ಎಸ್. ನಾವಿ, ಪರಿಣಾಮಕಾರಿ ಸಂವಹನ ಹಾಗೂ ಗೊಂಬೆಯಾಟದ ಮೂಲಕ ಸಂವಹಿಸಬಹುದಾದ ಏಳು ಪ್ರಕಾರಗಳ ವಿಷಯವಾಗಿ ಮಾತನಾಡಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಮಹಿಳಾ ಕಲ್ಯಾಣ ಸಂಸ್ಥೆಯ ನಿರ್ದೇಶಕ ಎಂ. ಎಸ್. ಚೌಗಲಾ ಇವರು ವಿವಿಧ ಪ್ರಕಾರಗಳ ಗೊಂಬೆಗಳ ತಯಾರಿಕೆಯ ಬಗ್ಗೆ ಹಾಗೂ ಆಕರ್ಷಕವಾಗಿ ಅವುಗಳ ಉಪಯೋಗಿಸುವ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ನಗರ ರಹವಾಸಿಗಳ ಸಂಘ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ಇವರು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಾಗೂ ಸಮಾಜಕ್ಕೆ ವಿಜ್ಞಾನದಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿ, ಶಿಕ್ಷಣದಲ್ಲಿ ಹೊಸ, ಆಕರ್ಷಕ ಹಾಗೂ ಸೃಜನಾತ್ಮಕ ಮಾಧ್ಯಮವನ್ನು ಅಳವಡಿಸಿಕೊಳ್ಳವ ಅಗತ್ಯತೆಯನ್ನು ಒತ್ತಿ ಹೇಳಿದರು.  

ಕಾರ್ಯಾಗಾರ ಆಯೋಜನೆ ಮಾಡಿದ ಸೇವಕ ಸಂಸ್ಥೆ, ಬೆಳಗಾವಿ ಇದರ ಕಾರ್ಯದರ್ಶಿ ಹಾಗೂ ಕಾರ್ಯಾಗಾರದ ಪ್ರಧಾನ ಪರಿವೀಕ್ಷರಾದ ಆನಂದ ಲೋಬೊ ಇವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಸೇವಕ ಸಂಸ್ಥೆಯ ಕಾರ್ಯ ಚಟುವಟಿಕೆಗಳು, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು, ನವದೆಹಲಿ ಇದರ ಉದ್ದೇಶ, ಕಾರ್ಯಾಗಾರದ ಪ್ರಸ್ತುತತೆ ಹಾಗೂ ಕಾರ್ಯಾಗಾರದ ಚಟುವಟಿಕೆಗಳ ಬಗ್ಗೆ ವಿವರಿಸಿದರು. 

ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ, ಗೊಂಬೆಯಾಟ ತಜ್ಞ, ಶಿಕ್ಷಣದಲ್ಲಿ ಗೊಂಬೆಯಾಟ ಪುಸ್ತಕದ ಲೇಖಕ  ಸಿದ್ದಪ್ಪ ಬಿರಾದಾರ, ರಂಗಾಯಾಣ, ನೀನಾಸಂನ ರಂಗ ಭೂಮಿ ನಿರ್ದೇಶಕರುಗಳಾದ ಗಣೇಶ ಹೆಗ್ಗೋಡು ಮತ್ತು ಸುನಂದಾ ನಿಂಬನಗೌಡರ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಉಪನ್ಯಾಸಕ ಎಸ್. ಬಿ. ವಾಲಿಶೆಟ್ಟಿ ವಂದಿಸಿದರು. ಶಕ್ಷಕಿ  ಸೋನಲ್ ಚೀನಿವಾಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದ ಮೊದಲ ದಿನ ಉತ್ತರ ಕನ್ನಡ ಜಿಲ್ಲೆಯ ಗೊಂಬೆಯಾಟ ತಂಡದಿಂದ  ಗೊಂಬೆಯಾಟ ಪ್ರದರ್ಶನ ಏರ್ಪಡಿಸಲಾಗಿತ್ತು. ತರಬೇತಿ ಕಾರ್ಯಾಗಾರದಲ್ಲಿ ಎಪ್ಪತ್ತು ಜನ ಆಯ್ದ ವಿಜ್ಞಾನ ಪದವೀಧರರು, ಶಿಕ್ಷಕರು, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

Read These Next

ಅವಿಭಜಿತ ಜಿಲ್ಲೆಯ ಫ್ಯಾಕ್ಸ್‍ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ಕೋಲಾರ: ಅವಿಭಜಿತ ಜಿಲ್ಲೆಯ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು ಇಲ್ಲವಾದಲ್ಲಿ ಯಾವುದೇ ಆರ್ಥಿಕ ...