ಪ್ರವಾಸಿ ಟ್ಯಾಕ್ಷಿ ಒದಗಿಸಲು ಅರ್ಜಿ ಆಹ್ವಾನ

Source: so news | By MV Bhatkal | Published on 8th June 2019, 12:43 AM | Coastal News | Don't Miss |

ಕಾರವಾರ: ಪ್ರವಾಸೋದ್ಯಮ ಇಲಾಖೆಯಿಂದ 2019-20 ನೇ ಸಾಲಿಗೆ ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಸಹಾಯಧನದೊಂದಿಗೆ  ಪ್ರವಾಸಿ ಟ್ಯಾಕ್ಷಿಯನ್ನು ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು 5-7-2019 ಕೊನೆಯ ದಿನವಾಗಿರುತ್ತದೆ. ಈಲ್ಲೆಯಲ್ಲಿ ಪ್ರಸ್ತುತ ಸಾಲಿಗೆ  12 ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಷಿ ಖರೀದಿಸಲು ತಲಾ ರೂ. 3,00,000/- ಗಳ  ಬ್ಯಾಂಕಗಳ ಮೂಲಕ ಸಾಲ ಒದಗಿಸಲಾಗುವುದು.  ಇಲಾಖೆಯಿಂದ ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಷಿ  ಪಡೆಯಲು ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳು ಮತ್ತು ಸಲ್ಲಿಸಬೇಕಾದ ದಾಖಲೆಗಳು ಈ ಕೆಳಕಂಡಂತಿವೆ.
ಅರ್ಜಿದಾರರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವನಾಗಿರಬೇಕು. ವಯಸ್ಸು 20 ರಿಂದ 40 ವರ್ಷದೊಳಗಿರಬೇಕು. ಕನಿಷ್ಟ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಲಘು ವಾಹನ ಚಾಲನಾ ಪರವಾನಗಿ ಪಡೆದು ಕನಿಷ್ಠ ಒಂದು ವರ್ಷವಾಗಿರಬೇಕು. ಅಭ್ಯರ್ಥಿಗಳು ವಾಹನ ಪರವಾನಗಿಯೊಂದಿಗೆ ಬ್ಯಾಡ್ಜ್‍ನ್ನು ಹೊಂದಿರತಕ್ಕದ್ದು. ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ನಗರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ. 55,000/- ಹಾಗೂ ಗ್ರಾಮಾಂತರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ. 40,000/- ಮೀರಿರಬಾರದು. ಅರ್ಜಿದಾರರು ಯಾವ ಜಿಲ್ಲೆಯ ನಿವಾಸಿಯಾಗಿರುತ್ತಾರೋ ಅದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅಭ್ಯರ್ಥಿಯ ಕುಟುಂಬದಲ್ಲಿ ಯಾವ ಒಬ್ಬ ಸದಸ್ಯನು ಸರ್ಕಾರಿ ನೌಕರಿ ಹೊಂದಿರಬಾರದು.ಸಲ್ಲಿಸಬೇಕಾದ ದಾಖಲೆಗಳು.
ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್, ತಹಶೀಲ್ದಾರರಿಂದ ಪಡೆದುಕೊಂಡಿರುವ  ಚಾಲ್ತಿಯಲ್ಲಿರುವ ಆರ್.ಡಿ. ಸಂಖ್ಯೆವುಳ್ಳ  ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ. ತಹಶೀಲ್ದಾರ / ನಗರ ಪಾಲಿಕೆ / ಪುರಸಭೆ / ಗ್ರಾಮ ಪಂಚಾಯತ / ಪಟ್ಟಣ ಪಂಚಾಯತ ಯಿಂದ ಪಡೆದಿರುವ ವಾಸಸ್ಥಳ ಧೃಡೀಕರಣ ಪತ್ರದ ಪ್ರತಿ. ಖಾಯಂ ಲಘು ವಾಹನ ಚಾಲನಾ ಪರವಾನಗಿ ಪತ್ರ ಹಾಗೂ ಆರ್.ಟಿ.ಒ. ರವರಿಂದ ಪಡೆದಿರುವ ಡಿ.ಎಲ್.ಎಕ್ಸ್‍ಟ್ರಾಕ್ಟ್‍ಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ವಿದ್ಯಾರ್ಹತೆಯ ಬಗ್ಗೆ ಕನಿಷ್ಠ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿ ಪ್ರತಿ. 
ಅರ್ಜಿದಾರರು ರಾಜ್ಯ ಸರ್ಕಾರಗಳ ಇಲಾಖೆಗಳಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ಉದ್ಯೋಗ ಹೊಂದಿರದ ಬಗ್ಗೆ, ನಗರ ಪಾಲಿಕೆ / ಪುರಸಭೆ / ಗ್ರಾಮ ಪಂಚಾಯತ / ಪಟ್ಟಣ ಪಂಚಾಯತಗಳಿಂದ ಸ್ವಉದ್ಯೋಗ ಕಲ್ಪಿಸಿಕೊಳ್ಳುವ ಸೌಲಭ್ಯ ಪಡೆಯದೇ ಇರುವ ಬಗ್ಗೆ ಕುಟುಂಬದ ಯಾವ ಸದಸ್ಯನು ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಷಿ ಪಡೆದಿರುವುದಿಲ್ಲ ಎಂಬ ಬಗ್ಗೆ ಸ್ವಯಂ ಪ್ರಮಾಣಿಕರಿಸಿ ರೂ. 50/- ರ ಬೆಲೆಯ ಛಾಪಾ ಕಾಗದದಲ್ಲಿ ಮುಚ್ಚಳಿಕೆ ನೀಡತಕ್ಕದ್ದು. ಅರ್ಜಿಯಲ್ಲಿ ಅಭ್ಯರ್ಥಿಗಳ ದೂರವಾಣಿ ಸಂಖ್ಯೆಗಳನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. 
ನಿಗದಿ ಪಡಿಸಿದ ಅರ್ಜಿ ನಮೂನೆಯನ್ನು ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಕಾರವಾರ ಇವರಿಂದ ಪಡೆದು ಭರ್ತಿಮಾಡಿ ದ್ವಿಪ್ರತಿಯಲ್ಲಿ ಎಲ್ಲಾ ಅಗತ್ಯ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ  ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ರಾ.ಹೆ. -66 ಖ.ಖಿ.ಔ. ಕಛೇರಿ ಹತ್ತಿರ ಕಾರವಾರ ರವರಿಗೆ ಸಲ್ಲಿಸಬೇಕು.

 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...