ಹೊಸದಿಲ್ಲಿ: ದಿಶಾ ರವಿಗೆ ಜಾಮೀನು

Source: VB | By S O News | Published on 24th February 2021, 8:06 PM | National News | State News |

ಹೊಸದಿಲ್ಲಿ: ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.13ರಂದು ಬೆಂಗಳೂರಿನಲ್ಲಿ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಇಲ್ಲಿಯ ಸೆಷನ್ಸ್ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ. ತಲಾ ಒಂದು ಲಕ್ಷ ರೂ. ಗಳ ಎರಡು ಭದ್ರತೆಗಳನ್ನು ಒದಗಿಸುವಂತೆ ನ್ಯಾಯಾಲಯವು ಅವರಿಗೆ ಸೂಚಿಸಿದೆ.

ಸಾಕ್ಷ್ಯಾಧಾರಗಳ ಕೊರತೆಯನ್ನು ಪರಿಗಣಿಸಿದರೆ ಯಾವುದೇ ಕ್ರಿಮಿನಲ್ ಪೂರ್ವೇತಿಹಾಸವನ್ನು ಹೋಂದಿರದ 22ರ ಹರೆಯದ ಯುವತಿಗೆ ಜಾಮೀನು ನಿರಾಕರಿಸಲು ಯಾವುದೇ ಸ್ಥಲ ಕಾರಣ ಕಂಡು ಬರುತ್ತಿಲ್ಲ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ.

ಕೋರ್ಟ್ ಹೇಳಿದ್ದೇನು?

1. ಯಾವುದೇ ಕ್ರಿಮಿನಲ್ ಪೂರ್ವಾಪರಗಳಿಲ್ಲದ ಹಾಗೂ •ಸಮಾಜದಲ್ಲಿ ಸುಭದ್ರವಾದ ಸ್ಥಾನಮಾನವನ್ನು ಹೊಂದಿರುವ 22 ವರ್ಷದ ಯುವತಿಗೆ ಜಾಮೀನು ನಿರಾಕರಿಸಲು ಹಾಗೂ ಆಕೆಯನ್ನು ಜೈಲಿಗೆ ಕಳುಹಿಸುವುದಕ್ಕೆ ಬೇಕಾದ ಯಾವುದೇ ಸ್ಥಲವಾದ ಕಾರಣ ನ್ಯಾಯಾಲಯಕ್ಕೆ ಸಿಗುತ್ತಿಲ್ಲ.

2. ಕಾಯ್ದೆಯನ್ನು ವಿರೋಧಿಸಲು ಸಭೆ ಸೇರಿದ್ದ ಜನರೊಂದಿಗೆ ವೇದಿಕೆಯನ್ನು ಹಂಚಿಕೊಂಡರೆಂಬ ಕಾರಣಕ್ಕಾಗಿ ಆಕೆ ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ಅಥವಾ 26-1-2021ರ ಹಿಂಸಾಚಾರವನ್ನು ಬೆಂಬಲಿಸಿದ್ದರೆಂದು ಭಾವಿಸಲು ಸಾಧ್ಯವಿಲ್ಲ. ಜನವರಿ 26ರ ಹಿಂಸಾಚಾರದ ದುಷ್ಕರ್ಮಿಗಳ ಜೊತೆ ಪಿಜೆಎಫ್ (ಪೊಯೆಟಿಕ್ ಜಸ್ಟೀಸ್ ಫೌಂಡೇಶನ್)ಗಾಗಲಿ ಅಥವಾ ಆರೋಪಿ(ದಿಶಾ)ಗೆ ನಂಟು ಕಲ್ಪಿಸುವ ಒಂದೇ ಒಂದು ಪುರಾವೆಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿಲ್ಲ.

3. ಯಾವುದೇ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಪೌರರು ಸರಕಾರದ ಆತ್ಮಸಾಕ್ಷಿಯ ಪಾಲಕರಾಗಿದ್ದಾರೆ. ಸರಕಾರದ ನೀತಿಗಳನ್ನು ಒಪ್ಪಿಕೊಳ್ಳಲಿಲ್ಲವೆಂಬ ಕಾರಣಕ್ಕೆ ಅವರನ್ನು ಜೈಲುಕಂಬಿಗಳ ಹಿಂದಿರಿಸಲು ಸಾಧ್ಯವಿಲ್ಲ.

4. ವಾಕ್‌ಸ್ವಾತಂತ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವು ಉಲ್ಲಂಘಿಸ ಲಾಗದಂತಹ ಮೂಲಭೂತ ಹಕ್ಕೆಂದು ಪರಿಗಣಿಸುವ ಮೂಲಕ ನಮ್ಮ ಸಂವಿಧಾನದ ಸ್ಥಾಪಕರು ಅಭಿಪ್ರಾಯಗಳ ಭಿನ್ನತೆಯನ್ನು ಗೌರವಿಸಿದ್ದಾರೆ. ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಭಾರತದ ಸಂವಿಧಾನದ 19ನೇ ವಿಧಿಯಲ್ಲಿ ದೃಢವಾಗಿ ಪ್ರತಿಪಾದಿಸಲಾಗಿದೆ.

ಈ ತೀರ್ಪಿನ ಬೆನ್ನಲ್ಲೇ ಪಟಿಯಾಲಾ ಹೌಸ್ ನ್ಯಾಯಾಲಯದ ನ್ಯಾಯಾಧೀಶ ಪಂಕಜ ಶರ್ಮಾ ಅವರು ದಿಶಾ ಅವರ ಪೊಲೀಸ್ ಕಸ್ಟಡಿಯನ್ನು ನಾಲ್ಕು ದಿನ ವಿಸ್ತರಿಸುವಂತೆ ಕೋರಿ ದಿಲ್ಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದರು.

ದಿಶಾ ಈಗಾಗಲೇ ಆರು ದಿನಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಮತ್ತು ಎರಡು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.

ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯವು ಶನಿವಾರ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರದ ಸಂಕ್ಷಿಪ್ತ ವಿಚಾರಣೆ ವೇಳೆ ದಿಶಾ ಪರ ವಕೀಲರು ತನ್ನ ಕಕ್ಷಿದಾರರಿಗೆ ಖಾಲಿಸ್ತಾನ್ ಆಂದೋಲನ ದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರ ವಿರುದ್ಧದ ದೇಶದ್ರೋಹದ ಆರೋಪಕ್ಕೆ ಯಾವುದೇ ಸಮರ್ಥನೆಯಿಲ್ಲ ಎಂದು ಒತ್ತಿ ಹೇಳಿದರು.

ಜಾಮೀನು ನೀಡಿಕೆಯನ್ನು ವಿರೋಧಿಸಿದ ದಿಲ್ಲಿ ಪೊಲೀಸರು, ದಿಶಾರನ್ನು ಬಿಡುಗಡೆಗೊಳಿಸಿದರೆ ಆಕೆ ಸಾಕ್ಷ್ಯಾಧಾರಗಳನ್ನು ಹಾಳುಗೆಡವಬಹುದು ಎಂದು ವಾದಿಸಿದರು.
ಕಳೆದ ವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ರಾಣಾ ಅವರು ದಿಶಾ, ಸಾಮಾಜಿಕ ಕಾರ್ಯಕರ್ತ ಶಂತನು ಮುಲುಕ್ ಮತ್ತು ನ್ಯಾಯವಾದಿ ನಿಕಿತಾ ಜೇಕಬ್ ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ರೈತರ ಗಣತಂತ್ರ ದಿನದ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಹಿಂಸಾಚಾರವನ್ನು ಭುಗಿಲೆಬ್ಬಿಸಲು ಸಂಚು ನಡೆಸಿದ್ದರು ಎಂಬ ಪೊಲೀಸರ ವಾದದಲ್ಲಿ ಲೋಪಗಳನ್ನು ಬಿಟ್ಟು ಮಾಡಿದ್ದರು. ದಿಲ್ಲಿ ಪೊಲೀಸರು ನೀಡಿರುವ ಕಾರಣಗಳು ಊಹೆಗಳಾಗಿವೆ ಎಂದು ಅವರು ಬಣ್ಣಿಸಿದ್ದರು.

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...