ನಾಳೆ ಟಿ.ಇ.ಟಿ ಪ್ರವೇಶ ಪರೀಕ್ಷೆ: 144 ಸೆಕ್ಷನ್ ಜಾರಿ

Source: SO News | By Laxmi Tanaya | Published on 21st August 2021, 9:54 PM | Coastal News | Don't Miss |

ಕಾರವಾರ : ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಆ. 22 ರಂದು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ   ನಡೆಸಲಾಗುತ್ತಿದ್ದು,  ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ ವ್ಯಾಪ್ತಿಯಲ್ಲಿ ಸೆಕ್ಷನ್ 144ರನ್ವಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.  

ಪರೀಕ್ಷಾ ಕೇಂದ್ರಗಳಲ್ಲಿ  ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ಸ್ ವಸ್ತುಗಳು,  ಮೊಬೈಲ್ ಫೋನ್, ಸ್ಮಾರ್ಟವಾಚ್, ವೈರ್‍ಲೆಸ್, ಬ್ಲೂಟುತ್, ಇಯರ್ ಹೆಡ್ ಫೋನ್‍ಗಳನ್ನು ನಿಷೇಧಿಸಲಾಗಿದೆ.    ಪರೀಕ್ಷಾ ಸಂದರ್ಭದಲ್ಲಿ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆ ಮುಚ್ಚುವಂತೆ ಹಾಗೂ  ಯಾವುದೇ ಅವ್ಯವಹಾರ,  ಕಾನೂನು ಬಾಹೀರ ಚಟುವಟಿಕೆ ನಡೆಯದಂತೆ, ಮುನ್ನೆಚ್ಚೆರಿಕೆ ಕ್ರಮವಾಗಿ ಪರೀಕ್ಷೆ ಮುಕ್ತಾಯವಾಗುವ ಸಿ.ಆರ್.ಪಿ.ಸಿ ಕಾಯ್ದೆಯಂತೆ ಜಿಲ್ಲಾಧಿಕಾರಿ  ನಿಷೇದಾಜ್ಷೆ ಘೋಸಿಸಿದ್ದಾರೆ.  

ಪರೀಕ್ಷಾ ಕೇಂದ್ರಗಳ ವಿವರ:
1. ಸೆಂಟ್ ಮೈಕಲ್ಸ್ ಕಾನ್ವೆಂಟ್ ಪ್ರೌಢಶಾಲೆ, ಕಾರವಾರ 
2.ಹಿಂದೂ ಪ್ರೌಢಶಾಲೆ, ಕಾರವಾರ 
3.ಬಾಲಮಂದಿರ ಪ್ರೌಢಶಾಲೆ, ಕಾರವಾರ 
4.ಸರ್ಕಾರಿ ಪ್ರೌಢಶಾಲೆ, ಕಾರವಾರ 
5.ರಹೀಮ ಖಾನ ಯುನಿಟಿ ಪ್ರೌಢಶಾಲೆ, ಕಾರವಾರ 
6.ಶಿವಾಜಿಪ್ರೌಢಶಾಲೆ, ಕಾರವಾರ 
7.ನ್ಯೂ ಹೈಸ್ಕೂಲ್ ಬಾಡ, ತಾ:ಕಾರವಾರ
8. ಶ್ರೀ ಮಾರಿಕಾಂಬೆ ಪ.ಪೂ ಕಾಲೇಜು ಶಿರಸಿ. ತಾ:ಶಿರಸಿ
9. ಶ್ರೀ ಮಾರಿಕಾಂಬೆ ಪ್ರೌಢಶಾಲೆ ಶಿರಸಿ. ತಾ:ಶಿರಸಿ
10. ಲಯನ್ಸ್ ಪ್ರೌಢಶಾಲೆ ಶಿರಸಿ. ತಾ:ಶಿರಸಿ
11.ಆವೆ ಮರಿಯಾ ಪ್ರೌಢಶಾಲೆ ಶಿರಸಿ. ತಾ:ಶಿರಸಿ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...