ಸ್ಥಳೀಯರಿಗೆ ಉಪಟಳ ನೀಡುತ್ತಿದ್ದ ಮಂಗನ ಹಿಡಿಯಲು ಬಂದ ಶಿವಮೊಗ್ಗದ ವೈಲ್ಡಲೈಫ್ ರೆಸ್ಕ್ಯೂ ತಂಡ

Source: so news | By Manju Naik | Published on 14th April 2019, 1:40 AM | Coastal News | Don't Miss |

 

ಭಟ್ಕಳ: ಇಲ್ಲಿನ ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಉಪಟಳ ನೀಡುತ್ತಿದ್ದ ಲಂಗರು ಜಾತಿಯ ಕೋತಿಯನ್ನು ಹಿಡಿಯಲು ಶುಕ್ರವಾರದಂದು ತಾಲೂಕಿನ ಹಿರಿಯ ಅರಣ್ಯ ಅಧಿಕಾರಿಗಳು ಸೇರಿದಂತೆ ಶಿವಮೊಗ್ಗದಿಂದ ವೈಲ್ಡಲೈಫ್ ರೆಸ್ಕ್ಯೂ ತಂಡವೇ ಮುಂಡಳ್ಳಿಗೆ ಆಗಮಿಸಿದೆ. 
ಕಳೆದ ಒಂದೂವರೆ ವರ್ಷದಿಂದ ಕಪ್ಪು ಮೂತಿಯ ಲಂಗರೂ ಜಾತಿಗೆ ಸೇರಿದ ಮಂಗವೊಂದು ಬರಿಯ ಆಟೋ ರಿಕ್ಷಾಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿತ್ತು. ಆದರೆ ಇತ್ತೀಚಿನ ಕೆಲವು ದಿಗಳಿಂದ ಸ್ಥಳೀಯರು ಸೇರಿದಂತೆ ಇತರ ವಾಹನಗಳ ಮೇಲೂ ದಾಳಿ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಜನಾಂತರಂಗ ಪತ್ರಿಕೆಯಲ್ಲಿ ಗುರುವಾರದಂದು "ಮುಂಡಳ್ಳಿಯಲ್ಲಿ ಮಂಗನ ಉಪಟಳ: ಮಾಹಿತಿ ತಿಳಿಸಲು ಕರೆ ಮಾಡಿದ ಮಾಜಿ ಗ್ರಾ.ಪಂ. ಅಧ್ಯಕ್ಷನ ಮೇಲೆ ಅರಣ್ಯಾಧಿಕಾರಿ ರೇಗಾಟ'ಎನ್ನುವ ಶೀರ್ಷಿಕೆಯಡಿ ವಿಸ್ರ್ತತ ವರದಿ ಮಾಡಿತ್ತು.
ವರದಿಯಿಂದ ಎಚ್ಚೆತ್ತ ಸಹಾಯಕ ಅರಣ್ಯ ಅಧಿಕಾರಿಗಳು ಮಂಗನ ಹಿಡಿಯಲು ಶುಕ್ರವಾರದಂದು ಕಾರ್ಯಚರಣೆಗೆ ಇಳಿದಿದ್ದಾರೆ. ಎಸಿಎಫ್ ಬಾಲಕೃಷ್ಣ ನೇತೃತ್ವದಲ್ಲಿ ಶಿವಮೊಗ್ಗ ವೈಲ್ಡಲೈಪ್ ಡಿವಿಜನ್ ಸಿನಿಯರ್ ವೆಟರನರಿ ಆಫಿಸರ್ ಡಾ. ವಿನಯ ಎಸ್, ಸಹಾಯಕ ಪ್ರತಾಪ, ಭಟ್ಕಳ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಮೋದ ಬಿ, ಮಲ್ಲಿಕಾರ್ಜುನ ಅಂಗಡಿ, ವೀರೇಶ ಅಲಬೋಡ್, ಜಯದೀಪ ಸೇರಿದಂತೆ ಇತರರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಮದ್ಯಾಹ್ನದಿಂದ ಸತತವಾಗಿ ಪ್ರಯತ್ನಿಸಿದರೂ ಮಂಗ ಇವರ ಹಿಡಿತಕ್ಕೆ ದೊರಕಿಲ್ಲ. ಸತತ ಒಂದೂವರೆ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಮಂಗ ಸಾಕಷ್ಟು ಓಡಾಡಿಸಿದ್ದು, ಕೊನೆಯಲ್ಲಿ ಕತ್ತಲಾದ ಹಿನ್ನೆಲೆ ಕಾರ್ಯಚರಣೆ ಸ್ಥಗಿತಗೊಳಿಸಿ ವಾಪಸ್ಸು ತೆರಳಿದ್ದಾರೆ. ಕಾರ್ಯಚರಣೆಯೂ ಶನಿವಾರ, ಭಾನುವಾರವೂ ಕಾರ್ಯಚರಣೆ ಮುಂದುವರೆಸುವದಾಗಿ ಎಸಿಎಫ್ ಬಾಲಚಂಧ್ರ ಹೆಚ್.ಸಿ. ತಿಳಿಸಿದ್ದಾರೆ.
ಈ ಬಗ್ಗೆ  ಪ್ರತಿಕ್ರಿಯಿಸಿದ ಸಹಾಯಕ ಅರಣ್ಯ ಅಧಿಕಾರಿ ಬಾಲಕೃಷ್ಣ ಹೆಚ್.ಸಿ. 'ಮಂಗನ ಹಿಡಿಯಲು ಬಂದರೆ ಗ್ರಾಮಸ್ಥರ ದಂಡೆ ಸೇರುತ್ತಿದೆ. ಇದರಿಂದ ವಾನರ ಇನ್ನಷ್ಟು ಆಕ್ರೋಶಗೊಳ್ಳುತ್ತದೆ. ಇದರಿಂದ ಕಾರ್ಯಚರಣೆಗೆ ತೊಡಕಾಗುತ್ತಿದೆ. ಈ ಕುರಿತು ಹಿರಿಯ ವೆಟರನರಿ ಆಫಿಸರ್ ಡಾ. ವಿನಯ ಎಸ್ ಅವರೊಂದಿಗೆ ಚರ್ಚಿಸಿ ಪ್ಲಾನ್ ರಚಿಸಿ ಶನಿವಾರವೂ ಕಾರ್ಯಚರಣೆ ಮುಂದುವರೆಸುತ್ತೇವೆ. ಗ್ರಾಮಸ್ಥರೂ ಕೂಡ ನಮಗೆ ಸಹಕರಿಸಬೇಕು. 

 

Read These Next

ಮುಂಡಗೋಡ: ಛತ್ರಪತಿ ಶಿವಾಜಿ ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ : ಎಲ್.ಟಿ.ಪಾಟೀಲ್

ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದು ಧರ್ಮವನ್ನು ಉಳಿಸಿ ಸಂರಕ್ಷಣೆ ಮಾಡಿದ ಛತ್ರಪತಿ ಶಿವಾಜಿ. 17ನೇ ಶತಮಾನದಲ್ಲಿ ...