ತಿರುಪುರ್: ಬಿಜೆಪಿ ಉಪಾಧ್ಯಕ್ಷನ ಕೊಲೆ

Source: S O News service | By Staff Correspondent | Published on 28th January 2017, 12:04 AM | National News | Incidents | Don't Miss |

ತಿರುಪುರ್ : ಬಿಜೆಪಿ ಮುಖಂಡನೋರ್ವನನ್ನು ಕೊಲೆ ಮಾಡಿ ಅವರ ದೇಹವನ್ನು ಶೆಡ್ ಒಂದರ ಚಾವಣಿಗೆ ನೇತು ಹಾಕಿದ ಘಟನೆ ಇಲ್ಲಿಗೆ ಸಮೀಪದ ತಿರುಪುರ್ ಎಂಬಲ್ಲಿ ನಡೆದಿದೆ.

 

 ತಿರುಪುರ್ ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಸ್.ಮಾರಿಮುತ್ತು (52 ವರ್ಷ) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ. ಮುತನ್‌ಪಾಲಯಂ ಎಂಬಲ್ಲಿಯ ನಿವಾಸಿಯಾಗಿರುವ ಮಾರಿಮುತ್ತು ಇಂದು (ಶುಕ್ರವಾರ) ಮುಂಜಾವ ಮನೆಯ ಬಳಿಯಿರುವ ದನದ ಕೊಟ್ಟಿಗೆಗೆ ಹೋಗಿದ್ದರು. ಎಷ್ಟು ಹೊತ್ತಾದರೂ ಮನೆಗೆ ಮರಳದಿದ್ದಾಗ ಮನೆಯವರು ಅವರನ್ನು ಹುಡುಕಿ ಕೊಟ್ಟಿಗೆಗೆ ತೆರಳಿದಾಗ ಅವರನ್ನು ಕೊಲೆ ಮಾಡಿ ದನದ ಕೊಟ್ಟಿಗೆಯ ಚಾವಣಿಗೆ ನೇತು ಹಾಕಿರುವುದು ಕಂಡು ಬಂದಿತು. ಅವರ ಕೈಗಳನ್ನು ಹಿಂದಕ್ಕೆ ಬಿಗಿದು ಕಟ್ಟಲಾಗಿತ್ತು. ದೇಹದ ಮೇಲೆ ಗಾಯದ ಗುರುತು ಕಂಡು ಬಂದಿದೆ. ಮಾರಿಮುತ್ತು ಅವರಿಗೆ ಹಲ್ಲೆ ನಡೆಸಿ ಕೊಲೆಗೈದ ಬಳಿಕ ದೇಹವನ್ನು ನೇತುಹಾಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಬ್ರಿಟಿಷ್‌ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ವಿವಿಧ ಜಿಲ್ಲೆಗಳ ಸುಮಾರು 40 ಜನ ಯುವಕರಿಗೆ ಮೋಸ

ಬ್ರಿಟಿಷ್‌ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ವಿವಿಧ ಜಿಲ್ಲೆಗಳ ಸುಮಾರು 40 ಜನ ಯುವಕರಿಗೆ ಮೋಸ