ಅಕ್ರಮ ಗೋ ಮಾಂಸ ಸಾಗಾಟ : ಇಬ್ಬರು ಆರೋಪಿಗಳು ಬಂಧನ

Source: so news | By MV Bhatkal | Published on 15th June 2021, 10:49 PM | Coastal News | Don't Miss |


ಭಟ್ಕಳ:ಹಣ್ಣಿನ ಗಾಡಿಯಲ್ಲಿ ಗೋವಿನ ಮಾಂಸವನ್ನು ಅಡಗಿಸಿಟ್ಟುಕೊಂಡು ಭಟ್ಕಳಕ್ಕೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರು ಶಿರಾಲಿ ಚೆಕ್ ಪೋಸ್ಟ ಬಳಿ
ಗೂಡ್ಸ್ ವಾಹನ ಸಹಿತ ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.
ಹಾವೇರಿ ಯಿಂದ ಭಟ್ಕಳದ ಕಡೆಗೆ ಕಲ್ಲಂಗಡಿ ಹಣ್ಣುಗಳೂ ಸೇರಿದಂತೆ ಇತರೇ ಹಣ್ಣುಗಳನ್ನು ನೋಟಕ್ಕೆ ಪ್ಲಾಸ್ಟಿಕ್ ಖಾಲಿ ಬಾಕ್ಸ ನಲ್ಲಿ ಹಣ್ಣುಗಳು ತುಂಬಿ ಯಾರಿಗೂ ಅನುಮಾನ ಬರದಂತೆ ಅದರ ಅಡಿಯಲ್ಲಿ ಸುಮಾರು 500 ಕೆ.ಜಿ.ಯಷ್ಟು ದನದ ಮಾಂಸವನ್ನು ಸಾಗಿಸುತ್ತಿರುವ ಮಾಹಿತಿ ದೊರೆತ ಪೊಲೀಸರು ವಾಹನವು ಶಿರಾಲಿ ಚೆಕ್ ಪೋಸ್ಟ್ ಹತ್ತಿರ ತಲುಪುತ್ತಲೇ ನಿಲ್ಲಿಸಿ ತಪಾಸಣೆ ನಡೆಸಿದ್ದು ಹಣ್ಣುಗಳ ಅಡಿಯಲ್ಲಿ ಅಡಗಿಸಿಟ್ಟ ಗೋವಿನ ಮಾಂಸ ಪತ್ತೆಯಾಗಿದೆ.ಗೂಡ್ಸ್ ವಾಹನದಲ್ಲಿ ಗೋವಿನ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 
ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಮೂಲದ ಆರೋಪಿ ಮೌಲಾಲಿ ತಂದೆ ಬಾಷಸಾಬ್ ತೋಟದ 33 ವರ್ಷ ಕಲ್ಗದ್ರ ಹಾನಗಲ್ ನಿವಾಸಿ ಯಾಗಿದ್ದು ಹಾಗೂ ಇನೊಬ್ಬ ಆರೋಪಿ ಜಿಲಾನಿ ತಂದೆ ಗೌಸ ಮೊಹಿದ್ದಿನ್ ಅತ್ತಾರ,32 ವರ್ಷ ಬೆಳಗಲ್ ಪೇಟೆ,ಹಾನಗಲ್ ನಿವಾಸಿ ಯಾಗಿದ್ದು,ಇಬ್ಬರು ಆರೋಪಗಳು ಭಟ್ಕಳದ ಮುಜಾಪರ್ ವಾಸ ಈತನಿಗೆ ೧ ಲಕ್ಷ ಮೌಲ್ಯದ ಸುಮಾರು ೫೦೦ ಕೆ.ಜಿ ದನದ ಮೌಂಸ ನೀಡಲ್ಲಿ ಕ್ಕೆ ಬರುತ್ತಿದ್ದರು ಎನ್ನಲಾಗಿದೆ
 ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ ಕುಮಾರ್ ವಿ.ದೂರು ನೀಡಿದ್ದು ಎ.ಎಸೈ ಕೃಷ್ಣಾನಂದ ನಾಯ್ಕ  
ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ತನಿಖೆ ಕೈಗೊಂಡಿದ್ದಾರೆ‌.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...