"ನಮಸ್ತೆ ಟ್ರಂಪ್" ಕಾರ್ಯಕ್ರಮ ಯಾರಿಗಾಗಿ? ಈ ಸುದ್ದಿ ಓದಿ

Source: sonews | By Staff Correspondent | Published on 24th February 2020, 5:54 PM | National News |

ಅಹ್ಮದಾಬಾದ್ : ಅಮೇರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಯ ಕಾರ್ಯಕ್ರಮ ಯಾರಿಗಾಗಿ ಎಂಬ ಕುತುಹಲ ನಿಮ್ಮಲ್ಲಿದ್ದರೆ ಗುಜರಾತ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹೇಳುತ್ತಾರೆ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ. 

ಬಹಳಷ್ಟು ಪ್ರಚಾರ ಪಡೆದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವಿಕೆಯ 'ನಮಸ್ತೇ ಟ್ರಂಪ್' ಕಾರ್ಯಕ್ರಮ ಅಹ್ಮದಾಬಾದ್ ನಗರದ ಮೊಟೇರಾ ಸ್ಟೇಡಿಯಂನಲ್ಲಿ ಇಂದು ನಡೆದಿದೆ. ಟ್ರಂಪ್ ಸ್ವಾಗತಕ್ಕೆ ಇಡೀ ಅಹ್ಮದಾಬಾದ್ ನಗರವನ್ನು ಕೋಟ್ಯಂತರ ರೂಪಾಯಿ ವ್ಯಯಿಸಿ ಸಜ್ಜುಗೊಳಿಸಲಾಗಿತ್ತಾದರೂ ಈ ಕಾರ್ಯಕ್ರಮದಿಂದ ಯುವಜನತೆ ಮುಖ್ಯವಾಗಿ ವಿದ್ಯಾರ್ಥಿ ಸಮುದಾಯ ಖುಷಿಯಾಗಿಲ್ಲ.

ಗುಜರಾತ್‍ ನ ಗಾಂಧಿನಗರದ ಪ್ರತಿಷ್ಠಿತ ಐಐಟಿ, ಅಹ್ಮದಾಬಾದ್ ಐಐಎಂ, ಹಾಗೂ  ಗುಜರಾತ್ ನ್ಯಾಷನಲ್ ಲಾ ಯುನಿವರ್ಸಿಟಿ ಹಾಗೂ ಸಿಇಪಿಟಿ ವಿವಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ  ಆಡಳಿತ ನಡೆಸಿರುವ ದುಂದುವೆಚ್ಚದ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

"ಈ ಕಾರ್ಯಕ್ರಮ ಭಾರತಕ್ಕಾಗಿ ಅಲ್ಲ. ಬದಲಾಗಿ ಬಿಜೆಪಿ ಹಾಗೂ ರಿಪಬ್ಲಿಕ್ ಪಾರ್ಟಿಗಾಗಿ ನಡೆದಿದೆ. ಮುಂಬರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗುಜರಾತಿ ಸಮುದಾಯದ 30 ಲಕ್ಷ ಎನ್ ಆರ್‍ಐಗಳ ಮತ ಸೆಳೆಯುವುದು ಟ್ರಂಪ್ ಉದ್ದೇಶವಾಗಿದೆ. ತಮ್ಮ ಪಕ್ಷ ಈಗಾಗಲೇ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಸೋಲುಂಡಿದ್ದರಿಂದ ಮುಂಬರುವ ಬಿಹಾರ ಹಾಗೂ ಬಂಗಾಳ ಚುನಾವಣೆಗಳಿಗೆ ಮುನ್ನ ಮೋದಿ ತಮ್ಮನ್ನು ಅಂತರಾಷ್ಟ್ರೀಯ ಮಹತ್ವದ  ನಾಯಕನನ್ನಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ'' ಎಂದು  ಕಾನೂನು ವಿದ್ಯಾರ್ಥಿ ಅಂಕಿತ್ ಮಿಶ್ರಾ ಅಭಿಪ್ರಾಯ ಪಡುತ್ತಾರೆ.

"ಅಮೆರಿಕಾದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮಕ್ಕೆ ಪ್ರತಿಯಾಗಿ ನಮಸ್ತೇ ಟ್ರಂಪ್ ಹಾಗೂ ರೋಡ್ ಶೋ  ಕಾರ್ಯಕ್ರಮಗಳು ಒಂದು ಪಿಆರ್ ತಂತ್ರಗಾರಿಕೆಯಂತೆ ಕಾಣುತ್ತಿದೆ'' ಎಂದು ಹಲವು ವಿದ್ಯಾರ್ಥಿಗಳು ಅಭೀಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಅವರು ವಾಗ್ದಂಡನೆಯಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆಂದು ಕಾಣಿಸುತ್ತಿದ್ದರೆ, ಮೋದಿ ದೇಶದ ದುರ್ಬಲ  ಆರ್ಥಿಕತೆಯನ್ನು ಅಡಗಿಸುವ ಯತ್ನವಾಗಿ ಇಂತಹ ಕಾರ್ಯಕ್ರಮ ನಡೆಸಿದ್ದಾರೆ ಎಂದೂ ಕೆಲವು ವಿದ್ಯಾರ್ಥಿಗಳು ಹೇಳುತ್ತಾರೆ.

"ಈ ಭೇಟಿಯಿಂದ ನಮಗೇನು ದೊರೆಯುತ್ತದೆ ? ಕನಿಷ್ಠ ಒಂದು ವ್ಯಾಪಾರ ಒಪ್ಪಂದವಾದರೂ ಹೊರಹೊಮ್ಮಿದರೆ ಇಷ್ಟೊಂದು ಖರ್ಚು ಮಾಡಿದ್ದನ್ನು ಸಮರ್ಥಿಸಿಕೊಳ್ಳಬಹುದು'' ಎಂದು ಐಐಟಿ ಗಾಂಧಿನಗರದ ವಿದ್ಯಾರ್ಥಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...