ಈ ಆ್ಯಪ್ ಡೌನ್‌ಲೌಡ್ ಮಾಡಿಕೊಂಡರೆ ಪಂಗನಾಮ ಗ್ಯಾರಂಟಿ

Source: UNI | Published on 25th June 2020, 8:23 PM | State News | Don't Miss |

ಬೆಂಗಳೂರು: ಗೂಗಲ್ ಪ್ಲೈ ಸ್ಟೋರ್‌ನಲ್ಲಿ ಉಚಿತವಾಗಿ ಸಿಗಲಿವೆ ಅಥವಾ ಅನಾಮಧೇಯ ವ್ಯಕ್ತಿ ಮಾತು ಕೇಳಿ ಸಿಕ್ಕ ಸಿಕ್ಕ ಅಪ್ಲೀಕೇಷನ್ ಮತ್ತು ಆ್ಯಪ್‌ಗಳನ್ನು ಅಪ್‌ಲೌಡ್ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸಿ. ಇಲ್ಲೊಬ್ಬ ಸೈಬರ್ ಕಳ್ಳ, ಅಮಾಯಕ ವ್ಯಕ್ತಿಯ ಮೊಬೈಲ್‌ಗೆ ಕ್ವಿಕ್ ಸಪೋರ್ಟ್ ಟೀಮ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಸಿ ಬ್ಯಾಂಕ್ ಖಾತೆಗೆ 30 ಸಾವಿರ ರೂ.ಗೆ ಕನ್ನ ಹಾಕಿದ್ದಾನೆ.
ದೀಪಾಂಜಲಿನಗರದ ಮಹೇಂದ್ರ (52) ವಂಚನೆಗೆ ಒಳಗಾದವರು. ಮಹೇಂದ್ರ ಅವರು ಮಗನ ಮೊಬೈಲ್‌ನ ಗೂಗಲ್ ಪ್ಲೈಸ್ಟೋರ್‌ನಲ್ಲಿ ಕೆಲವೊಂದು ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಾಗ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 6,687 ರೂ. ಕಡಿತವಾಗಿದೆ. ಇದರ ಬಗ್ಗೆ ವಿಚಾರಣೆ ಮಾಡುವ ಸಲುವಾಗಿ ಗೂಗಲ್‌ನಲ್ಲಿ ಹೆಲ್ಪ್ ಲೈನ್ ಎಂದು ಸರ್ಚ್ ಮಾಡಿ ಅದರಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ಮಹೇಶ್ ಕರೆ ಮಾಡಿದ್ದಾರೆ.
ಕರೆ ಸ್ವೀಕರಿಸಿದ ವ್ಯಕ್ತಿ, ಗೇಮ್ಸ್‌ಗಳು ಉಚಿತವಾಗಿ ಸಿಗಬೇಕೆಂದರೆ ಮೊದಲು ಕ್ವಿಕ್ ಸಪೋರ್ಟ್ ಟೀಮ್ ಅಪ್ಲೀಕೇಷನ್‌ಗಳನ್ನು ಡೌನ್‌ಲೌಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾನೆ. ಅದರಂತೆ ಮಹೇಶ್, ಮೊದಲು ಕ್ವಿಕ್ ಸಪೋರ್ಟ್ ಟೀಮ್ ಅಪ್ಲೀಕೇಷನ್‌ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಡೌನ್‌ಲೋಡ್ ಮಾಡಿಕೊಂಡಾಗ ಅದು ಆಕ್ಟಿವೇಟ್ ಆಗಲು ಬ್ಯಾಂಕ್ ಖಾತೆ ವಿವರ ಕೇಳಿದೆ. ಅದಕ್ಕೆ ಮಹೇಶ್, ಮಾಹಿತಿಯನ್ನು ಭರ್ತಿ ಮಾಡಿದ್ದಾರೆ.
ಇದಾದ ಮೇಲೆ ಸೈಬರ್ ಕಳ್ಳ, ಕ್ವಿಕ್ ಸಪೋರ್ಟ್ ಟೀಮ್ ಅಪ್ಲೀಕೇಷನ್ ಬಳಸಿಕೊಂಡು ಮಹೇಶ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 30 ಸಾವಿರ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಎಚ್ಚೆತ್ತ ಮಹೇಶ್, ವಂಚನೆಗೆ ಒಳಗಾಗುತ್ತಿರುವುದು ಗೊತ್ತಾಗಿ ಬ್ಯಾಂಕ್ ಖಾತೆಯನ್ನು ಸ್ಥಗಿತ ಮಾಡಿಸಿ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಕ್ವಿಕ್ ಸಪೋರ್ಟ್ ಆ್ಯಪ್ ಎನಿಡೆಸ್ಕ್ ಆ್ಯಪ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವಾಗ ಮೊಬೈಲ್ ನಂಬರ್ ನಮೂದು ಮಾಡಿರುತ್ತೇವೆ. ಆ್ಯಪ್ ಇನ್‌ಸ್ಟಾಲ್ ಆದ ಕೂಡಲೇ ಮೊಬೈಲ್ ಕಂಟ್ರೋಲನ್ನು ಸೈಬರ್ ಕಳ್ಳರು ಪಡೆಯುತ್ತಾರೆ. ಅಜ್ಞಾತ ಸ್ಥಳದಲ್ಲಿ ಕುಳಿತು ನಮ್ಮ ಮೊಬೈಲ್‌ನ್ನು ರಿಮೋಟ್ ಕಂಟ್ರೋಲ್ ಮಾದರಿಯಲ್ಲಿ ಬಳಸುತ್ತಾರೆ. ಮೊಬೈಲ್ ಬ್ಯಾಂಕಿಂಗ್, ವ್ಯಾಲೆಟ್ ಆಪರೇಟ್ ಮಾಡಿ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...