ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಇಲ್ಲ. ನೈಟ್ ಕರ್ಪ್ಯೂ ಮುಂದುವರಿಕೆ. ಎಚ್ಚರ ತಪ್ಪದಂತೆ ಜನತೆಗೆ ಸರ್ಕಾರದ ಮನವಿ

Source: SO News | By Laxmi Tanaya | Published on 21st January 2022, 4:32 PM | State News |

ಬೆಂಗಳೂರು : ಕೋವಿಡ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿಧಿಸಿದ್ದ ವೀಕೆಂಡ್ ಕರ್ಪ್ಯೂವನ್ನ ರಾಜ್ಯ ಸರ್ಕಾರ ರದ್ದು ಮಾಡಿದೆ.

ಶುಕ್ರವಾರ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ  ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಿಎಂ  ನೇತೃತ್ವದಲ್ಲಿ ತಜ್ಞರ ಸಭೆ ನಡೆಸಲಾಗಿದ್ದು, ಕೊರೊನಾ ಮೂರನೇ ಅಲೆ ತೀವ್ರತೆ  ಜಾಸ್ತಿಯಾಗಿ ಕಾಡದೇ ಇರುವ ಕಾರಣಕ್ಕೆ ಅಪಾಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಹೀಗಾಗಿ ರಾಜ್ಯದ ವಿವಿಧ ವಲಯಗಳ ಜನರು  ವೀಕೆಂಡ್ ಕರ್ಪ್ಯೂ ಬೇಡ ಎಂದು ಹೇಳಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.  ಆದರೆ ಪ್ರತಿದಿನ ರಾತ್ರಿ 10 ರಿಂದ ಮುಂಜಾನೆ ಐದು ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ತಿಳಿಸಲಾಗಿದೆ.

ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಶೇ. ಐದಕ್ಕಿಂತ ಹೆಚ್ಚಾದಲ್ಲಿ ಮತ್ತೆ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಾತ್ರೆ, ಉತ್ಸವ ಹಾಗೂ ಪ್ರತಿಭಟನೆಗೆ ಯಾವುದೇ ರೀತಿಯಲ್ಲೂ ಅವಕಾಶವಿಲ್ಲ. ಸರ್ಕಾರದ  ಗೈಡ್ ಲೈನ್ಸ್ ನ್ನು ಪ್ರತಿಯೊಬ್ಬರು ಫಾಲೋ ಮಾಡಬೇಕು ಎಂದು ಸಭೆ ಬಳಿಕ ಸಚಿವ ಆರ್  ಅಶೋಕ್ ಸೂಚನೆ ನೀಡಿದ್ದಾರೆ. 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...