ಪರಿಸರದ ಮೇಲೆ ಪರಿಣಾಮ ಬೀರುವ ಕೈಗಾರಿಕೆಗಳಿಗೆ ಅವಕಾಶವಿಲ್ಲ: ಡಿಸಿ

Source: S.O. News Service | Published on 18th July 2019, 8:14 PM | Coastal News | Don't Miss |

ಕಾರವಾರ: ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುವ ಯಾವುದೇ ಕೈಗಾರಿಕೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಹೇಳಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಗುರುವಾರ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ರೂಪಿಸಲಾಗಿದೆ. ಆದರೆ ಕೈಗಾರಿಕೆಗಳಿಂದ ಅಡ್ಡ ಪರಿಣಾಮ ಬೀರಬಹುದಾದ ಅಥವಾ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕೈಗಾರಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಕೈಗಾರಿಕರಣವೇ ಪರಿಸರದ ಮೇಲೆ ದಬ್ಬಾಳಿಕೆ ಎಂಬ ಭಾವನೆ ಇದೆ. ಆದರೆ ನಿಯಮಾನುಸಾರ ಪರಿಸರದ ಮೇಲೆ ಸಮತೋಲನ ಕಾಪಾಡುವ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಹಾನಿಕಾರಕ ಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂಉ ಅವರು ಹೇಳಿದರು.
ಕೈಗಾರಿಕಾ ವಸಾಹತು ಸ್ಥಾಪನೆಗೆ ನಿಯಮಾನುಸಾರ ಭೂಮಿಯನ್ನು ಕೋರಿ ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಬೇಡಿಕೆಗನುಸಾರ, ಲಭ್ಯತೆ ಅನುಸಾರ ಸರ್ಕಾರದಿಂದ ಭೂಮಿ ಮಂಜೂರು ಮಾಡಲು ಕ್ರಮ ವಹಿಸಲಾಗುವುದು. ಹೊರತಾಗಿ ಕೈಗಾರಿಕೆಗಳೇ ಇಲ್ಲದೆ ಬರೀ ಭೂಮಿ ಖರೀದಿಸಿ ಇಟ್ಟುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದೂ ಅವರು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಗೆ ಕೈಗಾರಿಕೆಗಳಿಗೆ ಪೂರಕ ಭೂಮಿ ಸಿಗುತ್ತಿಲ್ಲ ಎಂದ ಅವರು, ಬೇರೆ ಜಿಲ್ಲೆಗೆ ಹೋಗುವುದದರೆ ಅವರಿಗೆ ಅಲ್ಲಿಯೇ ಜಾಗ ಒದಗಿಸಲು ಕ್ರಮ ವಹಿಸಲಾಗುವುದು. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಕುಮಟಾ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸುತ್ತಲೂ ತಡೆಗೋಡೆ ನಿರ್ಮಿಸುವುದು ಸೂಕ್ತವಿದ್ದು ಈ ಸಂಬಂಧ ನೀಲನಕ್ಷೆ ತಯಾರಿಸಿ ಪ್ರಸ್ತಾವನೆಯನ್ನು ಸಲ್ಲಿಸಿದಲ್ಲಿ ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮೆ.ಫ್ರವೇಣಿ ಕೊಕೊನಟ್ ಪ್ರಾಡಕ್ಟ್, ಮುಗ್ವಾ, ಹೊನ್ನಾ ಈ ಘಟಕಕ್ಕೆ ಡೆಸಿಕೇಟೆಡ್ ಕೊಕೊನಟ್ ಪ್ಲೆಕ್ಸ್ ತಯಾರಿಕೆಗಾಗಿ ಹಾಗೂ ಮೆ. ಉಷಾ ಬೆವರೆಜಸ್, ಕಾರವಾರ ಇವರ ಮಿನರಲ್ ಡ್ರಿಂಕಿಂಗ್ ವಾಟರ್ ತಯಾರಿಕೆಗಾಗಿ ಅನುಮತಿ ಕೋರಿ ಬಂದಿದ್ದ ಪ್ರಸ್ತಾವನೆಗಳನ್ನು ಷರತ್ತಿನ ಮೇಲೆ ಅನುಮತಿಸಲು ಸಭೆಯಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.
ಸಮಿತಿ ಉಪಾಧ್ಯಕ್ಷರೂ ಆದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್, ಕೆಎಸ್‍ಎಸ್‍ಐಡಿಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಲ್ಲಪ್ಪ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯವಸ್ಥಾಪಕ ಕಣಬೂರು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶ್ರೀನಿವಾಸ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಹಾಜರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...