ಜೀವ ವೈವಿಧ್ಯ ಸಮೃದ್ದಿಗೆ ಹಲವು ಚಟುವಟಿಕೆಗಳು ಜಾರಿಯಾಗಲಿ: ಅನಂತ ಹೆಗಡೆ ಅಶೀಸರ

Source: SO News | By Laxmi Tanaya | Published on 8th September 2021, 8:54 AM | State News | Don't Miss |

ಶಿವಮೊಗ್ಗ :  ಸೊರಬ ತಾಲ್ಲೂಕಿನ ಪಿಳಲಿ ಪಾರಂಪರಿಕ ವೃಕ್ಷಕ್ಕೆ ರಾಜ್ಯ ಮಟ್ಟದ ಮಾನ್ಯತೆ ಇದೆ. ಇಲ್ಲಿರುವ ದೇವರು ಕಾಡುಗಳಿಗೆ ಜಾಗತಿಕ ಮನ್ನಣೆ ಇದೆ. ಇತಿಹಾಸ ಪ್ರಸಿದ್ದ ಕೆರೆಗಳು ಇದ್ದು ಜೀವವೈವಿಧ್ಯ ಸಂರಕ್ಷಕರನ್ನು ಅಭಿನಂದಿಸುವ ಕೆಲಸ ಆಗಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿಪ್ರಾಯಪಟ್ಟರು.

   ಜೀವವೈವಿಧ್ಯ ತಜ್ಞರ ತಂಡದೊಂದಿಗೆ ಸೊರಬ ತಾಲ್ಲೂಕಿನ ಅರಣ್ಯ, ಕಾನುಪ್ರದೇಶಗಳು, ಹೊಸಬಾಳೆ ಸಮೀಪ ಮೊಡಗೋಡದ ಶ್ರೀಗಂಧವನ ನಿರ್ಮಾಣವನ್ನು ವೀಕ್ಷಿಸಿ ಅವರು ಮಾತನಾಡಿದರು.

     ಅರಣ್ಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಭೇಟಿ ಮಾಡಿ ವನ ಸಂರಕ್ಷಣೆ, ಬೆಟ್ಟ ಅಭಿವೃದ್ದಿ ಬಗ್ಗೆ ಮಾತುಕತೆ ನಡೆಸಿದ ಅವರು ಕದಂಬ ವೃಕ್ಷವನ್ನು ನೆಟ್ಟು ಕಾನುಗಳ ರಕ್ಷಣೆಯಿಂದ ರೈತರು ಸಮೃದ್ದಿ ಹೊಂದುತ್ತಾರೆಂದು ಹೇಳಿದರು.

    ಭೇಟಿಗೂ ಮುನ್ನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮತ್ತು ತಾಲ್ಲೂಕು ಜೀವ ವೈವಿಧ್ಯ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಜನಪದ ವೈದ್ಯರ ಸಮಾವೇಶ, ಹಸಿರು ಶಾಲೆಗಳಿಗೆ ಪ್ರೋತ್ಸಾಹ, ಕೆರೆ-ಕಾನು-ಕೃಷಿ ವೈವಿಧ್ಯ ರಕ್ಷಣೆಗೆ ಮುಂದಾದವರನ್ನು ಅಭಿನಂದಿಸುವ ಕಾರ್ಯ ನಡೆಯಬೇಕು ಎಂದು ಸೂಚಿಸಿದರು.

       ಸಾಂಪ್ರದಾಯಿಕ ಭತ್ತದ ತಳಿ, ವಿನಾಶದ ಅಂಚಿನಲ್ಲಿರುವ ಮಾವು, ಹಲಸು ತಳಿಗಳ ಉಳಿವಿನ ಕುರಿತು ರೈತರೊಂದಿಗೆ ಸಂವಾದ ನಡೆಸಬೇಕು. ಜೀವ ವೈವಿಧ್ಯ ಕಾಯ್ದೆ ಬಗ್ಗೆ ವಕೀಲರ ತಂಡಕ್ಕೆ ಜಾಗೃತಿ ಮಾಹಿತಿ ನೀಡಬೇಕು ಎಂದರು.

     ಈ ವೇಳೆ ಮಂಡಳಿ ಸದಸ್ಯ ವೆಂಕಟೇಶ, ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಹೊಸಬಾಳೆ ಗ್ರಾ.ಪಂ ಅಧ್ಯಕ್ಷ ಸತ್ಯನಾರಾಯಣ್, ಜೀವವೈವಿಧ್ಯ ಸಮಿತಿ ಅಧ್ಯಕ್ಷ ರಾಮಪ್ರಸಾದ್, ಕಂಚಿ ಶಿವರಾಂ, ಗ್ರಾಮದ ಹಿರಿಯ ಮುಖಂಡರು, ಅರಣ್ಯ ಅಧಿಕಾರಿಗಳು ಇದ್ದರು.

Read These Next

ಬೆಂಗಳೂರು: 2021ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ - ಸಚಿವ ಬಿ. ಶ್ರೀರಾಮುಲು

2021ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ...

ಬೆಂಗಳೂರು: ಅಕ್ಟೋಬರ್ 24ರಿಂದ ಒಂದು ವಾರಗಳ ಕಾಲ ‘ಕನ್ನಡಕ್ಕಾಗಿ ನಾವು’ ಅಭಿಯಾನ - ಸಚಿವ ಸುನೀಲ್ ಕುಮಾರ್

ರಾಜ್ಯಾದಾದ್ಯಂತ 66ನೆ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಎಂದಿನಂತೆ ನವೆಂಬರ್ ಒಂದರಂದು ಮಾತ್ರ ...

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ನ್ಯಾಮತಿ ತಾಲ್ಲೂಕು ಸುರಹೊನ್ನೆಯಲ್ಲಿ ಜಿಲ್ಲಾಧಿಕಾರಿ ಗಳ ನಡೆ ಹಳ್ಳಿ ಕಡೆ- ಗ್ರಾಮವಾಸ್ತವ್ಯಕ್ಕೆ ಚಾಲನೆ

ದಾವಣಗೆರೆ : ಕೊರೊನಾ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮ ವಾಸ್ತವ್ಯ ...

ಬಾಗಲಕೋಟೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ; ಪಾಪ್ಯುಲರ್ ಫ್ರಂಟ್ ಕಳವಳ

ಬಾಗಲಕೋಟೆಯ ಜಿಲ್ಲೆಯ ಇಳಕಲ್ ನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಂಘಪರಿವಾರದ ಹಿನ್ನೆಲೆಯ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ...

ಭಟ್ಕಳ: ಶ್ರೀವಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ನಾಯ್ಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ

ಶ್ರೀವಲಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪವಿತ್ರಾ ಜಯಕರ ನಾಯ್ಕ ದಿಶಾ ಭಾರತ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ...