ಹೊಸದಿಲ್ಲಿ: ಇನ್ನು ಮುಂದೆ ಎಲ್‌ಎಲ್‌ಆರ್, ಡಿಎಲ್ ನವೀಕರಣ ಸಹಿತ 18 ಆರ್‌ಟಿಒ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ

Source: VB | By S O News | Published on 6th March 2021, 1:37 PM | National News |

ಹೊಸದಿಲ್ಲಿ: ಚಾಲನಾ ಪರವಾನಿಗೆ ಹಾಗೂ ನೋಂದಣಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ನಿರ್ದಿಷ್ಟ ಸೇವೆಗಳು ಇನ್ನು ಮುಂದೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ ಎಂದು ರಸ್ತೆಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಸುತ್ತೋಲೆ ತಿಳಿಸಿದೆ.

ಅಂದರೆ ಇನ್ನು ಮುಂದೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡದೆ ಆಧಾರ್‌ ದೃಢೀಕರಣದ ಮೂಲಕ ಸ್ವಯಂಪ್ರೇರಿತವಾಗಿ ಯಾರೂ ಕೂಡ ತಮ್ಮ ಚಾಲನಾ ಪರವಾನಿಗೆ ನವೀಕರಣಗೊಳಿಸಬಹುದು, ಆರ್‌ಸಿಯ ನಕಲು ಹಾಗೂ ಇಂತಹಇತರ ಸೇವೆಗಳನ್ನು ಪಡೆಯಬಹುದು. ಇದರ ಉದ್ದೇಶ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಹಾಗೂ ನಾಗರಿಕರ ಸಂಪರ್ಕವಿಲ್ಲದೆ, ಅವರಿಗೆ ತೊಂದರೆ ಮುಕ್ತ ಸೇವೆ ನೀಡುವುದು. ಇನ್ನು ಮುಂದೆ ಇಂತಹ 18 ಸಂರ್ಪ ರಹಿತ ಸೇವೆ ಲಭ್ಯವಾಗಲಿದೆ.

18 ಸೇವೆಗಳು ಯಾವುವು?
1. ಕಲಿಕಾ ಲೈಸನ್ಸ್
2, ಚಾಲನೆ ಸಾಮರ್ಥದ ಪರೀಕ್ಷೆ ಅಗತ್ಯವಿಲ್ಲದವರ ಚಾಲನಾ ಪರವಾನಿಗೆ ನವೀಕರಣ
3. ಚಾಲನಾ ಪರವಾನಿಗೆಯ ನಕಲು
4. ಚಾಲನಾ ಪರವಾನಿಗೆ ಹಾಗೂ ನೋಂದಣಿ ಪ್ರಮಾಣ ಪತ್ರದಲ್ಲಿ ವಿಳಾಸ ಬದಲಾವಣೆ
5. ಅಂತರ್‌ರಾಷ್ಟ್ರೀಯ ಚಾಲನಾ ಪರವಾನಿಗೆ ಒದಗಿಸುವುದು 6. ಪರವಾನಿಗೆ ವಾಪಸಾತಿ
7. ಮೋಟಾರು ವಾಹನಗಳ ತಾತ್ಕಾಲಿಕ ನೋಂದಣಿಗೆ ಅರ್ಜಿ
8, ಸ೦ಪೂರ್ಣವಾಗಿ ಬಾಡಿ ಕಟ್ಟಿದ ಮೊಟಾರು ವಾಹನದ ನೋಂದಣಿ ಅರ್ಜಿ 9. ನೋಂದಣಿ ಪ್ರಮಾಣ ಪತ್ರದ ನಕಲು ಒದಗಿಸಲು ಅರ್ಜಿ
10. ನೋಂದಣಿ ಪ್ರಮಾಣಪತ್ರಕ್ಕೆ  ಎನ್‌ಒಸಿ ಒದಗಿಸಲು ಅರ್ಜಿ
11. ಮೋಟಾರು ವಾಹನದಮಾಲಕತ್ವದ ವರ್ಗಾವಣೆಗೆ ನೋಟಿಸ್
12. ಮೋಟಾರು ವಾಹನದ ಮಾಲಕತ್ವದ ವರ್ಗಾವಣೆಗೆ ಅರ್ಜಿ
13. ನೋಂದಣಿ ಪ್ರಮಾಣ ಪತ್ರ ವಿಳಾಸ ಬದಲಾವಣೆಗೆ ಸೂಚನೆ
14. ಮಾನ್ಯತೆ ಪಡೆದ ಚಾಲಕರ ತರ ಬೇತು ಕೇಂದ್ರದಲ್ಲಿ ಚಾಲಕರ ತರಬೇತಿ ಪಡೆಯಲು ನೋಂದಣಿಗೆ ಅರ್ಜಿ
15. ರಾಜತಾಂತ್ರಿಕ ಅಧಿಕಾರಿಗಳ ಮೋಟಾರು ವಾಹನ ನೊಂದಣಿಗೆ ಅರ್ಜಿ
16. ರಾಜತಾಂತ್ರಿಕ ಅಧಿಕಾರಿಯ ಮೋಟಾರು ವಾಹನಗಳ ಹೊಸ ನೋಂದಣಿ ಗುರುತು ಹಂಚಿಕೆಗೆ ಅರ್ಜಿ
17. ಬಾಡಿಗೆ-ಖರೀದಿ ಒಪ್ಪಂದಕ್ಕೆ ಅನುಮೋದನೆ
18. ಬಾಡಿಗೆ-ಖರೀದಿ ಒಪ್ಪಂದ ರದ್ದು

ಉತ್ತಮ ಆಡಳಿತದ ಖಾತರಿ ನೀಡಲು ಡಿಜಿಟಲ್ ವೇದಿಕೆಯನು ಬಳಸಲು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಎಲ್ಲ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಸುತ್ತೋಲೆ ಹೇಳಿದೆ. ಆನ್‌ಲೈನ್ ಸೇವೆ ಬಯಸುವವರು ಆಧಾರ್‌ ದೃಢೀಕರಣಕ್ಕೆ ಒಳಗಾಗಬೇಕು. ಈ ಆನ್‌ಲೈನ್ ಸೇವೆ ಬಗ್ಗೆ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಅನುಷ್ಠಾನಗೊಳಿಸಿದ ಏಜೆನ್ಸಿ ಮೂಲಕ ಸಂಪರ್ಕ ರಹಿತ ಸೇವೆ ಲಭ್ಯವಾಗಲು ಆಧಾರ್‌ನ ಅಗತ್ಯದ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲು ವೈಯಕ್ತಿಕವಾಗಿ ನೋಟಿಸು ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಈ ಆನ್ ಲೈನ್ ಸೇವೆ 2021 ಮಾರ್ಚ್ 3ರಿಂದ ಅನ್ವಯವಾಗಲಿದೆ. ಆಧಾರ್ ದೃಢೀಕರಣಗೊಳಿಸಿದ ಬಳಿಕ ಜನರಿಗೆ ಎಲ್ಲಾ 18 ಸಂಪರ್ಕ ರಹಿತ ಸೇವೆ ಲಭ್ಯವಾಗಲಿದೆ ಎಂದು ಸುತ್ತೋಲೆ ತಿಳಿಸಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...