ಭಟ್ಕಳದಲ್ಲಿ 3 ಅಂಗಡಿಗಳಲ್ಲಿ ಸರಣಿ ಕಳ್ಳತನ;ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಕಳ್ಳರು

Source: SO NEWS | By MV Bhatkal | Published on 8th September 2021, 11:48 PM | Coastal News | Don't Miss |

ಭಟ್ಕಳ:ನಗರದಲ್ಲಿ ಮಂಗಳವಾರ ರಾತ್ರಿ ಮೂರು ಅಂಗಡಿಗಳನ್ನು ಹಾಗೂ ಒಂದು ಮನೆಯನ್ನು ಹೊಕ್ಕು ಕಳ್ಳತನ ಮಾಡಿರುವ ಕುರಿತು ವರದಿಯಾಗಿದೆ. 
ನಗರ ಮಧ್ಯದಲ್ಲಿರುವ ಮಾರಿಕಟ್ಟೆಯ ಸಮೀಪ ಇರುವ ಬುರ್ಖಾ ಅಂಗಡಿಯ ಶೆಟರ್ ಬೀಗ ಮುರಿದು ಒಳ ಹೊಕ್ಕಿದ್ದ ಕಳ್ಳರು 30 ಸಾವಿರ ರೂಪಾಯಿ ನಗದು, ಬುರ್ಖಾ ಹಾಗೂ ಬೆಲೆ ಬಾಳುವ ಕೆಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ. ಇನ್ನೊಂದು ಅಂಗಡಿಯ ಶಟರ್ ಬೀಗು ಮುರಿದು ಒಳ ಹೊಕ್ಕಿದ್ದು 10 ಸಾವಿರ ನಗದು ಹಾಗೂ ಕೆಲವು ವಸ್ತುಗಳನ್ನು ಕಳವು ಮಾಡಿದ್ದಾರೆ. ಇನ್ನೊಂದು ಅಂಗಡಿ ಬೀಗ ಮುರಿದು ಒಳ ಹೊಕ್ಕಿದ್ದ ಕಳ್ಳರು ಏನೂ ದೊರೆಯದಿದ್ದಾಗ ಪಕ್ಕದಲ್ಲಿಯೇ ಬೀಗ ಹಾಕಿಕೊಂಡಿದ್ದ ಮನೆಯ ಬೀಗ ಮುರಿತು ಒಳ ಹೊಕ್ಕು 10 ಸಾವಿರ ರೂಪಾಯಿ ನಗದು, ಎರಡು  ಚಿನ್ನದ ಚೈನ್, ಮೂರು ಚಿನ್ನದ ಉಂಗುರವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. 
ಸುದ್ದಿ ತಿಳಿದ ತಕ್ಷಣ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಬೆಳಗಿನ ಜಾವ ಸುಮಾರು 3.30 ಗಂಟೆಯ ಸಮಯಕ್ಕೆ ಕಳ್ಳರು ಬೀಗ ಮುರಿದಿದ್ದು ಕೆಲವೊಂದು ಸಿ.ಸಿ. ಕೆಮರಾದಲ್ಲಿ ದಾಖಲಾಗಿದೆ. ತಮಗೆ ಕಂಡ ಕೆಲವು ಸಿ.ಸಿ. ಕೆಮರಾಗಳನ್ನು ತಿರುಗಿಸಿದ್ದರೂ ಸಹ ಕೆಲವು ಕೆಮರಾಗಳಲ್ಲಿ ಕಳ್ಳರ ಚಹರೆ ದಾಖಲಾಗಿದ್ದು ಅವರು ನಡೆಸಿದ್ದ ಕೃತ್ಯವೂ ಕೂಡಾ ಬಯಲಾಗಿದೆ. 
ಮಾರಿಕಟ್ಟೆಯ ಪ್ರದೇಶದಲ್ಲಿರುವ ಅಂಗಡಿಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಸ್ಥಳೀಯವಾಗಿ ಸಂಪೂರ್ಣ ಮಾಹಿತಿ ಇದ್ದವರೇ ಎನ್ನುವುದು ಸ್ಪಷ್ಟವಾಗುತ್ತಿದ್ದು ಪೊಲೀಸರಿಗೆ ಸಿ.ಸಿ. ಟಿ.ವಿ. ದೃಷ್ಯದಲ್ಲಿ ಕೂಡಾ ಕೆಲವೊಂದು ಚಲನವಲನಗಳು ಕಂಡು ಬಂದಿದ್ದರಿಂದ ಪತ್ತೆ ಹಚ್ಚುವುದು ಸುಲಭ ಎನ್ನುವ ಮಾತು ಸಾರ್ವಜನಿಕರಲ್ಲಿ ಕೇಳಿ ಬಂದಿದೆ.  ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ.‌

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...