ಭಟ್ಕಳ ಕೈಕಿಣಿ ಗ್ರಾಮ ಪಂಚಾಯತ ಕಚೇರಿಗೆ ಕನ್ನ

Source: S O News service | By I.G. Bhatkali | Published on 22nd October 2020, 7:53 PM | Coastal News | Don't Miss |

ಭಟ್ಕಳ: ತಾಲೂಕಿನ ಕೈಕಿಣಿ ಗ್ರಾಮ ಪಂಚಾಯತ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಚೇರಿಯ ಬೀಗವನ್ನು ಮುರಿದು ಒಳ ಹೊಕ್ಕಿರುವ ಕಳ್ಳರು ಸಾವಿರಕ್ಕೂ ಹೆಚ್ಚು ನಗದು ಹಣ ಹಾಗೂ ಕಂಪ್ಯೂಟರ್ ಹಾರ್ಡ ಡಿಸ್ಕ್‍ನೊಂದಿಗೆ ಪರಾರಿಯಾಗಿರುವ ಘಟನೆ ಮಂಗಳವಾರ ಸಂಜೆ 5.40ರಿಂದ ಬುಧವಾರ ಬೆಳಿಗ್ಗೆ 8.45ರ ಅವಧಿಯಲ್ಲಿ ನಡೆದಿದೆ.

ಕಳ್ಳರು ಕಚೇರಿಯ ಒಳಗಿನ ಕಪಾಟಿನ ಬಾಗಿಲು ತೆರೆದು ಕಾಗದ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ. ಸಿಬ್ಬಂದಿಯ ಟೇಬಲ್ ಡ್ರಾಅರ್ ಬಾಗಿಲನ್ನು ತೆರೆದು

ಸಿಸಿಟಿವಿಯಲ್ಲಿ ಸೆರೆ:
ಭಟ್ಕಳ ತಾಲೂಕಿನ ಕೈಕಿಣಿ ಗ್ರಾಮ ಪಂಚಾಯತ ಕಚೇರಿ ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ತಡರಾತ್ರಿ 2 ಗಂಟೆಯ ಸುಮಾರಿಗೆ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಪೊಲೀಸರಿಗೆ ತಲೆ ನೋವು ತರಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. 

ಅದರಲ್ಲಿದ್ದ ತೆರಿಗೆ ವಸೂಲು ರು.1474ನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ಪಂಚಾಯತ ಕಾರ್ಯದರ್ಶಿಯ ಕೋಣೆಯಲ್ಲಿದ್ದ ಕಂಪ್ಯೂಟರ್ ಹಾರ್ಡ ಡಿಸ್ಕನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಗ್ರಾಮ ಪಂಚಾಯತ ಸಿಬ್ಬಂದಿಗಳ ಎಲ್ಲ ಟೇಬಲ್‍ಗಳ ಟ್ರಾಅರ್‍ಗಳನ್ನು ತೆರೆದು ಕಳ್ಳರು ಹಣಕ್ಕಾಗಿ ತಡಕಾಡಿರುವುದು ಕಂಡು ಬಂದಿದೆ. ಪಂಚಾಯತ ಕಚೇರಿಯ ಎದುರಿನ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯ ಬಾಗಿಲ ಬೀಗವನ್ನೂ ಮುರಿದು ಕಳ್ಳರು ಕೈಚೆಳಕ ತೋರಿದ್ದಾರೆ. ಈ ಕುರಿತು ಕೈಕಿಣಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಲಂಬೋದರ ಚಂದ್ರಕಾಂತ ಗಾಂವಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Read These Next

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ...

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತ ಜಾರಿಗೆ ತರುತ್ತೇವೆ : ಗೃಹ ಸಚಿವ ಬೊಮ್ಮಾಯಿ.

ಕಾರವಾರ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.