ಶ್ರೀ ದಂಡಿನ ದುರ್ಗಾ ದೇವಸ್ಥಾನದ ಹುಂಡಿಯಿಂದ 2ಸಾವಿರ ರೂ ಕಳುವು; ದೂರು ದಾಖಲು

Source: sonews | By Staff Correspondent | Published on 8th August 2019, 9:11 PM | Coastal News |

ಭಟ್ಕಳ: ಪಟ್ಟಣದ ಕೋಟೇಶ್ವರ ನಗರದ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ವ್ಯಕ್ತಿಯೋರ್ವ ಹಾಡು ಹಗಲೇ ದೇವಸ್ಥಾನದೊಳಗಿನ ಕಾಣಿಕೆ ಕಬ್ಬಿಯನ್ನು ಒಡೆದು ಹಣ ದೋಚಿ ಯತ್ನಿಸಿದ ಕಳ್ಳನೋರ್ವ ಅಂದಾಜು 2 ಸಾವಿರ ರೂ. ದೋಚಿದ್ದಾನೆಂದು ಬುಧವಾರದಂದು ಇಲ್ಲಿನ ನಗರ ಠಾಣೆಯಲ್ಲಿ ಕಳ್ಳತನಗೊಂಡ ಶ್ರೀ ದಂಡಿನ ದುರ್ಗಾ ದೇವಸ್ಥಾನ ಕೋಟೇಶ್ವರ ನಗರದ ಅಧ್ಯಕ್ಷ ಮೋಹನ ಭದ್ರಾ ಶಿರಾಲಿಕರ ದೂರು ನೀಡಿದ್ದಾರೆ.

ಬುಧವಾರದಂದು ಮುಂಜಾನೆ 8ಗಂಟೆಗೆ ಎಂದಿನಂತೆ ದೇವಸ್ಥಾನಕ್ಕೆ ಅರ್ಚಕರು ಬಂದಿದ್ದು ದೇವರ ಪೂಜೆಯನ್ನು 9ಗಂಟೆಗೆ ಮುಗಿಸಿ ಬೇರೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಮೋಹನ ಭದ್ರಾ ಶಿರಾಲಿಕರ 9.30ರ ತನಕ ದೇವಾಲಯದ ಪ್ರಾಂಗಣ ಸ್ವಚ್ಛಗೊಳಿಸಿ ನಂತರ ದೇವಸ್ಥಾನದಿಂದ ತೆರಳಿದ್ದಾರೆ. 

ಇದಾದ ಬಳಿಕ 10.30ರ ಸುಮಾರಿಗೆ ಸ್ಥಳಿಯ ಅಂಗಡಿಕಾರನೋರ್ವ ದೇವಸ್ಥಾನಕ್ಕೆ ಕೈಮುಗಿಯಲು ಬಂದ ವೇಳೆ ಅಪರಿಚಿತ ವ್ಯಕ್ತಿಯೋರ್ವ ದೇವಾಲಯದಿಂದ ವಿಚಿತ್ರವಾಗಿ ಅನುಮಾನಾಸ್ಪದ ರೀತಿಯಲ್ಲಿ ಬಂದಿದ್ದನ್ನು ಗಮನಿಸಿದ್ದಾನೆ. ಈ ವೇಳೆ ಸ್ಥಳಿಯ ಅಂಗಡಿಕಾರ ದೇವಸ್ಥಾನದ ಒಳಗೆ ಹೊಕ್ಕುವ ವೇಳೆ ಕಾಣಿಕೆ ಡಬ್ಬಿ ತೆರೆದಿರುವುದು ಕಂಡು ಬಂದು ಅಪರಿಚಿತ ವ್ಯಕ್ತಿಯೆಡೆಗೆ ನೋಡಿದಾಗ ಹಣದ ದೋಚಿದ ಕಳ್ಳ ಪರಾರಿಯಾಗಿದ್ದಾನೆ. ತಕ್ಷಣಕ್ಕೆ ಅಂಗಡಿಕಾರ ಆತನನ್ನು ಹುಡುಕುಲು ತೆರಳಿದ್ದಾಗ ಸಿಗದ ಹಿನ್ನೆಲೆ ವಾಪಸ್ಸು ದೇವಸ್ಥಾನದತ್ತ ಬಂದಿದ್ದಾನೆ. ದೇವಾಲಯದ ಪ್ರಾಂಗಣದಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ನಂತರ ತಕ್ಷಣಕ್ಕೆ ದೇವಸ್ಥಾನದ ಆಡಳಿತ ಕಮಿಟಿಯವರಿಗೆ ಮಾಹಿತಿ ನೀಡಿದ್ದಾನೆಂದು ದೂರಿನಲ್ಲಿ ಶ್ರೀ ದಂಡಿನ ದುರ್ಗಾ ದೇವಸ್ಥಾನ ಕೋಟೇಶ್ವರ ನಗರದ ಅಧ್ಯಕ್ಷ ಮೋಹನ ಭದ್ರಾ ಶಿರಾಲಿಕರ ಉಲ್ಲೇಖಿಸಿದ್ದಾರೆ.

ಘಟನೆ ತಿಳಿದು ಸ್ಥಳಕ್ಕಾಗಮಿಸಿ ನಗರ ಠಾಣಾ ಅಪರಾಧ ವಿಬಾಗದ ಪಿಎಸೈ ಲಕ್ಕಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು ಬಂದು ಸ್ಥಳಪರಿಶೀಲನೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಕಾಣಿಕೆ ಡಬ್ಬಿಯಿಂದ ದೇವಾಲಯದ ಹೊರಾಂಗಣದ ವರೆಗೆ ರಕ್ತದ ಕಲೆ ಬಿದ್ದಿರುವುದನ್ನು ಗಮನಿಸಿದ ಅವರು ಅದರ ಪರಿಶೀಲನೆ ಕೈಗೊಂಡು ಮಾಹಿತಿ ಕಲೆ ಹಾಕಿದ್ದಾರೆ. 

ಪ್ರಕರಣವನ್ನು ನಗರ ಠಾಣೆ ಅಪರಾಧ ವಿಬಾಗದ ಪಿಎಸೈ ಲಕ್ಕಪ್ಪ ನಾಯ್ಕ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.


 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...