ಯೋಗ ಜಾಗೃತಿಗೆ ಯೋಗ ನಡಿಗೆ-ಮಾನವ ಸರಪಳಿ

Source: so news | By Manju Naik | Published on 19th June 2019, 9:31 PM | State News | Don't Miss |

ಹಾವೇರಿ: ವಿಶ್ವ ಯೋಗ ದಿನದ ಜಾಗೃತಿಗಾಗಿ ನಗರದಲ್ಲಿ ಆಯೋಜಿಸಿದ ಯೋಗನಡಿಗೆ ಹಾಗೂ ಮಾನವಸರಪಳಿ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು. 
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಜಾಗೃತಿಗಾಗಿ ಬುಧವಾರ ಜಿಲ್ಲಾಡಳಿತ ಜಿಲ್ಲಾ ಆಯುಷ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಯೋಜಿಸಿದ ಯೋಗ ನಡಿಗೆ ಕಾರ್ಯಕ್ರಮಕ್ಕೆ ಹೊಸ ಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಲಾಣಾಧಿಕಾರಿ ರಾಘವೇಂದ್ರ ಸ್ವಾಮಿ ಅವರು ಚಾಲನೆ ನೀಡಿದರು
ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನರ್ಸಿಂಗ್ ಹಾಗೂ ಆಯುಷ್ಯ ವೈದ್ಯ ವಿದ್ಯಾರ್ಥಿಗಳು ಯೋಗದ ಮಹತ್ವ ಕುರಿತ ಸಂದೇಶ ಗಳ ಘೋಷಣೆ ಯೊಂದಿಗೆ ಗಮನ ಸೆಳೆದರು. ಕ್ರೀಡಾಂಗಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಕೇಂದ್ರಬಸ್ ನಿಲ್ದಾಣದ ಬಳಿಯ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಯೋಗಾಭ್ಯಾಸ ಮಹತ್ವ ಸಾರಿದರು,ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಿರೋಳ್, ಡಾ.ಜಿ.ಸಿ.ನಿಡಗುಂದಿ, ಡಾ.ಮನೋಜಕುಮಾರ ಇತರರು ಭಾಗವಹಿಸಿದ್ದರು.

Read These Next

ಅಂಜುಮನ್ ಶಿಕ್ಷಣ ಸಂಸ್ಥೆಯ ಸುಪುತ್ರಿ ಶಿರಾಲಿಯ ಡಾ. ಅನಿಸಾ ಶೇಖ್ ಗೆ ದಂತ ವೈದ್ಯಕೀಯದಲ್ಲಿ ಪುರಸ್ಕಾರ

ಭಟ್ಕಳ: ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ‘ದುಖ್ತರ್-ಎ-ಅಂಜುಮನ್(ಅಂಜುಮನ್ ಪುತ್ರಿ) ಪ್ರಶಸ್ತಿ ...