ಮುಂಡಗೋಡ: ಕಾಡು ರಕ್ಷಿಸಿ ಎಂದು ಅರಣ್ಯ ಕಚೇರಿ ಎದುರಿಗೆ ಕರವೆ ಜಿಲ್ಲಾ ಉಪಾಧ್ಯಕ್ಷ ಏಕಾಂಗಿ ಧರಣಿ

Source: Nazir Tadapatri | By S O News | Published on 15th June 2021, 3:49 PM | Coastal News |

ಮುಂಡಗೋಡ: ಅರಣ್ಯಗಳ್ಳರಿಂದ ಕಾಡು ಉಳಿಸಿ ಎಂದು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ(ಪ್ರವೀಣ ಶೆಟ್ಟಿ ಬಣ) ಶಂಶುದ್ದಿನ ಮಾರ್ಕರ ಮುಂಡಗೋಡ ವಲಯ ಅರಣ್ಯ ಕಚೇರಿ ಎದುರಿಗೆ ಏಕಾಂಗಿಯಾಗಿ ಆಗ್ರಹಿಸಿ ಮಳೆಯಲ್ಲಿ ಧರಣಿ ಮಾಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ

ತಾಲೂಕಿನಲ್ಲಿ ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು ಕಾಡುಗಳ್ಳರ ಪಾಲಾಗುತ್ತಿದ್ದರು ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಅಪಾದಿಸಿದ್ದಾರೆ. ಗುಂಜಾವತಿ ಉಪವಲಯ ಅರಣ್ಯ ಪ್ರದೇಶಕ್ಕೆ ದಕ್ಷ ಕರ್ತವ್ಯನಿಷ್ಠ ಅಧಿಕಾರಿಯನ್ನು ನೇಮಿಸಿ. ರಾಜಕೀಯ ಜನರ ಫೋನಗಳಿಗೆ ಹೆದರಿಕೊಳ್ಳುವ ಅಧಿಕಾರಿಗಳು ಇಲ್ಲಿದ್ದರೆ ಕಾಡು, ಕಾಡುಪ್ರಾಣಿ ರಕ್ಷಿಸುವವುರು ಯಾರು. ಗುಂಜಾವತಿ ಭಾಗದಲ್ಲಿ ಅರಣ್ಯ ಅತಿಕ್ರಮಣ ಆಗಿದೆ ದಕ್ಷ ಅಧಿಕಾರಿಗಳನ್ನು ಇಲ್ಲಿ ನೇಮಿಸದೆ ಇದ್ದರೆ ಕೆಲವೆ ದಿನಗಳಲ್ಲಿ ಗುಂಜಾವತಿಯ ಭಾಗದ ಕಾಡು ಸಂಪೂರ್ಣ ನಾಶವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು

ಈ ಕುರಿತು ವಲಯ ಅರಣ್ಯ ಅಧಿಕಾರಿ ಸುರೇಶ ಕುಳ್ಳೊಳ್ಳಿಯವರನ್ನು ಕೇಳಿದಾಗ ಅಪಾದನೆ ಮಾಡಿದಂತೆ ಏನು ನಡೆದಿಲ್ಲಾ ನಡೆಯಲಿಕ್ಕೂ ಬೀಡುವುದಿಲ್ಲ. ಕಾಡು ರಕ್ಷೀಸುವ ಜವಾಬ್ದಾರಿ ನಮ್ಮ ಆದ್ಯ ಕರ್ತವ್ಯ. ಇವರು ಅಪಾದಿಸಿದಂತೆ ನಡೆಯುತ್ತಿದ್ದರೆ ಗುಂಜಾವತಿ ಭಾಗದ ಸಾರ್ವಜನಿಕರು ಸುಮ್ಮನೆ ಇರುತ್ತಿದ್ದರೆ ಎಂದು ಪ್ರಶ್ನೆಸಿದರು. ಗುಂಜಾವತಿ ಉಪವಲಯದಲ್ಲಿ ದಕ್ಷ ಅಧಿಕಾರಿಗಳೇ ಇದ್ದಾರೆ ಎಂದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...