ದಿ. ಚಿರಂಜೀವಿ ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಸರ್ಜಾ ಆಗಮನ. ಅಣ್ಣನ ಮಗುವಿಗೆ ಬೆಳ್ಳಿಯ ತೊಟ್ಟಿಲು ತಂದಿಟ್ಟ ಧ್ರುವ.

Source: SO News | By Laxmi Tanaya | Published on 22nd October 2020, 3:25 PM | State News |

ಬೆಂಗಳೂರು : ಸ್ಯಾಂಡಲವುಡ್ ಆ್ಯಕ್ಟರ್ ದಿ. ಚಿರಂಜೀವಿ ಸರ್ಜಾ  ಕುಟುಂಬಕ್ಕೆ ಜ್ಯೂನಿಯರ್ ಆಗಮನವಾಗಿದೆ. ಸರ್ಜಾ ಪುತ್ನಿ ಮೇಘನಾ ರಾಜ್ ಅವರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕುಟುಂಬಕ್ಕೆ ಗಂಡು ಆಗಮನವಾಗಿರುವುದಕ್ಕೆ  ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಬೆಂಗಳೂರಿನ ಕೆ.ಆರ್. ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ 11.07 ಗಂಟೆ ಸಮಯಲ್ಲಿ ಮೇಘನಾ ಗುಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಬುಧವಾರ ಸಂಜೆಯೆ ಮೇಘನಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. 


ಚಿರಂಜೀವಿ ಸರ್ಜಾ ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಹೊಸ ಕುಡಿಯ ಆಗಮನವಾಗಿರುವುದು  ಸಂತೋಷ ಹೆಚ್ಚಿಸಿದೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ.

ಈಗಾಗಲೇ ಧ್ರುವ ಸರ್ಜಾ ಅಣ್ಣ ಮಗನಿಗಾಗಿ 10 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ತೊಟ್ಟಿಲು ತಂದಿಟ್ಟಿದ್ದಾರೆ. ಹುಟ್ಟಿದ ಗಂಡು ಮಗು ಚಿರಂಜೀವಿ ಪ್ರತಿರೂಪ ಎಂದು ಕುಟುಂಬದವರು ಆಡಿಕೊಳ್ಳುತ್ತಿದ್ದಾರೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...