ಲಂಚ ಸ್ವೀಕರಿಸುವಾಗಲೇ ಎಸಿಬಿ ಬಲೆಗೆ ಬಿದ್ದ ತಲ್ಲೂರು ಪಿಡಿಒ

Source: so news | By Manju Naik | Published on 12th June 2019, 8:13 PM | State News | Don't Miss |

ಶಿವಮೊಗ್ಗ: ನಿವೇಶನ ಪರಿವರ್ತನೆಗೆ ಬುಧವಾರ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ಸೊರಬ ತಾಲೂಕಿನ ತಲ್ಲೂರು ಪಿಡಿಒ ನೀಲಪ್ಪ ಬೂತಣ್ಣವರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಆನವಟ್ಟಿಯ ರೈತ ಶ್ರೀಹರ್ಷ ಎಂಬುವರಿಂದ 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶ್ರೀಹರ್ಷ ತಾಯಿ ರಿಂದವ್ವ ಬಾರಕಿ ಅವರ ಹೆಸರಿನಲ್ಲಿದ್ದ ಸರ್ವೆ ನಂಬರ್ 275/01ರ 8 ಗುಂಟೆ ನಿವೇಶನವನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಾರಂ 9 ಮತ್ತು 11(ಎ)ಯಡಿ ಸಲ್ಲಿಸಿದ್ದರು. ಆದರೆ ಭೂ ಪರಿವರ್ತನೆಗೆ ಪಿಡಿಓ ನೀಲಪ್ಪ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಈ ಬಗ್ಗೆ ಶ್ರೀಹರ್ಷ ಎಸಿಬಿಗೆ ದೂರು ನೀಡಿದ್ದು, ಬುಧವಾರ ಬೆಳಗ್ಗೆ ಶಿವಮೊಗ್ಗ ಎಸಿಬಿ ಡಿವೈಎಸ್ಪಿ ಎಲ್.ವೇಣುಗೋಪಾಲ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. 
ಎಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ, ಎನ್.ರವೀಂದ್ರ, ಸಿಬ್ಬಂದಿಗಳಾದ ವಸಂತ್, ಲಚ್ಚನಾಯ್ಕ, ನಾಗರಾಜ್, ರಘುನಾಯ್ಕ, ಯೋಗೇಶಪ್ಪ, ಹರೀಶ್, ಶ್ರೀನಿವಾಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read These Next

ಚಾಲಕ ಪರವಾನಿಗೆ ಮತ್ತು ಇನ್ಸುರೆನ್ಸ್ ಅದಾಲತ್ ನಡೆಸಬೇಕೆಂದು ರೈತ ಸಂಘದಿಂದ ಆಗ್ರಹ

ಕೋಲಾರ : ಮೋಟರ್ ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರ ನಿಯಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಪ್ರತಿ ...

ಶ್ರೀನಿವಾಸಪುರ:ಆಯಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಪ್ರಚಾರ ಜಾಥಾಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಚಾಲನೆ

ಶ್ರೀನಿವಾಸಪುರ:ಆಯಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಪ್ರಚಾರ ಜಾಥಾಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಚಾಲನೆ