"ಭಟ್ಕಳ ಮಾರುತಿ ನಗರ ಭಾಗದಲ್ಲಿ ಮುಚ್ಚಲ್ಪಟ್ಟ ಚರಂಡಿ-15 ಕ್ಕೂ ಅಧಿಕ ಮನೆಗೆ ನುಗ್ಗಿದ ನೀರು 

Source: sonews | Published on 22nd July 2019, 8:18 PM | Coastal News | Don't Miss |

ಭಟ್ಕಳ: ಮಳೆಯ ಅವಾಂತರದಿಂದ ಇಲ್ಲಿನ ರಾಷ್ಟ್ರೀಯ ಹೆದ್ದಾರಿ -66 ರ ಮಣ್ಕುಳಿ, ಮಾರುತಿ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡ ಕಟ್ಟಡದ ಎದುರಿಗೆ ಚರಂಡಿ ಬ್ಲಾಕ್ ಆಗಿದ್ದರ ಪರಿಣಾಮ ನೀರು ಹರಿದು ಹೋಗದಂತಾಗಿ ಮನೆಗೆ ನೀರು ನುಗ್ಗಿದ್ದು ಸ್ಥಳಿಯರ ಆಕ್ರೋಶಕ್ಕೆ ತಹಸೀಲ್ದಾರ ಸಮಕ್ಷಮದಲ್ಲಿ ಬ್ಲಾಕ ಆದ ಚರಂಡಿಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಯಿತು.
ಇಲ್ಲಿನ ಹೆದ್ದಾರಿ ಪಕ್ಕದ ರಾಘವೇಂದ್ರ ಮಠದ ಬಳಿ ಹೆದ್ದಾರಿ ಅಗಲೀಕರಣದ ವೇಳೆ ಹಳೆ ಕಟ್ಟಡ ನೆಲಸಮಗೊಳಿಸಿದಾಗ ಚರಂಡಿ ಬ್ಲಾಕ್ ಆಗಿದ್ದು, ಇನ್ನು ಕೆಲವು ಕಡೆ ಕಟ್ಟಡ ನಿರ್ಮಾಣದ ಬಳಿಕ ತಿರುಗಾಡಲು ಅನೂಕೂಲವಾಗುವಂತೆ ಮಾಡಿದಾಗ ಚರಂಡಿ ಮುಚ್ಚಲ್ಪಟ್ಟಿದ್ದರಿಂದ ಹೆದ್ದಾರಿ ಪಕ್ಕದ ರಸ್ತೆಯಲ್ಲಿನ ಹೊಸ ಮನೆ, ಅಂಗಡಿಗಳ ಎದುರಿಗೆ ನೀರು ನಿಂತ ಪರಿಣಾಮ 35 ಕ್ಕೂ ಅಧಿಕ ಮನೆಗಳ ಪೈಕಿ 15 ಮನೆಗೆ ನೀರು ನುಗ್ಗಿದೆ.
ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಐ.ಆರ್.ಬಿ. ಕಂಪನಿ ಅಧಿಕಾರಿಯನ್ನು ಕರೆಯಿಸಿ ನೀರು ಹರಿಯುವಿಕೆಗೆ ಅನೂಕೂಲವಾಗುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.
ಈ ಬಗ್ಗೆ ಐ.ಆರ್.ಬಿ. ಕಂಪನಿ ಅವರು ನಮ್ಮ ಸ್ವಾದೀನಕ್ಕೆ ಈ ಜಾಗ ಬಂದಿಲ್ಲ ಈ ಕಾರಣ ಕೆಲಸ ಮಾಡಲು ಆಗಲ್ಲ ಈ ಬಗ್ಗೆ ಸಹಾಯಕ ಆಯುಕ್ತರು, ತಹಸೀಲ್ದಾರ ಅವರ ಸಮಕ್ಷಮದಲ್ಲಿ ಕೆಲಸ ಮಾಡಬಹುದು ಎಂದು ತಿಳಿಸಿದ್ದಾರೆ. ಇದರಿಂದ ಸ್ಥಳೀಯರು ರೊಚ್ಚಿಗೆದ್ದಿದ್ದು ಸ್ಥಳದಿಂದ ತಹಸೀಲ್ದಾರ ಸೇರಿದಂತೆ ಪುರಸಭೆ ಇಂಜಿನಿಯರಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದರು. 
ಸ್ಥಳಕ್ಕೆ ಬಂದ ತಹಸೀಲ್ದಾರಗೆ ಅಂಗಡಿ- ಮನೆಗಳ ಎದುರಿಗೆ ನಿಂತ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ ಸ್ಥಳೀಯರು ತಕ್ಷಣಕ್ಕೆ ಜೆ.ಸಿ.ಬಿ.ಬಳಸಿ ನೀರು ಹರಿದು ಹೋಗುವಂತೆ ಮಾಡಿ ಎಂದು ತಹಸೀಲ್ದಾರರಿಗೆ ಪಟ್ಟು ಹಿಡಿದರು.
ತಹಸೀಲ್ದಾರ ಸಮಕ್ಷಮದಲ್ಲಿ ಅಂಗಡಿ ಮುಂದೆ ನಿಂತ ನೀರು ಜೆ.ಸಿ.ಬಿ. ಬಳಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಯಿತು. ನಂತರ ಸ್ಥಳಕ್ಕೆ ಬಂದ ಸಹಾಯಕ ಆಯುಕ್ತ ಸಾಜಿಧ ಮಹ್ಮದ್ ಮುಲ್ಲಾ ಮಳೆಯ ಪ್ರಮಾಣ ಹೆಚ್ಚಿರುವದರಿಂದ ಮುನ್ನೆಚ್ಚರಿಕೆಯಾಗಿ ಜೆ.ಸಿ.ಬಿ.ಯನ್ನು ಇಲ್ಲಿಯೇ ಇಡುವಂತೆ ಐ.ಆರ್.ಬಿ. ಅಧಿಕಾರಿಗೆ ಸೂಚನೆ ನೀಡಿದ್ದಾರೆ. 
ಈ ಸಂಧರ್ಭದಲ್ಲಿ ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ, ಪುರಸಭೆ ಇಂಜಿನಿಯರ, ಐ.ಆರ್.ಬಿ. ಇಂಜಿನಿಯರ್ ಮಲ್ಲಿಕಾರ್ಜುನ, ಪುರಸಭೆ ವಾರ್ಡ ಮೆಂಬರ್ ಮೋಹನ ನಾಯ್ಕ, ರಾಘವೇಂದ್ರ ದೇವಾಡಿಗ ಹಾಗೂ ಮಣ್ಕುಳಿ, ಮಾರುತಿ ನಗರ ಭಾಗದ ನೂರಾರು ಗ್ರಾಮಸ್ಥರು ಇದ್ದರು. 

Read These Next

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್