ಭಟ್ಕಳದಲ್ಲಿ ಬಕ್ರೀದ್‍ಗಾಗಿ ಸಾವಿರಾರು ಕುರಿಗಳ ಮಾರಾಟ

Source: S.O. News Service | By V. D. Bhatkal | Published on 1st August 2020, 1:30 AM | Coastal News | Special Report |

ಭಟ್ಕಳ: ಕೊರೊನಾ ತಡೆ ಲಾಕ್‍ಡೌನ್ ತೆರವು ಬೆನ್ನಿಗೇ ಭಟ್ಕಳದಲ್ಲಿ ಸಡಗರ ಸಂಭ್ರಮದೊಂದಿಗೆ ಈದ್ ಉಲ್ ಆಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಲು ಇಲ್ಲಿನ ಮುಸ್ಲೀಮ್ ಧರ್ಮೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಸಂಕಷ್ಟ ಕಳಚಿಕೊಂಡು ಸಂತಸ ಹಂಚಿಕೊಳ್ಳುವ ನಿಟ್ಟಿನಲ್ಲಿ ಭಟ್ಕಳ ಪೇಟೆಯ ತುಂಬ ಚಟುವಟಿಕೆ ಜೋರಾಗಿದೆ.

ರಮಜಾನ್ ಮಾಸಾಚರಣೆಯ ನಂತರ ಆಚರಿಸಲಾಗುವ ಈದ್ ಉಲ್ ಫಿತ್ರ್ ಮತ್ತು ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಮುಸ್ಲೀಮರು ವರ್ಷದಲ್ಲಿ

ಕೊರೊನಾ ಇರಲಿ, ಬೇರೆ ಯಾವುದೇ ಕಾಯಿಲೆ ಇರಲಿ ಜನರು ಪರಿಹಾರಕ್ಕಾಗಿ ಅಲ್ಲಾಹುನನ್ನೇ ಪ್ರಾರ್ಥಿಸುತ್ತಾರೆ. ಈಗಿನ ಕೊರೊನಾ ಕಾಲದಲ್ಲಿಯೂ ಸಹಜವಾಗಿ ಧರ್ಮಾಚರಣೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಈ ವರ್ಷ ಜಾನುವಾರು ಮಾರಾಟವೂ ಕಡಿಮೆಯಾಗಿರುವುದರಿಂದ ಕುರಿಗಳ ಮಾರಾಟದಲ್ಲಿ ಏರಿಕೆಯಾಗಿದೆ. 

- ಅರ್‍ಸಲಾನ್ ಮೋಟಿಯಾ, ಮೋಟಿಯಾ ಘೋಟ್ ಫಾರ್ಮ ಮಾಲಕರು, ಭಟ್ಕಳ

ಆಚರಿಸಿಕೊಂಡು ಬಂದಿರುವ ಹಬ್ಬಗಳು. ಕೊರೊನಾ ಕಾಟದಿಂದಾಗಿ ಈ ವರ್ಷ ರಮಜಾನ್ ಉಪವಾಸ ಹಾಗೂ ಈದ್ ಉಲ್ ಫಿತ್ರ್ ಆಚರಣೆ ಮನೆಯನ್ನು ಬಿಟ್ಟು ಹೊರಗೆ ಬಂದಿರಲಿಲ್ಲ. ಮಸೀದಿಗಳಲ್ಲಿ ಪ್ರಾರ್ಥನೆಗೂ ಅವಕಾಶ ಸಿಕ್ಕಿರಲಿಲ್ಲ. ಉಳಿದ ಜನರಂತೆ ಒತ್ತಡದಲ್ಲಿಯೇ ಕಾಲ ಕಳೆದಿದ್ದ ಇಸ್ಲಾಮ್ ಧರ್ಮೀಯರು ಇದೀಗ ಲಾಕ್‍ಡೌನ್ ತೆರವಿನಿಂದಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಹಬ್ಬದ ಸಂಪೂರ್ಣ ಸವಿಯನ್ನು ಸವಿಯಲು ಉತ್ಸುಕರಾಗಿದ್ದಾರೆ. ಪರಿಣಾಮವಾಗಿ ಕಳೆದ 5 ದಿನಗಳ ಅವಧಿಯಲ್ಲಿ ಭಟ್ಕಳ ಪೇಟೆಗೆ ಹಳೆಯ ರಂಗು ಬಂದು ಬಿಟ್ಟಿದೆ. ಬಟ್ಟೆಬರೆ, ದಿನಸಿಗಳಿಂದ ಹಿಡಿದು ಅಲಂಕಾರಿಕಾ ಸಾಮಾನುಗಳವರೆಗೆ ಖರೀದಿ ಕಾರ್ಯದಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕುರಿಗಳ ಭರ್ಜರಿ ವ್ಯಾಪಾರ:
ಬಕ್ರೀದ್ ಹಿನ್ನೆಲೆಯಲ್ಲಿ ಕುರಿಗಳ ವ್ಯಾಪಾರ ಕಸುವು ಪಡೆದುಕೊಂಡಿದೆ. ಪ್ರತಿ ಕುರಿಗೆ 10 ಸಾವಿರದಿಂದ 30 ಸಾವಿರದವರೆಗೂ ಕುರಿಗಳ ದರವನ್ನು ನಿಗದಿಪಡಿಸಲಾಗಿದೆ. ಕಳೆದ 5 ದಿನಗಳ ಅವಧಿಯಲ್ಲಿ ಭಟ್ಕಳ ಪಟ್ಟಣ ಪ್ರದೇಶವೊಂದರಲ್ಲಿಯೇ 2500ಕ್ಕೂ ಹೆಚ್ಚು ಕುರಿಗಳ ಮಾರಾಟವಾಗಿದೆ. ಮುಂದಿನ ಸೋಮವಾರದವರೆಗೂ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇನ್ನೂ 1500ಕ್ಕೂ ಹೆಚ್ಚು ಕುರಿಗಳ ಮಾರಾಟವಾಗುವ ಸಾಧ್ಯತೆ ಇದೆ. ವಿಶೇಷ ಎಂದರೆ ಈ ಬಾರಿ ಭಟ್ಕಳದಲ್ಲಿ ಕುರಿಗಳ ವ್ಯಾಪಾರ ಹಳೆಯ ದಾಖಲೆಯನ್ನೆಲ್ಲ ಮುರಿದು ಹಾಕಿದ್ದು, ಹೆಚ್ಚುಕಡಿಮೆ ರು.1ಕೋ. ವ್ಯಾಪಾರ ವ್ಯವಹಾರದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಒಂದು ಕಡೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವ ಬಯಕೆ, ಇನ್ನೊಂದೆಡೆ ಬಕ್ರೀದ್‍ಗೆ ಬಲಿಯಾಗುತ್ತಿದ್ದ ಜಾನುವಾರುಗಳ ಆಮದು ಕಡಿಮೆಯಾಗಿರುವುದು ಕುರಿಗಳತ್ತ ಜನರು ಒಲವು ತೋರಲು ಕಾರಣ ಎನ್ನುವುದು ಇಲ್ಲಿನ ಜನರ ತರ್ಕವಾಗಿದೆ. 

Read These Next

ಭಟ್ಕಳ ಹಾಡುವಳ್ಳಿಯಲ್ಲಿ ಮಂಗನ ಕಾಟ ತಡೆಗೆ ಆಗ್ರಹಿಸಿ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗಳಿಗೆ ಮನವಿ

ತಾಲೂಕಿನ ಹಾಡುವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಂಗನ ಕಾಟ ವಿಪರೀತವಾಗಿದ್ದು, ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ...

ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆ ವಿರೋಧಿಸಿ ಭಟ್ಕಳದಲ್ಲಿ ಸಿಐಟಿಯು ನಿಂದ ಸರಕಾರಕ್ಕೆ ಮನವಿ

ರಾಜ್ಯ ಸರಕಾರ ಜಾರಿಗೆ ತರುತ್ತಿರುವ ಕರ್ನಾಟಕ ಭೂಸುಧಾರಣಾ ತಿದ್ದುಪಡಿ, ಎಪಿಎಮ್‍ಸಿ ಕಾಯ್ದೆ ತಿದ್ದುಪಡಿ ಹಾಗೂ ಕೈಗಾರಿಕಾ ...

ತಬ್ಲಿಗಿ ವೈರಸ್, ಪಾಕಿಸ್ತಾನಿ ಪಿಶಾಚಿಗಳು: ಕನ್ನಡ ಮಾಧ್ಯಮಗಳ 'ದ್ವೇಷ ಪ್ರೇಮ'ದ ಹಲವು ಮುಖಗಳು

ವಕೀಲರು, ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನೊಳಗೊಂಡ ಸಂಘಟನೆ ‘ದಿ ಕ್ಯಾಂಪೇನ್ ಅಗೇನ್‌ಸ್ಟ್ ಹೇಟ್ ಸ್ಪೀಚ್’ (ಸಿಎಎಚ್‌ಎಸ್) ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...