ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಹಕಾರ ಸಂಘಗಳ ಪಾತ್ರ ಮಹತ್ವ

Source: sonews | By Staff Correspondent | Published on 20th September 2018, 6:51 PM | State News | Don't Miss |

ಅಕ್ಕಿ ಆಲೂರ: ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದ್ದು ,ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಕಾರಿ ರಂಗವನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಸಾಮಾಜಿಕ ಚಿಂತಕ ನ್ಯಾಯವಾದಿ ಯಾಸೀರ ಅರಾಫತ್ ಮಕಾನದಾರ ಕರೆ ನೀಡಿದರು.

ಅವರು ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಅಕ್ಕಿ ಆಲೂರ ಪಟ್ಟಣದ ದಿ,ಆಜಾದ ಅರ್ಬನ ಕೋ ಆಪರೇಟಿವ್ ಕ್ರೆಡಿಟ ಸೋಸಾಯಿಟಿಯ 14 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಣ್ಣ ಹಾಗೂ ಅತಿ ಸಣ್ಣ ವ್ಯಾಪಾರಸ್ಥರು ಹಾಗೂ ಮಧ್ಯಮ ವರ್ಗದವರು ತಮ್ಮ ಆರ್ಥಿಕ ಆಗುಹೋಗುಗಳಿಗೆ ಬಂಡವಾಳಶಾಹಿಗಳಲ್ಲಿ ಅತಿ ಹೆಚ್ಚು ಬಡ್ಡಿ ದರಕ್ಕೆ ಸಾಲವನ್ನು ಪಡೆದು ,ಸಾಲ ಹಾಗೂ ಬಡ್ಡಿಯನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ತಮ್ಮ ವ್ಯಾಪಾರ ವಹಿವಾಟನ್ನು ಬಂದ ಮಾಡಿ ಪರ ಊರುಗಳಿಗೆ ಓಡಿ ಹೋಗುವ ವ್ಯವಸ್ಥ ಹಿಂದೆ ಇತ್ತು , ಈಗ ಸಹಕಾರ ಸಂಘಗಳು ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಹಾಗೂ ಸರಳವಾಗಿ ಸಾಲ ಮರುಪಾವತಿ ಮಾಡುವ ವ್ಯವಸ್ಥೆಯನ್ನು ಮಾಡಿರುವದು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವರದಾನವಾಗಿ ಪರಿಣಮಿಸಿದ್ದು ,ಬಂಡವಾಳಶಾಹಿಗಳ ಕಿರುಕುಳದಿಂದ ಅವರನ್ನು ಪಾರು ಮಾಡಿದಂತಾಗಿದೆ ಎಂದು ಹೇಳಿದರು.

ಸಹಾಕಾರಿ ಸಂಘಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಹಕಾರಿ ಸದಸ್ಯರ ಪಾತ್ರವೂ ಸಹ ಅತಿ ಮುಖ್ಯವಾಗಿದ್ದು , ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡಿ ಸಹಕಾರಿ ಸಂಘಗಳ ಬೆಳವಣಿಗೆಗೆ ಕಾಳಜಿವಹಿಸುವ ಅಗತ್ಯವಿದೆ ಎಂದರು.

ದಿ ,ಆಜಾದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಕರೀಮ ಹುಬ್ಬಳ್ಳಿ ಅಧ್ಯಕ್ಷತೆಯನ್ನು ವಹಿಸಿ ಸಂಘದ 14 ನೇ ವಾರ್ಷಿಕ ವರದಿ ವಾಚನ ಮಾಡಿದರು ಸಂಘದ ನಿರ್ದೇಶಕ ಮೆಹಬೂಬ ಅಲಿ ಬ್ಯಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪಾಧ್ಯಕ್ಷ ಇರ್ಫಾನ್ ಬಂಕಾಪುರ ,ನಿರ್ದೇಶಕರಾದ ಜಾಬೀರ ಪಯಂಖಾನವರ ,ಇಮಾಮ ಜಾಫರ ಹಸನಾಬಾದಿ ,ಮಹ್ಮದ ಸಾಧಿಕ ಅತ್ತಾರ ,ಮಖಬೂಲ ಅಹ್ಮದ ಮುಲ್ಲಾ , ಸುಲ್ತಾನ್ ಓಣಿಕೇರಿ ಮುಂತಾದವರು ವೇದಿಕೆಯ ಮೇಲಿದ್ದರು .

 ಫಯಾಜ ಅಹ್ಮದ ಹಸನಾಬಾದಿ ಪ್ರಾರ್ಥಿಸಿದರು ,ಬ್ಯಾಂಕಿನ ಕಾರ್ಯದರ್ಶಿ ನಿಯಾಜ ಅಹ್ಮದ ಆಡೂರ ಸ್ವಾಗತಿಸಿದರು, ರಿಯಾಜ ಅಹ್ಮದ ಹಾವಣಗಿ ವಂದಿಸಿದರು ,ರಮೇಶ ಬುಡ್ಡನವರ ನಿರೂಪಿಸಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...