ಜಾನುವಾರು ಕಳ್ಳರನ್ನು ಹಿಡಿದ ಸಾರ್ವಜನಿಕರು

Source: sonews | By Staff Correspondent | Published on 28th February 2020, 6:58 PM | Coastal News | Don't Miss |

ಭಟ್ಕಳ: ರಾತ್ರಿವೇಳೆ ರಸ್ತೆಯಲ್ಲಿ ಮೇಯುತ್ತಿರುವ ಜಾನುವಾರುಗಳನ್ನು ಕದ್ದು ಕಸಾಯಿಕಾನೆಗೆ ಸಾಗಿಸುವ ದಂಧೆ ಭಟ್ಕಳ ಹಾಗೂ ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು ಗುರುವಾರ ರಾತ್ರಿ ಸಾರ್ವಜನಿಕರೇ ಗೋಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹೊನ್ನಾವರ ತಾಲೂಕಿನ ಮಂಕಿ ಯಲ್ಲಿ ಜರಗಿದೆ. 

ಈ ಕುರಿತಂತೆ ಸಾರ್ವಜನಿಕರು ಗೋಕಳ್ಳರನ್ನು ಹಿಡಿದು ಥಳಿಸುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ವತಃ ಗೋಕಳ್ಳರು ಯಾವ ರೀತಿಯಲ್ಲಿ ತಾವು ದನಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎನ್ನುವುದನ್ನು ವಿಡೀಯೊದಲ್ಲಿ ಹೇಳುತ್ತಿದ್ದಾರೆ. 

ಗೋಕಳ್ಳರು ಭಟ್ಕಳ ಮೂಲದವರು ಎಂದು ತಿಳಿದುಬಂದಿದ್ದು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳಸಾಗಾನೆಗಾಗಿ ಬಳಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...