ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೂತನ ಕಾರ್ಯಾಲಯ ಉದ್ಘಾಟನೆ

Source: so news | By MV Bhatkal | Published on 17th May 2019, 1:12 AM | Coastal News |

ಭಟ್ಕಳ: ಅರಣ್ಯಭೂಮಿ ಹಕ್ಕು ಕೊಡುವುದು ಭಿಕ್ಷೆಯಾಗಲೀ, ದಾನವಾಗಲೀ ಅಲ್ಲ. ಅರಣ್ಯ ಭೂಮಿ ಅವಲಂಬಿತ ಕುಟುಂಬಗಳಿಗೆ ಭೂಮಿಯ ಹಕ್ಕನ್ನು ಕೊಡುವುದು ಸಂವಿಧಾನ ಬದ್ಧವಾದ ಹಕ್ಕು. ಅರಣ್ಯ ಸಾಗುವಳಿ ಹಕ್ಕಿನಿಂದ ಅರಣ್ಯವಾಸಿಗಳು ವಂಚಿತರಾಗಬಾರದು ಎಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನೂತನ ಕಾರ್ಯಾಲಯವನ್ನು ಸ್ಥಳಿಯ ಹೊಟೆಲ್ ಸತ್ಕಾರದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಅರಣ್ಯವಾಸಿಗಳು ಅರಣ್ಯಭೂಮಿಯ ಹಕ್ಕನ್ನು ಪಡೆದುಕೊಳ್ಳುವುದು ಅನಿವಾರ್ಯ. ಕಂದಾಯಭೂಮಿ ಪ್ರಮಾಣ ಕಡಿಮೆ ಇರುವುದರಿಂದ ಜಿಲ್ಲೆಯ ಜನತೆ ತಲ ತಲಾಂತರದಿಂದ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿಗೆ ಅವಲಂಭಿತವಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳುತ್ತಾ, 28 ವರ್ಷ ಸಾಂಘಿಕ ಹೋರಾಟದೊಂದಿಗೆ ಮುಂಬರುವ ದಿನಗಳಲ್ಲಿ ಪರಿಣಾಮಕಾರಿ ಕಾನೂನಾತ್ಮಕ ಹೋರಾಟ ಹೋರಾಟಗಾರರ ವೇದಿಕೆಯು ದಿಟ್ಟ ಹೆಜ್ಜೆಯನ್ನಿಡುತ್ತದೆ ಎಂದು ಹೇಳಿದರು.
ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಭಟ್ಕಳ ತಾಲೂಕಿನಲ್ಲಿ 8819 ಅರ್ಜಿಗಳು ಬಂದಿದ್ದು 6961 ಅರ್ಜಿಗಳು ತಿರಸ್ಕಾರವಾಗಿದ್ದು ಕೇವಲ 217 ಹಕ್ಕುಪತ್ರ ದೊರಕಿರುವುದು ವಿಷಾದಕರ. ಅರಣ್ಯವಾಸಿಗಳಿಗೆ ನೇರವಾಗಿ ಸುಲಭದಲ್ಲಿ ಸಂಪರ್ಕ, ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಹೋರಾಟ ವೇದಿಕೆಯು ಕಚೇರಿಯನ್ನು ಪ್ರಾರಂಭಿಸಿದ್ದು ಅರಣ್ಯವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ತಾಲೂಕಾ ಅಧ್ಯಕ್ಷ ರಾಮಾ ಮೊಗೇರ ಮಾತನಾಡುತ್ತಾ ಸಂಘಟನೆಗೆ ಶಕ್ತಿ ಕೊಡುವ ದಿಶೆಯಲ್ಲಿ ಎಲ್ಲಾ ಅರಣ್ಯ ಅತಿಕ್ರಮಣದಾರರು ಹೋರಾಟಕ್ಕೆ ಬೆಂಬಲಿಸಬೇಕೆಂದು ತಾಲೂಕಿನಾದ್ಯಂತ ಹೋರಾಟ ಸಮಿತಿಗಳನ್ನು ರಚನಾತ್ಮಕ ಮತ್ತು ಕ್ರಿಯಾತ್ಮಕವಾಗಿ ಸಂಘಟನೆಗಳನ್ನು  ರಚಿಸಿ ಬಲಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿ ಪರ:ಅರಣ್ಯ ಹಕ್ಕು ಕಾಯಿದೆಯು ಅರಣ್ಯವಾಸಿಗಳ ಪರವಾಗಿದ್ದು ಆಡಳಿತಾತ್ಮಕ ಮತ್ತು ಕಾನೂನಾತ್ಮಕವಾಗಿ ಅಧಿಕಾರಿ ವರ್ಗದವರ ಸ್ವ ಸೃಷ್ಟೀಕೃತ ಗೊಂದಲದಿಂದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ವೈಫಲ್ಯತೆ ಉಂಟಾಗಿದ್ದು ಇರುತ್ತದೆ. ಇಂದಿನವರೆಗೆ ಜಿಲ್ಲೆಯಲ್ಲಿ ಬುಡಕಟ್ಟು, ಪಾರಂಪರಿಕ ಮತ್ತು ಸಮೂಹ ಉದ್ದೇಶಕ್ಕೆ ಕೇವಲ 1807 ಸಾಗುವಳಿ ಹಕ್ಕು ಪತ್ರ ದೊರಕಿದ್ದು ಉಳಿದ ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆ ಸಂಚಾಲಕರುಗಳಾದ ಪಾಂಡುರಂಗ ನಾಯ್ಕ, ದೇವರಾಜ ಗೊಂಡ, ರಿಜ್ವಾನ್ ಶೇಖ, ಸುಲೇಮಾನ್ ಶೇಖ, ಶಿವು ಮರಾಠಿ, ಮಹಾದೇವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...