ವ್ಯಕ್ತಿ ಕಾಣೆಯಾಗಿದ್ದಾರೆ; ಪೋಲೀಸ್ ಪ್ರಕಟಣೆ

Source: sonews | By Staff Correspondent | Published on 17th August 2019, 10:23 PM | Coastal News | State News | Don't Miss |

ಕಾರವಾರ: ಕಾರವಾರ ತಾಲೂಕಿನ ಅಂಬೆಜೂಗ್ ಕಿನ್ನರದ ನಿವಾಸಿ ಮಾರುತಿ ನೇಮಾ ತಳೇಕರ ಎಂಬುವವರು ಕಾಣೆಯಾಗಿರುವ ಬಗ್ಗೆ ಪತ್ನಿ ಅನಿತಾ ಮಾರುತಿ ತಳೇಕರ್ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
      
ಮಾರುತಿ ತಳೇಕರ್ (55) ವೃತ್ತಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಆಗಸ್ಟ್ 4 ರಂದು ಗೋವಾದಿಂದ ಅಂಬೇಜೂಗ್ ಕಿನ್ನರದಲ್ಲಿರುವ ತನ್ನ ಸ್ವಂತ ಮನೆಗೆ ಬಂದು, ಮರಳಿ ಆಗಸ್ಟ್ 6 ರಂದು ಗೋವಾದಲ್ಲಿರುವ ಮಗನ ಹತ್ತಿರ ಹೋಗುತ್ತೇನೆಂದು ಹೇಳಿಹೋದವರು ಕಾಣೆಯಾಗಿರುತ್ತಾರೆ.

ಗೋಲು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದ ಅವರ ಮೂಗಿನ ಮೇಲೆ ಹಳೆ ಗಾಯದ ಕಲೆ ಇದ್ದು, ಬಿಳಿ ಮಿಶ್ರಿತ ಕಪ್ಪು ತಲೆಕೂದಲು ಇರುತ್ತದೆ. ಸುಮಾರು 5.10 ಅಡಿ ಎತ್ತರವಿದ್ದು, ನೇರಳೇ ಬಣ್ಣದ ಪೂರ್ಣ ತೋಳಿನ ಶರ್ಟ್, ಕಪ್ಪು ಬಣ್ಣದ ಹಾಫ್ ಪ್ಯಾಂಟ್ ಧರಿಸಿರುತ್ತಾರೆ. 

ಕೊಂಕಣಿ, ಕನ್ನಡ ಮತ್ತು ಹಿಂದಿ ಮಾತನಾಡುವ ಈ ವ್ಯಕ್ತಿಯ ಬಗ್ಗೆ ಮಾಹಿತಿ ಲಭಿಸಿದ್ದಲ್ಲಿ ಕಾರವಾರ ಗ್ರಾಮೀಣ ಪೋಲೀಸ್ ಠಾಣೆ ದೂರವಾಣಿ ಸಂಖ್ಯೆ : ಮೊ : 9480805262, 08382-222443, ಕಾರವಾರ ಪೋಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ : 08382- 225337, ಮೊ : 9480805230 ಮತ್ತು ಉತ್ತರ ಕನ್ನಡ ಜಿಲ್ಲಾ ಪೋಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ : 08382-226550 ಸಂಪರ್ಕಿಸಲು ಕಾರವಾರ ಗ್ರಾಮೀಣ ಪೋಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next