ಗ್ರಂಥಾಲಯ ಸಪ್ತಾಹದಿಂದ ಸಾರ್ವಜನರಲ್ಲಿ ಜಾಗೃತಿ ಮೂಡಲಿದೆ- ದಿನಕರ ಬಾಬು

Source: so news | Published on 17th November 2019, 11:45 PM | Coastal News | Don't Miss |


ಉಡುಪಿ: ಭಾರತ ಅನಾದಿ ಕಾಲದಿಂದಲೂ ಗ್ರಂಥಾಲಯಗಳನ್ನು ಹೊಂದಿದ್ದ ದೇಶ, ಈ ದೇಶದ ಗ್ರಂಥಾಲಯ ಪರಂಪರೆಯಲ್ಲಿ ಋಷಿ-ಮುನಿಗಳ ಪಾತ್ರ ಬಹಳ ಮಹತ್ವದಾಗಿದ್ದುದರಿಂದ ಇದು ಜ್ಞಾನ ಸಂಪನ್ನವಾದ ದೇಶ. ಜಿಲ್ಲೆಯಲ್ಲಿ ಡಿಜಿಟಲ್ ಗ್ರಂಥಾಲಯಗಳ ಬಗ್ಗೆ ಮಾಹಿತಿ ನೀಡುವಂತ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಹೇಳಿದರು.
 ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಡಿಜಿಟಲ್ ಗ್ರಂಥಾಲಯಗಳ ಮಹತ್ವ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ, ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಂಥಾಲಯಗಳು ಸಹಕಾರಿ. ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸಮಯದಲ್ಲಿ ಸ್ವಲ್ಪ ಬದಲಾವಣೆಗಳನ್ನು ತಂದುಕೊಂಡು ದಿನದಲ್ಲಿ ಹೆಚ್ಚು ಹೊತ್ತು ತೆರೆದಿರಬೇಕು. ರಜಾದಿನಗಳಲ್ಲಿಯೂ ಗ್ರಂಥಾಲಯಗಳನ್ನು ತೆರೆಯುವಂತಿದ್ದರೆ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಉಪಯೋಗವಾಗುವುದು. ಗ್ರಂಥಾಲಯಗಳಲ್ಲಿರುವ ಸವಲತ್ತು  ಮತ್ತು ಸಿಬ್ಬಂದಿ ಕೊರತೆಗೆ ಮುಕ್ತಿ ಹಾಡಲಾಗಿದ್ದು, ಸಾರ್ವಜನಿಕರು ತಮ್ಮ ಬಿಡುವಿನ ಅವಧಿಯಲ್ಲಿ ಗ್ರಂಥಾಲಯಗಳಿಗೆ ತೆರಳಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು. 
 ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಿ ಮಾತನಾಡಿದ ಶಾಸಕ ರಘುಪತಿ ಭಟ್, ಗ್ರಂಥಾಲಯಗಳು ನಿರ್ಲಕ್ಷ್ಯ ಮಾಡಲ್ಪಟ್ಟಂತಹ ವಿಭಾಗಗಳಾಗಿವೆ, ವಾಸ್ತವವಾಗಿ ಗ್ರಂಥಾಲಯಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಗ್ರಂಥಾಲಯಗಳ ಡಿಜಿಟಲೀಕರಣ, ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣದಂತಹ ಕೆಲಸಗಳು ನಡೆಯುತ್ತಿರುವುದು ಖುಷಿಯ ವಿಚಾರ. ಇದಕ್ಕೆ ಸರಕಾರದ ಬೆಂಬಲದ ಜೊತೆಗೆ ಸಾರ್ವಜನಿಕರ ಪೆÇ್ರೀತ್ಸಾಹವೂ ಬೇಕು.  ಓದುವ ಹವ್ಯಾಸವನ್ನು ಹೊಂದಿರುವವರು ಜ್ಞಾನವನ್ನು ಹೊಂದಿರುತ್ತಾರೆ, ಹಾಗಾಗಿ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಒಳ್ಳೆಯ ಕಥೆ-ಕಾದಂಬರಿಗಳನ್ನು ಓದುವ ಪ್ರವೃತ್ತಿಯನ್ನು ಮನೆಯ ಹಿರಿಯರು ಬೆಳೆಸಬೇಕು ಎಂದು ಅವರು ಹೇಳಿದರು.  
 ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಸಾಕಷ್ಟು ಪ್ರಮಾಣದಲ್ಲಿ ಓದುಗರಿಲ್ಲದೆ ಗ್ರಂಥಾಲಯಗಳು ಇಂದು ಸ್ಮಾರಕಗಳಾಗುತ್ತಿವೆ. ಗ್ರಂಥಾಲಯಗಳು ಸ್ಮಾರಕಗಳ ಪಟ್ಟಿಗೆ ಸೇರಿದರೆ ಸಮಾಜದ ನೈತಿಕ ಅಧಃಪತನ ಖಂಡಿತ. ಒಬ್ಬ ಒಳ್ಳೆಯ ಬರಹಗಾರ ಅಥವಾ ಭಾಷಣಕಾರನಾಗಬೇಕಾದರೆ ವಿಷಯದ ಮೇಲೆ ಹಿಡಿತ ಇರಬೇಕಾದದ್ದು ಅವಶ್ಯ. ಅಂತಹ ಹಿಡಿತ ಸಿಗಬೇಕಾದರೆ ಸರಿಯಾದ ಮಾಹಿತಿ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ ಮಾಹಿತಿಗಳು ತಪ್ಪಿನಿಂದ ಕೂಡಿರುತ್ತವೆ, ಇದರಿಂದ ಅರೆಬೆಂದ ಜ್ಞಾನವμÉ್ಟ ದೊರಕಲು ಸಾಧ್ಯ. ವಿದ್ಯಾರ್ಥಿಗಳು ಇಂತಹ ತಾಣಗಳ ಮೊರೆ ಹೋಗದೆ, ದಿನಪತ್ರಿಕೆ, ಮ್ಯಾಗಜೀನ್ ಮತ್ತು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು ಗ್ರಂಥಾಲಯಗಳಿಗೆ ತೆರಳಿ ಹೆಚ್ಚು ಸಮಯವನ್ನು ಹೂಡಿಕೆ ಮಾಡಿದಲ್ಲಿ, ಜೀವನದಲ್ಲಿ ಸಾಧನೆ ಮಾಡಿ ಯಶಸ್ಸು ಕಂಡುಕೊಳ್ಳಬಹುದು. ದಿನನಿತ್ಯದ ವೇಳಾಪಟ್ಟಿಯಲ್ಲಿ ಎμÉ್ಟೀ ಕಾರ್ಯದೊತ್ತಡವಿದ್ದರೂ ಸ್ವಲ್ಪ ಹೊತ್ತು ಓದಿಗೆ ಮೀಸಲಿಡುವ ತಮ್ಮ ಹವ್ಯಾಸದಂತೆಯೆ ವಿದ್ಯಾರ್ಥಿಗಳು ಕೂಡಾ ಓದುವುದನ್ನು ದೈನಂದಿನ ಜೀವನದ ಭಾಗವಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಡುಪಿ ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು.
ಡಿಜಿಟಲ್ ಗ್ರಂಥಾಲಯಗಳ ಮಹತ್ವದ ಬಗ್ಗೆ ಎಮ್.ಜಿ.ಎಮ್ ಕಾಲೇಜಿನ ಪ್ರಾಧ್ಯಾಪಕ ಪೆÇ್ರ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಪನ್ಯಾಸ ನೀಡಿದರು. 
ಗ್ರಂಥಾಲಯ ಇಲಾಖೆಯ ನಿವೃತ್ತ ಸಿಬ್ಬಂದಿ ಮಹಾಬಲ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕುಮಾರಿ ದಿಶಾ ರಾವ್ ಅವರಿಂದ ವೀಣಾವಾದನ ಕಾರ್ಯಕ್ರಮ ನಡೆಯಿತು.  
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಸ್ವಾಗತಿಸಿದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕಿ ಸೌಜನ್ಯ ನಿರೂಪಿಸಿದರು. ಶಕುಂತಲ ಕುಂದರ್ ವಂದಿಸಿದರು.

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...