ಕೊವಿಡ್ ಲಸಿಕಾ ಮೇಳ ಭರ್ಜರಿ ಯಶಸ್ವಿ.

Source: SO News | By Laxmi Tanaya | Published on 17th September 2021, 11:51 PM | State News | Don't Miss |

ಹಾಸನ :  ಜಿಲ್ಲೆಯಲ್ಲಿ ಕೊವೀಡ್  ಲಸಿಕಾ ಮೇಳ ಭರ್ಜರಿಯಾಗಿ ಯಶಸ್ವಿಗೊಂಡಿದೆ.
 ಒಂದೇ ದಿನ‌ ಸುಮಾರು 90 ಸಾವಿರ ಮಂದಿಗೆ  ಲಸಿಕೆ ಹಾಕುವ ಮೂಲಕ‌ ಹೊಸ ದಾಖಲೆ‌ ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೊದಿ ಅವರ ಜನ್ಮ ದಿನದ ಅಂಗವಾಗಿ ಶುಕ್ರವಾರ ಸರ್ಕಾರ ರಾಜ್ಯಾದ್ಯಂತ 30 ಲಕ್ಷ ಮಂದಿಗೆ ಲಸಿಕೆ ಹಾಕುವ ಉದ್ದೇಶದೊಂದಿಗೆ  ಜಿಲ್ಲೆಗೆ 80 ಸಾವಿರ ಲಸಿಕೆ ಗುರಿ ನಿಗಧಿ ಪಡಿಸಿತ್ತು. ಆದರೆ ಜಿಲ್ಲೆಯಾದ್ಯಂತ  ಸಂಜೆ 8 ಗಂಟೆ ವೆಳೆಗೆ 92ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ‌ ಹಾ ಕುವ ಮೂಲಕ ಶೇ 115 ರಷ್ಟು ಸಾಧನೆಯೊಂದಿಗೆ  ಪ್ರಶಂಸೆಗೆ ಪಾತ್ರವಾಗಿದೆ.

ಹಾಸನ ಜಿಲ್ಲೆ ಇಂದಿನ ಲಸಿಕಾ ಕಾರ್ಯದಲ್ಲಿ 5ನೇ ಸ್ಥಾನ  ಪಡೆದಿದೆ.  ‌ಬೆಂಗಳೂರು‌ ನಗರ ಶೇ 132 ರಷ್ಟು ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು,ಶಿವಮೊಗ್ಗ, ರಾಮನಗರ, ಧಾರವಾಡ ನಂತರದ ಸ್ಥಾನದಲ್ಲಿವೆ .
 ಬೃಹತ್ ಲಸಿಕಾ ಮೇಳಕ್ಕೆ ಜಿಲ್ಲೆಯಲ್ಲಿ ವ್ಯವಸ್ಥಿತ ಸಿದ್ದತೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಅರ್. ಗಿರೀಶ್ ಹಲವು ಸುತ್ತಿನ ಸಭೆ ನಡೆಸಿ , ಖಾಸಗಿ‌ ಆಸ್ಪತ್ರೆ, ಸಂಘ ಸಂಸ್ಥೆಗಳ ನೆರವನ್ನು ಪಡೆದು ಪೊಲಿಯೊ ಲಸಿಕಾ ಮಾದರಿಯಲ್ಲಿ ಕೊವಿದ್ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿತ್ತು .

ಹಳ್ಳಿ ಹಳ್ಳಿಗಳಲ್ಲಿ ನಡೆದ ಕೊವೀಡ್ ಲಸಿಕಾ ಕಾರ್ಯ ದಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಣೆಯಿಂದ ಪಾಲ್ಹೊಂಡು ಯಶಸ್ಸು ಗೊಳಿಸಿದರು. ಜಿಲ್ಲಾಡಳಿತ ಮಾಡಿದ್ದ ಅಚ್ಚುಕಟ್ಟಾದ ವ್ಯವಸ್ಥೆ ಪ್ರಶಂಸೆ ವ್ಯಕ್ತಪಡಿಸಿದರು.

 ಜಿಲ್ಲಾಧಿಕಾರಿ, ಸಿ.ಇ.ಒ ಅಭಿನಂದನೆ:
ಕೊವಿದ್ ಲಸಿಕಾ ಮೇಳ‌ ಯಶಸ್ಸಿಗೆ ಶ್ರಮಿಸಿದ  ಜಿಲ್ಲೆಯ ಒಂದು ಎಲ್ಲಾ ಅಧಿಕಾರಿಗಳು  , ವೈದ್ಯರು, ಲಸಿಕಾ ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅರ್ ಗಿರೀಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ‌ ಅಧಿಕಾರಿ ಬಿ‌. ಎ ಪರಮೇಶ್ ಅಭಿನಂದಿಸಿದ್ದು, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸತೀಶ್ ,ಜಿಲಾ ಶಸ್ತ್ರಚಿಕಿತ್ಸಕರಾದ ಕೃಷ್ಣಮೂರ್ತಿ , ಹಿಮ್ಸ್ ನಿರ್ದಶಕರಾದ ಡಾ ರವಿ ಕುಮಾರ್ ಹಾಗೂ ಅರೊಗ್ತ ಇಲಾಖೆ ಅಧಿಕಾರಿ ಸಿಬ್ಬಂದಿ ಒಂದು ತಂಡವಾಗಿ ಶ್ರಮಿಸಿದ್ದಾರೆ. ತಾಲ್ಲೂಕು ವೈದ್ಯಾಧಿಕಾರಿಗಳು ನಗರಸಭೆ ಆಯುಕ್ತರು, ನಗರ ,ಗ್ರಾಮ‌ ಸ್ಥಳೀಯ ಸಂಸ್ಥೆ ಅಧಿಕಾರಿ ಸಿಬ್ಬಂದಿ ಲಸಿಕಾ ಮೇಳ ಯಸಸ್ಸಿಗೆ ಶ್ರಮಿಸಿದ್ದಾರೆ. ಇನ್ನೂ ಲಸಿಕಾ ಕಾರ್ಯ ಪ್ರಗತಿಯಲ್ಲಿದ

Read These Next

ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕ್ರೀಡಾಕೂಟ. ಧಾರವಾಡ ಜಿಲ್ಲಾ ನೌಕರರ ಉತ್ತಮ ಸಾಧನೆ.

ಧಾರವಾಡ : 2021ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೂರು ದಿನಗಳ ಕಾಲ ...

ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕ್ರೀಡಾಕೂಟ. ಧಾರವಾಡ ಜಿಲ್ಲಾ ನೌಕರರ ಉತ್ತಮ ಸಾಧನೆ.

ಧಾರವಾಡ : 2021ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೂರು ದಿನಗಳ ಕಾಲ ...

ಅ.28 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತೆಗಳ ಗಾಯನ : ಸಚಿವ ವಿ. ಸುನೀಲ್ ಕುಮಾರ್

ಅಕ್ಟೋಬರ್ 28ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ...