ಕೋಲಾರ: ಕೋವಿಡ್ ಮೂರನೇ ಆಲೆ. ಸಾರ್ವಜನಿಕರು ಕೋವಿಡ್ ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Source: Shabbir Ahmed | By S O News | Published on 5th August 2021, 10:12 PM | State News |

ಕೋಲಾರ: ಕೋವಿಡ್ ಮೂರನೇ ಆಲೆ ಪ್ರಾರಂಭವಾಗಲಿದ್ದು ಸಾರ್ವಜನಿಕರು ಕೋವಿಡ್ ನಿಯಂತ್ರಣಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತಾಗಬೇಕು. ಸಾರ್ವಜನಿಕರು ಅರೋಗ್ಯ ಸಂರಕ್ಷಣೆಯ ಕ್ರಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಿದಾಗ ಮಾತ್ರ ಕೋವಿಡ್ ಮೂರನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಮೈಸೂರು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ಶಾಸ್ತ್ರದ ಮುಖ್ಯಸ್ಥ ಹಾಗೂ ಸಲಹೆಗಾರರಾದ ಡಾ.ಸತ್ಯನಾರಾಯಣ ಅಭಿಪ್ರಾಯಪಟ್ಟರು.

    ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಣಿಪಾಲ್ ಆಸ್ಪತ್ರೆಯ ಕೋವಿಡ್ ಮತ್ತು ಪೋಸ್ಟ್ ಕೋವಿಡ್ ನಿರ್ವಹಣೆ ಕುರಿತು ಆಯೋಜಿಸಿದ್ದ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾರ್ವಜನಿಕರು ಕೋವಿಡ್ ನಿಯಂತ್ರಣದ ಲಸಿಕೆಯನ್ನು ಪಡೆದರೂ ಸಹ ಕೊರೋನಾ ನಿಯಂತ್ರಣದ ನಿಯಮಗಳನ್ನು ನಿರ್ಲಕ್ಷಿಸಿದರೆ ಸೊಂಕು ತಗುಲುವ ಸಾಧ್ಯತೆ ಇದೆಯಾದರೂ ಜೀವಹಾನಿ ಸಂಖ್ಯೆ ತೀರಾ ಕಡಿಮೆ ಎಂದು ತಿಳಿಸಿದರು.

    ಕೋವಿಡ್ ಸೊಂಕಿನಿಂದ ಚಿಕಿತ್ಸೆ ಪಡೆದು ವಾಸಿಯಾಗಿದ್ದರೂ ಸಹ ಉಸಿರಾಟದ ಸಮಸ್ಯೆಗಳು ಸೇರಿದಂತೆ, ಕೋವಿಡ್ ನಂತರದ ಗೊಂದಲಗಳಿಂದ ಬಳಲುತ್ತಿರುವುದು ಕಂಡು ಬಂದಿದೆ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆದ ನಂತರ ಕೆಮ್ಮು, ಶ್ವಾಸಕೋಶದಲ್ಲಿ ಊರಿ, ಅಪೌಷ್ಠಿಕತೆ ,ಮಾನಸಿಕವಾಗಿ ಖಿನ್ನತೆ ಮುಂತಾದ ಸಮಸ್ಯೆಗಳು ಅದಕ್ಕೆ ಪರಿಹಾರ ಮುನ್ನೆಚ್ಚರಿಕ ಕ್ರಮಗಳಲ್ಲಿ ಮಾಸ್ಕ್ ಬಳಕೆಗೆ ಹೆಚ್ಚು ಅದ್ಯತೆ ನೀಡ ಬೇಕೆಂದು ವಿವರಿಸಿದರು.

    ರೂಪಾಂತರಿ ವೈರಸ್‍ಗಳಿಂದ ನಿರೀಕ್ಷಿಸಲಾಗದಷ್ಟು ದುಷ್ಟಪರಿಣಾಮದ ಸಾಧ್ಯತೆಗಳಿದೆ. ಸೊಂಕು ತಗುಲಿದ 12 ಗಂಟೆಯ ಒಳಗೆ ವೈರಸ್‍ನ್ನು ದೇಹದಿಂದ ಹೊರಹಾಕುವಂತ ಪ್ರತಿರೋಧಕ ಶಕ್ತಿಗಳನ್ನು ವೃದ್ದಿಸಿ ಕೊಳ್ಳ ಬೇಕು. ಪ್ರಾರಂಭಿಕ ಗುಣ ಲಕ್ಷಣಗಳು ಕಾಣಿಸಿ ಕೊಂಡಾಗಲೇ ವೈದ್ಯರನ್ನು ಭೇಟಿ ಮಾಡಿ, ಹೃದಯ ಶ್ವಾಸಕೋಶಗಳ ವ್ಯಾಯಮ, ಮಾನಸಿಕ ಸಮಾಲೋಚನೆ, ಪೌಷ್ಠಿಕಾಂಶದ ಅರೈಕೆ ಸೇರಿದಂತೆ ಹಲವು ಸಲಹೆಗಳನ್ನು ಪಡೆದು ಪಾಲಿಸಿದಾಗ ಮಾತ್ರ ಶೀಘ್ರವಾಗಿ ಗುಣಮುಖರಾಗಲು ಸುಲಭವಾಗಲಿದೆ ಎಂದು ಹೇಳಿದರು.

    ಕಾರ್ಯಕ್ರಮವನ್ನು ಉದ್ಗಾಟಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ತುರ್ತು ಸೇವಾ ವೈದ್ಯಕೀಯ ಚಿಕಿತ್ಸೆ ವಿಭಾಗದ ಡಾ. ಸುನಿಲ್ ಕಾರಂತ್ ಮಾತನಾಡಿ ಕೋವಿಡ್ ಮೂರನೆ ಆಲೆ ಆಘಾತಕಾರಿಯಾಗಿದೆ. ಈಗಾಗಲೇ ಮೊದಲನೆ ಮತ್ತು ಎರಡನೇ ಆಲೆಯಲ್ಲಿ ಸಾಕಷ್ಟು ಮಂದಿಯನ್ನು ಕಳೆದು ಕೊಂಡಿದ್ದೇವೆ. ಮುಂದೆ ಬರಲಿರುವ ಮೂರನೇ ಆಲೆಯ ಬಗ್ಗೆ ನಿರ್ಲಕ್ಷವಹಿಸದೆ ಸಾಕಷ್ಟು ಎಚ್ಚರಿಕೆಯನ್ನು ಪಾಲಿಸುವಂತಾಗ ಬೇಕು. ಮೂಢನಂಬಿಕೆಗಳಿಗೆ ಅವಕಾಶ ನೀಡದೆ ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದು ಕೊಂಡು ಕೋವಿಡ್ ನಿಯಂತ್ರಣದ ನಿಯಮಗಳನ್ನು ಪಾಲಿಸುವಂತಾಗ ಬೇಕೆಂದು ಹೇಳಿದರು.

    ಕೋವಿಡ್ ಸೊಂಕಿನ ಚಿಕಿತ್ಸೆಯಲ್ಲಿ ಅಮ್ಲಜನಕದ ಸಹಾಯವನ್ನು ಬೇಡುವ ರೋಗಿಗಳಲ್ಲಿ ಪ್ರಾಥಮಿಕವಾಗಿ ಬಳಸಲಾಗುವುದು, ಕೋವಿಡ್ ಪ್ರಕರಣಗಳ ಉಲ್ಲಣದಿಂದಾಗಿ ಪ್ರತ್ಯೇಕವಾಗಿ ಎರಡನೇ ಅಲೆಯಲ್ಲಿ ಎಕ್ಸ್ಟ್ರಾ ಕಾಪೋರಿಯಲ್ ಪೊರೆಯ ಅಮ್ಲಜನಕ ಚಿಕಿತ್ಸೆ ಹೆಚ್ಚು ಬೇಡಿಕೆ ಇತ್ತು. ರೋಗಿಯ ಹೃದಯ ಮತ್ತು ಶ್ವಾಸಕೋಶಗಳು ಸೂಕ್ತವಾಗಿ ಪಂಪ್ ಮಾಡುವ ಕಾರ್ಯವನ್ನು ಸರಿಯಾಗಿ ನಿಭಾಯಿಸಲಾಗದಿದ್ದಲ್ಲಿ ರಕ್ತವನ್ನು ಅಮ್ಲಜನಕವಾಗಿ ಪರಿವರ್ತಿಸುವ ಮೂಲಕ ಬೇಗನೆ ಗುಣಮುಖರಾಗಲು ಅನವು ಮಾಡಿ ಕೊಡುವ ಮೂಲಕ ಶೇ 35ರಷ್ಟು ರೋಗಿಗಳನ್ನು ವೆಂಟಿಲೇಟರ್‍ಗಳಿಗೆ ಸ್ಥಳಾಂತರಿಸಿ ಶೇ 25ರಷ್ಟು ಮಂದಿಯನ್ನು ಮನೆಗೆ ವಾಪಾಸ್ ಕಳುಹಿಸಲಾಗುವುದು ಎಂದು ತಿಳಿಸಿದರು.


    ಎಕ್ಸ್ಟ್ರಾಕಾಪೀರಿಯಲ್ ಪೊರೆಯ ಅಮ್ಲಜನಕ ಚಿಕಿತ್ಸೆಯನ್ನು ಕೊನೆಯ ಹಂತದಲ್ಲಿ ಬಳಿಸುವ ಕ್ರಮವಾಗಿದೆ. ಇದು ಮೂಲತಃ ಜೀವವನ್ನು ಉಳಿಸುವ ಚಿಕಿತ್ಸೆಯಾಗಿದೆ.ಇದನ್ನು ಮುಂದಿನಗಳಲ್ಲಿ  ಯಾವುದೇ ಪರಿಸ್ಥಿತಿಗೆ ಚಿಕಿತ್ಸೆ ನೀಡಲು ಮತ್ತು ಗುಣಪಡೆಸಲು ಬಳಿಸಲಾಗುವುದಿಲ್ಲ. ಇದು ಅನುಭವಿ ತಂಡದೊಂದಿಗೆ ಕೆಲವೇ ಆಸ್ಪತ್ರೆಗಳಲ್ಲಿ ನೀಡುವ  ಚಿಕಿತ್ಸೆಯಾಗಿದೆ ಎಂದು ಸ್ವಷ್ಟ ಪಡೆಸಿದರು.   

    ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಜಗಧೀಶ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ಸಿಜನ್ ಪ್ಲಾಂಟ್, ವೆಂಟಿಲೇಟರ್ ಹಾಗೂ ಬೆಡ್ ವ್ಯವಸ್ಥೆಗಳ ಬಗ್ಗೆ ಇರುವ ಸೌಲಭ್ಯಗಳನ್ನು ವಿವರಿಸಿದರು.
ನಂತರ ನಡೆದ ಸಂವಾದದಲ್ಲಿ ಬ್ಲಾಕ್ ಫಾಂಗಸ್, ಕೋವಿಡ್ ರೂಪಾಂತರಿಗಳ ಕುರಿತು ವಿವರಿಸಿದ ಡಾ,ಸತ್ಯನಾರಾಯಾಣ  ಅವರು   ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಗುಣಪಡೆಸಲು ಸಾಧ್ಯ, ಚಿಕಿತ್ಸೆಯ ವಿಧಾನದಲ್ಲಿ ನೊರಾರು ಬಗೆಗಳಿದ್ದರೂ ಅಧಿಕೃತಾಗಿ ಇಂಗ್ಲೀಷ್ ಮೆಡಿಸನ್ ಧೃಡಪಡೆಸ ಬಹುದಾಗಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳ ಬೇಕು. ಅನೇಕರಲ್ಲಿ ಸೊಂಕು ಬಂದು ಹೋಗಿರುವುದು ತಿಳಿಸುವುದೇ ಇಲ್ಲ. ಅದನ್ನು ಟೆಸ್ಟ್ ಮಾಡಿಸಿ ಕೊಂಡಾಗ ಮಾತ್ರ ಅರಿವಿಗೆ ಬರುವುದು ಎಂದು ತಿಳಿಸಿದರು.

    ಪ್ರಸ್ತುತ ಎಲ್ಲಾ ವಯಸ್ಸಿನವರಿಗೂ ಕೊವೀಡ್ ಸೊಂಕು ಹಂತ, ಹಂತವಾಗಿ ಬಂದಿದ್ದು ಅಗತ್ಯವಾಗ ಚಿಕಿತ್ಸಾ ಕ್ರಮಗಳನ್ನು ಪಾಲಿಸುವ ಮೂಲಕ ಗುಣ ಪಡೆಸಬಹುದಾದರೂ ಸೊಂಕು ಉಂಟಾಗದಂತೆ ಮುಂಜಾಗೃತೆ ಕ್ರಮಗಳನ್ನು ಪಾಲಿಸುವಂತ ಅರಿವು ಎಲ್ಲರೂ ಪಾಲಿಸುವ ಮೂಲಕ ಅರೋಗ್ಯ ಸಮಾಜ ನಿರ್ಮಾಣಕ್ಕೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಜೂತೆಗೆ ಸಾರ್ವಜನಿಕರ ಸಂಘ ಸಂಸ್ಥೆಗಳ ಸಂಘಟನೆಗಳು ಮತ್ತು ಪ್ರತಿಯೊಬ್ಬರೂ ಸಹಕಾರದ ಹಸ್ತ ಚಾಚುವಂತಾಗಬೇಕೆಂದು ಕರೆ ನೀಡಿದರು.

ಮಣಿಪಾಲ್ ಆಸ್ಪತ್ರೆಯು ರಾಜೀವ ಗಾಂಧಿ ವಿಶ್ವವಿದ್ಯಾಲಯ ಮೂಲಕ ಹಲವಾರು ವಿಚಾರ ದಾರೆಗಳನ್ನು ಕಳೆದ ಮಾರ್ಚ ಮಾಹೆಯಿಂದಲೇ ಆರಂಭಿಸಿದ್ದು ಸಾರ್ವಜನಿಕರಲ್ಲಿ ಅರಿವುಂಟು ಮಾಡುತ್ತಿದೆ. ಬಲ್ಲಾಳ್ ಅವರು ಕಳೆದ ಜೂನ್, ಜುಲೈ ಮಾಹೇಯಲ್ಲಿ ಖಾಸಗಿ ಆಸ್ಪತ್ರೆಗಳ ಮೂಲಕ ಸರ್ಕಾರಕ್ಕೆ ನೆರವು ನೀಡಲಾಯಿತು. ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾದ ಬಹುತೇಖ ಮಂದಿ ಗುಣಮುಖರಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು.

    ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಸ್ವಾಗತಿಸಿ ಮಾತನಾಡುತ್ತಾ, ಮಣಿಪಾಲ್ ಆಸ್ಪತ್ರೆಗೂ ಕೋಲಾರಕ್ಕೊ ಅವಿನಭವ ಸಂಬಂಧ ಇದೆ. ಕಳೆದ ಒಂದು ವರ್ಷದಲ್ಲಿ ಇದು 5ನೇ ಕಾರ್ಯಕ್ರಮವಾಗಿದೆ. ಕೋಲಾರದ ಪತ್ರಕರ್ತರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಶೇ 20 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಮುಂದಿನ ದಿನಗಳಿಗೂ ಈ ಸೌಲಭ್ಯವನ್ನು ವಿಸ್ತರಿಸುವಂತಾಗಬೇಕು. ಕೋಲಾರದಲ್ಲಿ ಮಣಿಪಾಲ್‍ನಿಂದ ಉಚಿತ ಅರೋಗ್ಯ ಶಿಬಿರಗಳನ್ನು ಮಾಡುವಂತಾಗಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಮುನೇಶ್ ರೈ, ಮುಖ್ಯ ಪ್ರಧಾನ ವ್ಯವಸ್ಥಾಪಕ ಮಧುಗೋಪಾಲ್, ಸಲಹೆಗಾರರಾದ ಅಬ್ದುಲ್ ಅಫೀಜ್ ಹಾಗೂ ಕೋಲಾರ ಎಸ್.ಎನ್.ಆರ್. ಆಸ್ಪತ್ರೆಯ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಜಿ.ನಾರಾಯಣಸ್ವಾಮಿ, ಮಣಿಪಾಲ್ ಹಾಸ್ಪಿಟಲ್ ಕೋ ಆರ್ಡಿನೇಟರ್ ಸುನೀಲ್ ಕುಮಾರ್, ಶ್ರೀನಾಥ್ ಸೇರಿದಂತೆ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.

    ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಅವರುಗಳು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
 

 

Read These Next

ರಸ್ತೆ,ರೈಲು, ವಾಯು ಮಾರ್ಗ- ಸಮಗ್ರ ಅಭಿವೃದ್ದಿ. ಶಿಕ್ಷಣದಿಂದ ಬದಲಾವಣೆ - ಕೈಗಾರಿಕೆಯಿಂದ ಅಭಿವೃದ್ದಿ ಸಾಧನೆ ಆಗಬೇಕು : ಬಿ‌ ವೈ ರಾಘವೇಂದ್ರ.

ಶಿವಮೊಗ್ಗ : ಶಿಕ್ಷಣದಿಂದ ಬದಲಾವಣೆ ಮತ್ತು ಕೈಗಾರಿಕೆಯಿಂದ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಶಿಕ್ಷಣ ನೀತಿ ...

ನಾಗಿರೆಡ್ಡಿ ಗ್ರಾಮದ ಬಳಿ ತ್ವರಿತವಾಗಿ ಗೋಶಾಲೆ ಆರಂಭಿಸಿ: ಜಿಲ್ಲಾಧಿಕಾರಿ ಆರ್ ಲತಾ

ಚಿಕ್ಕಬಳ್ಳಾಪುರ : ಸರ್ಕಾರಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆಯಾಗಿರುವ ಜಿಲ್ಲೆಯ ನಾಗಿರೆಡ್ಡಿ ಗ್ರಾಮದ ಬಳಿ ಪ್ರಸ್ತುತ ...

ಈ ಬಾರಿ ಅರ್ಥಪೂರ್ಣ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಿರ್ಧಾರ: ಡಾ. ಕೆ.ಸಿ ನಾರಾಯಣಗೌಡ

ಮಂಡ್ಯ : ಅಕ್ಟೋಬರ್ 9, 10 ಮತ್ತು 11 ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ನಡೆಸಲು ನಿರ್ಧರಿಸಲಾಗಿದ್ದು, ಅರ್ಥಪೂರ್ಣ ದಸರಾ ಆಚರಣೆಗೆ ...