ಕೋಲಾರ  ಜನರು ಚಿನ್ನದಂಥಾ ಜನರು - ಡಿಸಿ ಜಗದೀಶ್   

Source: sonews | By Staff Correspondent | Published on 24th August 2019, 8:16 PM | State News |

ಕೋಲಾರ : ಸರ್ಕಾರಿ ಕೆಲಸ ದೇವರ ಕೆಲಸ  ಹೀಗೊಂದು ನಾಡು ನುಡಿ ವಿಧಾನಸೌಧದ ಮುಂಭಾಗ ಇದೆ ಇದನ್ನು ಸಾರ್ಥಕ ಪಡಿಸಬೇಕಾದರೆ ಸರ್ಕಾರಿ ನೌಕರರು ಸೇವಾ ಮನೋಭಾವದಿಂದ ದುಡಿಯಬೇಕು ಈ ನಿಟ್ಟಿನಲ್ಲಿ ಕೋಲಾ ಕೋಲಾರ ಜನರು ಚಿನ್ನದಂಥ ಜನರು ಎಂದು ಉಡುಪಿ ಜಿಲ್ಲಾಧಿಕಾರಿಗಳಾದ ಜಗದೀಶ್ ಬಣ್ಣಿಸಿದರು.

ಕೋಲಾರ ಜಿಲ್ಲಾ ಪಂಚಾಯಿತಿಯಿಂದ ವರ್ಗಾವಣೆಗೊಂಡ  ಜಗದೀಶ್ ಅವರಿಗೆ ಜಿಲ್ಲಾ ಸರ್ಕಾರಿ ಸಂಘದ ವತಿಯಿಂದ ನೌಕರರ  ಭವನದಲ್ಲಿ ಏರ್ಪಡಿಸಿದ್ದ  ಆತ್ಮೀಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು .
ಜನಸಾಮಾನ್ಯರು ತಮ್ಮ ಸಂಕಷ್ಟಗಳಿಗೆ ಅದೆಷ್ಟೋ ನಿರೀಕ್ಷೆಗಳನ್ನು ಇರಿಸಿಕೊಂಡು ಕಚೇರಿಗೆ ಬಳಿಗೆ ಬರುತ್ತಾರೆ ಅವರನ್ನು ಪ್ರೀತಿಯಿಂದ ಸದ್ಭಾವನೆಯಿಂದ ಮಾತನಾಡುವುದು ಮೊದಲ ಕೆಲಸ ಆಗಬೇಕು ಆಗ ಅವರಿಗೆ ಕೆಲಸದ ಮೇಲೆ ತೃಪ್ತಿ ಸಿಗುತ್ತದೆ ಎಂದರು .

ಸದಾ ಕಚೇರಿ ಕಡತಗಳೊಂದಿಗೆ ವ್ಯವಹಾರ ಮಾಡುವ ಸರ್ಕಾರಿ ನೌಕರರು ತಮ್ಮ ಬಿಡುವಿನ ವೇಳೆಯಲ್ಲಿ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಳಿತು ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ ಎಂದರು 

ಜಿಲ್ಲೆಯಲ್ಲಿ ನೌಕರರ ಸಂಘ ಬಲಿಷ್ಠವಾಗಿದ್ದು ಸಂಘಟನೆಯನ್ನು ಶಕ್ತಿಯನ್ನಾಗಿ ಮಾಡಿಕೊಂಡು ಜನಸಾಮಾನ್ಯರ ನೋವು ನಿಲುವಿಗೆ ಶ್ರಮಿಸಬೇಕು ಎಂದರು 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ.ಬಿ. ಅಶೋಕ್ ಮಾತನಾಡಿ ಜಿಲ್ಲೆಯ ಜನ ಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡಿರುವ ಜಗದೀಶ್ ಅವರು ಪ್ರಾಮಾಣಿಕ ವ್ಯಕ್ತಿತ್ವದಿಂದ ಉತ್ತಮ ಹೆಸರು ಮಾಡಿದ್ದರು ಎಂದು ಶ್ಲಾಘಿಸಿದರು 

ಸನ್ಮಾನಿಸಿದ ಈ ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ  ಸದಸ್ಯ ಆರ್ ಅನಿಲ್ ಕುಮಾರ್. ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್, ಪರಿಶಿಷ್ಟ ಜಾತಿ ವರ್ಗಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಕೆಟಿ ನಾಗರಾಜ್, ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮುರಳಿಮೋಹನ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಶ್ರೀರಾಮ್, ಮಲ್ಲಿಕಾರ್ಜುನ್, ಸುರೇಶ್ ಬಾಬು,  ಶ್ರೀನಿವಾಸರೆಡ್ಡಿ, ಆರೋಗ್ಯ ಇಲಾಖೆಯ ನಂದೀಶ್, ಚಂದ್ರಕಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ. ನಾರಾಯಣಸ್ವಾಮಿ, ಉಪಾಧ್ಯಕ್ಷ ನಂಜುಂಡೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಕುಂದ, ಮೋಹನಾಚಾರಿ, ಜಮಾದಾರ್ ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.  

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...