ಗಂಗಾವತಿ ನಗರಸಭೆ ಸದಸ್ಯನ ಕಿಡ್ನಾಪ್. ಹಳಿಯಾಳದಲ್ಲಿ ಸಿಕ್ಕಿ ಬಿದ್ದ ಅಪಹರಣಕಾರರು.

Source: SO News | By Laxmi Tanaya | Published on 30th October 2020, 3:37 PM | State News |

ಹಳಿಯಾಳ : - ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ‌ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆಗಾಗಿ ಕಿಡ್ನಾಪ್  ಮಾಡಲು ಹೋಗಿ ಮೂವರು ಹಳಿಯಾಳ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ನವೆಂಬರ್ ಎರಡರಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠರನ್ನ ನಿನ್ನೆ ಗಂಗಾವತಿಯ ಬಾರ್ ಎಂಡ್ ರೆಸ್ಟೋರೆಂಟ್ ಸಿನಿಮೀಯ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಪಹರಿಸಿದ್ದರು. ಈ ಬಗ್ಗೆ  ಗಂಗಾವತಿ ಠಾಣೆಯಲ್ಲಿ ಎಂಟು ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿತ್ತು.

ಈ ನಡುವೆ ಇಂದು ಹಳಿಯಾಳದ ಬಸವೇಶ್ವರ ಸರ್ಕಲ್ ಬಳಿ ವ್ಯಕ್ತಿಯೋರ್ವ. ಹೆಲ್ಪ್ ಮೀ ಎಂದು ಕೂಗಿದಾಗ ಘಟನೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ದಾರಿ‌ಮಧ್ಯೆ ಮನೋಹರ ಸ್ವಾಮೀ ಹಿರೇಮಠ ತಪ್ಪಿಸಿಕೊಂಡು ಬಂದಿದ್ದರು. ಅವರು ಮಾಹಿತಿ ನೀಡಿದ ಮೇರೆಗೆ ಮೂವರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಕೇಶ ಅಡಿವೆಪ್ಪ ನಾಯಕ (೨೪), ಬಸವರಾಜ ಮಲ್ಲಪ್ಪ ಉಪ್ಪಾರ (೨೨), ಶರಣಬಸು ಬಸವರಾಜ ವಂಕಲಕುಂಟೆ (೨೪) ಮತ್ತು ರವಿ ಕುರುಬರ ಅಪಹರಣ ಮಾಡಿದವರು. ಇವರಲ್ಲಿ ಓರ್ವ ಪರಾರಿಯಾಗಿದ್ದು, ಬಂಧನಕ್ಕಾಗಿ ಜಾಲ ಬೀಸಲಾಗಿದೆ.

ಮನೋಹರ್ ಸ್ವಾಮಿ ಅವರನ್ನು ರಕ್ಷಿಸಲಾಗಿದ್ದು, ಕಾರೊಂದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನ ಗಂಗಾವತಿ  ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...