ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಮುಖ್ಯಮಂತ್ರಿಗಳಿಗೆ ಮನವಿ

Source: sonews | By Staff Correspondent | Published on 1st June 2020, 7:17 PM | Coastal News | Don't Miss |

ಮುಂಡಗೋಡ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಚಿದಾನಂದ ಹರಿಜನ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು. 

ರಾಜ್ಯದಲ್ಲಿನ ಅಟೋರಿಕ್ಷಾ ಹಾಗೂ ಕಾರು ಚಾಲಕರಿಗೆ ಸರ್ಕಾರ ನೀಡಲು ಆದೇಶಿಸಿರುವ ಧನ ಸಹಾಯ ಕೂಡಲೇ ಖಾತೆಗಳಿಗೆ ಸಂದಾಯವಾಗಬೇಕು. ಕೋವಿಡ್-19 ಮಹಾಮಾರಿಯ ಹಿನ್ನಲೆಯಲ್ಲಿ ಗೃಹರಕ್ಷದಳದವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು ಈಗ ಹಠಾತ್‍ವಾಗಿ ಕೆಲವರನ್ನು ಕಡಿತಗೊಳಿಸಲಾಗಿದ್ದ ಆದೇಶ ಕೂಡಲೇ ಹಿಂಪಡೆದು ಕೆಲಸಕ್ಕೆ ನೇಮಿಸಿಕೊಳ್ಳಬೇಕು ಹಾಗೂ ಗೃಹ ರಕ್ಷಕಸಿಬ್ಬಂದಿಯನ್ನು ಖಾಯಂ ಗೊಳಸಬೇಕು. ಗುತ್ತಿಗೆದಾರರು ಮಾಡಿದ ಕೆಲಸಗಳಿಗೆ ಸರ್ಕಾರ ಹಣವನ್ನು ಬಿಡುಗಡೆ ಮಾಡದೇ ಇರುವುದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆಒಳಗಾಗಿದ್ದಾರೆ ಗುತ್ತಿಗೆದಾರರಿಗೆ ಕೂಡಲೇ ಹಣವನ್ನು ಬಿಡುಗಡೆ ಮಾಡಬೇಕು. ಹಾಗೂ ಮುಂಡಗೋಡ ಹಿಂದುಳಿದ ತಾಲೂಕಾಗಿದ್ದು ಇಲ್ಲಿಯ ಜನರು  ಬಹಳಷ್ಟು ಜನರು ಮುಂಡಗೋಡಿನ ಟಿಬೇಟ್ ಕ್ಯಾಂಪ್‍ನಲ್ಲಿ ವಿವಿಧ ರೀತಿಯ  ಕೆಲಸ ಪಡೆದು ತಮ್ಮ ಉಪಜೀವನ ಸಾಗಿಸುತ್ತಿದ್ದರು ಈಗ ಕೋರೊನಾ ದಿಂದ ಟಿಬೇಟ್ ಕ್ಯಾಂಪ್ ನಲ್ಲಿ ಕೆಲಸಮಾಡಲು ಅವಕಾಶ ಇಲ್ಲದಂತಾಗಿದೆ. ತಾಲೂಕಾಡಳಿತ ಈ ಮೊದಲಿನಂತೆ ಮುಂಡಗೋಡ ಜನರಿಗೆ ಕೆಲಸ ಸಿಗುವಹಾಗೆ ಸಹಕರಿಸಬೇಕು. ತಾಲೂಕಿನಲ್ಲಿ ನೀಡಿದಸಾಲವನ್ನು ತುಂಬುವಂತೆ ಮಹಿಳೆಯರನ್ನು ಬ್ಯಾಂಕುಗಳು, ಫೈನಾನ್ಸನವರು ಒತ್ತಾಯಿಸುತ್ತಿರುವುದು ನಿಲ್ಲಬೇಕು ಹಾಗೂ ಅವರಿಂದ ಕಿರುಕುಳ ಆಗುವುದನ್ನು ನಿಲ್ಲಿಸಬೇಕು ಎಂದು ತಾಲೂಕಾಡಳಿತವನ್ನು ದಲಿತರಕ್ಷಣಾವೇದಿಕೆ ಸದಸ್ಯರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮನವಿ ನೀಡು ಸಂದರ್ಭದಲ್ಲಿ ಚಿದಾನಂದ ಹರಿಜನ, ಮಾರ್ಟೀನ್ ಬಳ್ಳಾರಿ, ಖೇಮಣ್ಣ ಲಮಾಣಿ, ಮಂಜುನಾಥ ಕುರ್ತಕೋಟಿ ಜೈತುನಬಿ ಜಿಗಳೂರ ಸೇರಿದಂತೆ ಮುಂತಾದವರು ಇದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...