ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

Source: S.O. News Service | By I.G. Bhatkali | Published on 4th December 2020, 11:56 PM | Coastal News | Special Report |

ಭಟ್ಕಳ: ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ಅಲ್ಲಿಂದ ಬೇರೆ ಕಡೆ ಸಾಗಿಸುವ ಕಾರ್ಯಕ್ಕೆ ಇದ್ದಕ್ಕಿದ್ದಂತೆ ತಡೆ ಬಿದ್ದಿದ್ದು, ಹೆಬಳೆ ಈಗ ಕಸ, ತ್ಯಾಜ್ಯಗಳ ತೊಟ್ಟಿಯಾಗುವ ಹಂತ ತಲುಪಿದೆ.

ಹೆಬಳೆ ಗ್ರಾಮ ಪಂಚಾಯತ ಪ್ರದೇಶವನ್ನು ಸುತ್ತಿ ಬಂದರೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಕಸ, ತ್ಯಾಜ್ಯಗಳೇ ತುಂಬಿಕೊಂಡಿರುವುದು ಗೋಚರಿಸುತ್ತದೆ. ಪ್ಲಾಸ್ಟಿಕ್ ಚೀಲಗಳ ಮೇಲೆ ಬೀದಿ ನಾಯಿಗಳು ಹೊರಳಾಡುವುದು ಮಾತ್ರವಲ್ಲ, ಕಸ, ತ್ಯಾಜ್ಯಗಳನ್ನು ಕಚ್ಚಿ ರಸ್ತೆಗೆ ಎಳೆದುಕೊಂಡು ಬರುತ್ತಿವೆ. ಹೆಬಳೆಯಲ್ಲಿ ಸಂಗ್ರವಾಗುವ ಕಸ, ತ್ಯಾಜ್ಯಗಳು ಊರಿನ ಅಂದವನ್ನು ಸಂಪೂರ್ಣವಾಗಿ

ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯಿಂದ ನಿತ್ಯವೂ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು 14ಕಿಮಿ. ದೂರದವರೆಗೆ ಸಾಗಿಸಲು ಅನುದಾನ ಸಾಕಾಗುತ್ತಿಲ್ಲ. ಕಳೆದ 2 ವರ್ಷಗಳಿಂದ ಸ್ಥಳೀಯವಾಗಿಯೇ ಸಂಗ್ರಹಿಸಲಾಗುತ್ತಿತ್ತಾದರೂ ಅದಕ್ಕೂ ಈಗ ಜನರು ತಡೆಯೊಡ್ಡಿದ್ದಾರೆ. ಹೊಸದಾಗಿ ಕಸ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ನಿವೇಶನ, ಅನುದಾನ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. 
 ಜಯಂತಿ ನಾಯ್ಕ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹೆಬಳೆ
 

ಕೆಡಿಸಿ ಬಿಟ್ಟಿವೆ.

ತಾತ್ಕಾಲಿಕ ಸಂಗ್ರಹಕ್ಕೆ ಬ್ರೇಕ್ : 
ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯಗಳ ಸಮಸ್ಯೆ ಪೆಡಂಭೂತವಾಗುತ್ತಿದ್ದಂತೆಯೇ ಸ್ಥಳೀಯ ಪಂಚಾಯತ ಆಡಳಿತ ಈ ಹಿಂದೆ ಹೆಬಳೆ ಜಾಮೀಯಾ ಸ್ಕೂಲ್ ಸಮೀಪದ ಅರಣ್ಯ ಪ್ರದೇಶದಲ್ಲಿ ( 1 ಎಕರೆ) ಕಸ, ತ್ಯಾಜ್ಯ ಸಂಗ್ರಹಿಸಿ, ಅಲ್ಲಿಂದ ಮಾರುಕೇರಿ ಸಮೀಪದ ಖಾಸಗಿ ಜಾಗಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಸ್ಥಳೀಯರು, ಜನ ವಸತಿ ಪ್ರದೇಶಗಳ ಸಮೀಪದಲ್ಲಿ ಕಸ, ತ್ಯಾಜ್ಯಗಳನ್ನು ಸಂಗ್ರಹಿಸುವುದು ಬೇಡವೇ ಬೇಡ, ಅಲ್ಲದೇ ಸದರಿ ಪ್ರದೇಶದಲ್ಲಿ ಸನಿಹದಲ್ಲಿಯೇ ಮಸೀದಿ, ಶಾಲೆ ಎಲ್ಲವೂ ಇದ್ದು, ತ್ಯಾಜ್ಯ ಸಂಗ್ರಹದಿಂದ ಪರಿಸರ ಹಾಳಾಗುತ್ತಿದೆ. ಕಸ, ತ್ಯಾಜ್ಯಗಳ ಸಂಗ್ರಹ ಘಟಕವನ್ನು ಕೂಡಲೇ ಸ್ಥಳಾಂತರಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಪಂಚಾಯತ ಆಡಳಿತದಲ್ಲಿ ಅಧಿಕಾರದಲ್ಲಿದ್ದ ಪ್ರತಿನಿಧಿಗಳು ಜನರನ್ನು ಪುಸಲಾಯಿಸಿ ಹೇಗೋ 2 ವರ್ಷ ಜನರ ವಿರೋಧದ ನಡುವೆಯೂ ಕಸ, ತ್ಯಾಜ್ಯಗಳ ಸಂಗ್ರಹಕ್ಕೆ ಯಾವುದೇ ಬಾಧಕ ಉಂಟಾಗದಂತೆ ನೋಡಿಕೊಂಡಿದ್ದರು. ಆದರೆ ಪಂಚಾಯತ

ಆಡಳಿತಾಧಿಕಾರ ಜನಪ್ರತಿನಿಧಿಗಳಿಂದ ಅಧಿಕಾರಿಗಳಿಗೆ ಹಸ್ತಾಂತರವಾಗಿದೆ. ಹೊಸ ಆಡಳಿತಕ್ಕಾಗಿ ಚುನಾವಣೆಯೂ ಘೋಷಣೆಯಾಗಿದೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದರೇನೋ ಎಂಬಂತೆ ಜನರು ಪಟ್ಟು ಹಿಡಿದು ಕಳೆದ ಒಂದು ವಾರದಿಂದ ಹೆಬಳೆ ಜಾಮೀಯಾ ಸಮೀಪ ಕಸ, ತ್ಯಾಜ್ಯ ಸಂಗ್ರಹ ಕಾರ್ಯವನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಫಲಿತಾಂಶ ಎಂಬಂತೆ ಬಿದ್ದ ಕಸ, ತ್ಯಾಜ್ಯಗಳು ವಾರದವರೆಗೂ ರಸ್ತೆಯ ಇಕ್ಕೆಲಗಳಲ್ಲಿ, ಮನೆಯ ಸಮೀಪ ಎಲ್ಲೆಂದರಲ್ಲಿ ಬಿದ್ದುಕೊಂಡಿರುವುದನ್ನು ಕಾಣಬಹುದಾಗಿದೆ. 

ಹಣವಿದ್ದರೂ ಯೋಜನೆ ಇಲ್ಲ:

ಹೆಬಳೆ ಜಾಮೀಯಾ ಸಮೀಪ ಕಸ, ತ್ಯಾಜ್ಯ ಸಂಗ್ರಹಕ್ಕೆ ಶಾಲೆ, ಮಸೀದಿಯ ಹಾಗೂ ಸುತ್ತಮುತ್ತ ಜನರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದಾರೆ. ಆರಂಭದಲ್ಲಿ ಕೇವಲ ಜಾಮೀಯಾ ಪರಿಸರದಲ್ಲಿನ ಕಸ, ತ್ಯಾಜ್ಯಗಳನ್ನು ಸಂಗ್ರಹಿಸಿ 10-15 ದಿನಗಳಲ್ಲಿ ವಿಲೇವಾರಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಇಡೀ ಊರಿನ ಕಸ, ತ್ಯಾಜ್ಯಗಳನ್ನು ತಂದು ಸುರಿಯಲಾಯಿತು. ಮಾತ್ರವಲ್ಲ, 10-15 ದಿನಗಳ ಬದಲಾಗಿ 4-5 ತಿಂಗಳು ಕಳೆದರೂ ವಿಲೇವಾರಿ ಕಾರ್ಯವೇ ನಡೆಯಲಿಲ್ಲ. ಅನಿವಾರ್ಯವಾಗಿ ಜನರು ತಡೆಯೊಡ್ಡಲೇ ಬೇಕಾಯಿತು
 - ಮಹ್ಮದ್ ಸಲೀಮ್, ಸ್ಥಳೀಯ ನಿವಾಸಿ


ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ವಿಲೇವಾರಿ ಘಟ ಸ್ಥಾಪಿಸಲು ಸರಕಾರ 6 ತಿಂಗಳ ಹಿಂದೆಯೇ 10 ಗುಂಟೆ ನಿವೇಶನವನ್ನು ಮಂಜೂರಿ ಮಾಡಿದೆ. ನೂತನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ವಿವಿಧ ಯೋಜನೆಯಡಿಯಲ್ಲಿ ಒಟ್ಟೂ 22 ಲಕ್ಷ ರುಪಾಯಿ ಅನುದಾನವನ್ನು ಮಂಜೂರಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಯೋಜನೆ ಇನ್ನೂ ಸಿದ್ಧವಾಗಿಲ್ಲ. ಈ ಬಗ್ಗೆ ಕೇಳಿದರೆ ಟೆಂಡರ್ ಕರೆಯಲು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಉತ್ತರ ಅಧಿಕಾರಿಗಳಿಂದ ದೊರೆಯುತ್ತದೆ. ಅಧಿಕಾರಿಗಳು ಕಸ, ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿಯ ಟೆಂಡರ್‍ನ್ನು ಆರಾಮವಾಗಿ ಕರೆಯಲಿ, ಆದರೆ ತುರ್ತಾಗಿ ರಸ್ತೆಯ ಮೇಲೆ ಬಿದ್ದುಕೊಂಡಿರುವ ಕಸ, ತ್ಯಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಿ ಎಂದು ಅಲ್ಲಿನ ಜನರು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...