ಆರ್ಟಿಪಿಸಿಯಲ್ ಆಮ್ಲಜನಕಕ್ಕಿಂತ ನೈಸರ್ಗಿಕವಾಗಿ ಸಿಗುವ ಆಮ್ಲಜನಕವೇ ಶ್ರೇಷ್ಠ ಹರೀಶಕುಮಾರ.

Source: SO News | By Laxmi Tanaya | Published on 12th September 2020, 7:44 AM | Coastal News | Don't Miss |

ಕಾರವಾರ : ಆಸ್ಪತ್ರೆಗಳಲ್ಲಿ ಸಿಗುವ ಆರ್ಟಿಪಿಸಿಯಲ್ ಆಮ್ಲಜನಕಕ್ಕೆ ಹೋಲಿಸಿದರೆ ನೈಸರ್ಗಿಕವಾಗಿ ಗಿಡ ಮರಗಳಿಂದ ಸಿಗುವ ಆಮ್ಲಜನಕವೇ ಶ್ರೇಷ್ಠ. ಹೀಗಾಗಿ ಗಿಡಮರಗಳ ಪೊಷಣೆಯಲ್ಲಿ ನಾವೇಲ್ಲರು ತೊಡಗಬೇಕಿದೆ ಹಾಗೂ ಅರಣ್ಯ ರಕ್ಷಣೆಗೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಹೇಳಿದರು. 

ಅರಣ್ಯ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಕಾಡಿದ್ದರೆ ನಾಡು ಆಗಲು ಸಾಧ್ಯ.ಅರಣ್ಯ ಸೇವೆಯಲ್ಲಿ ಅಗಲಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಮರಣಾರ್ಥ ಆಚರಿಸಲಾದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. 

ಸಾರ್ವಜನಿಕರು ಕಾಡನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿವೆ.  ಅವರ ಉದ್ದೇಶಗಳು ಕೂಡ ವಿವಿಧ ರೀತಿಯಲ್ಲಿ ಕಾಣಬಹುದಾಗಿದೆ. ಅರಣ್ಯ ನಿಯಮಗಳಿಗೆ ತದ್ವಿರುದ್ಧವಾಗಿ ನಡೆದಾಗ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷಗಳು ಏರ್ಪಡುತ್ತವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ, ಉದಯ್ ನಾಯ್ಕ, ಪ್ರಸನ್ನ ಪಟಗಾರ,  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣಕುಮಾರ, ಮಂಜುನಾಥ ಜಿ ನಾವಿ, ವಿ.ಟಿ.ಗೌಡ, ಪ್ರಭಾಕರ ಪ್ರಿಯದರ್ಶಿ, ಉಪ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ, ಕುಮಾರೇಶ್ ಹಿರೇಗೌಡರು, ಶಂಕರ ಚೆಲುವಾದಿ, ಶೇಖರ್ ಪೂಜಾರಿ ಸೇರಿದಂತೆ ಹಲವರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...