ರೈತರ ಭವಿಷ್ಯವನ್ನ ಜೀವಂತ ಸಮಾಧಿ ಮಾಡಲು ಹೊರಟ ಸರ್ಕಾರ. ಮಾಜಿ ಸಚಿವ ಯು ಟಿ ಖಾದರ್ ಆರೋಪ.

Source: SO News | By Laxmi Tanaya | Published on 29th September 2020, 8:30 PM | Coastal News | Don't Miss |

ಮಂಗಳೂರು :  ರೈತ ವಿರೋಧಿ ಕಾನೂನು,  ಎಪಿಎಂಸಿ ಭೂಸುಧಾರಣಾ ಕಾಯ್ದೆ ಜಾರಿಗೆ ತಂದು ರೈತರ ಭವಿಷ್ಯವನ್ನು ಜೀವಂತ ಸಮಾಧಿ ಮಾಡಲು ಸರ್ಕಾರ ಹೊರಟಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ,  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ವ್ಯವಸಾಯ ಸಂಪೂರ್ಣ ಕಾರ್ಪೊರೇಟ್ ಸೆಕ್ಟರ್ ಗೆ ನೀಡಲು ಮುಂದಾಗಿದೆ. ಈ ತಿದ್ದುಪಡಿ ರೈತರಿಗೆ ಮುಂದಿನ ದಿನಗಳಲ್ಲಿ ಬಹಳ ತೊಂದರೆಯಾಗಲಿದೆ. ಎಪಿಎಂಸಿ ಈ ಕಾಯ್ದೆ ತಿದ್ದುಪಡಿಯಿಂದ ಸಂಪೂರ್ಣ ಮುಚ್ಚಲಿದೆ ಎಂದರು.

ಇನ್ನೂ ಈ ತಿದ್ದುಪಡಿ ಕೇವಲ ರೈತರಿಗೆ ಮಾತ್ರ ಮಾರಕವಾಗದೆ ಮುಂದೆ ಜನ ಸಾಮಾನ್ಯರಿಗೂ ಮಾರಕ ವಾಗಲಿದೆ. ಎಪಿಎಂಸಿ ರಾಜ್ಯಕ್ಕೆ ಸಂಬಂಧಿಸಿದ್ದು. ಆದ್ರೆ ಕೇಂದ್ರ ಸರ್ಕಾರ ಒತ್ತಡ ಹೇರಿ ಆದೇಶ ಮಾಡುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು. ಈ ಕಾಯ್ದೆಯ ತಿದ್ದುಪಡಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

 ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹಲವರ ಬಂಧನ ಆಗ್ತಾ ಇದೆ.
ಪೊಲೀಸ್ ಇಲಾಖೆ ಈ ಬಗ್ಗೆ ಇನ್ನೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನಾರ್ಕೋಟಿಕ್ ಸೆಲ್ ಇನ್ನೂ ಬಲಪಡಿಸಬೇಕೆಂದು ಒತ್ತಾಯಿಸಿದ ಖಾದರ್,  ಅಕ್ರಮ ಕಾರ್ಯದಲ್ಲಿ ತೊಡಗಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಿ. ಬೇರೆ ರಾಜ್ಯ ದೇಶದಿಂದ ಬಂದು ಇಲ್ಲಿ ಅಕ್ರಮ ಈ ದಂಧೆ ಮಾಡುವವರ ಬಗ್ಗೆ ಗಮನಹರಿಸಲಿ. ರಾಜ್ಯ ಸರ್ಕಾರ ಈ ಬಗ್ಗೆ ಎಚ್ಚೆತ್ತು   ಸೂಕ್ತ ತಂಡ ರಚನೆ ಮಾಡಬೇಕಾಗಿದೆ.

ಈ ಹಿಂದೆ ಜಿಲ್ಲೆಯಲ್ಲಿ ಎಲ್ಲಾ ಜೂಜು ಅಡ್ಡೆ, ಕ್ಲಬ್, ಮಸಾಜ್ ಪಾರ್ಲರ್, ಸಿಂಗಲ್ ನಂಬರ್ ಬಂದ್ ಮಾಡಲಾಗಿತ್ತು.‌ ‌ಈ ಬಗ್ಗೆ ಸರ್ಕಾರ ಜಿಲ್ಲಾ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು‌ ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಎನ್ ಡಿಆರ್ ಎಫ್ ತಂಡದಿಂದ ಅಣಕು ಪ್ರದರ್ಶನ. ಸಾರ್ವಜನಿಕರಲ್ಲಿ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಬೇಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತಕ್ಷಣ ಸ್ಪಂಧಿಸುವುದರಿಂದ ಮತ್ತು ...

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...