ಸರ್ಕಾರ ರೈತರನ್ನ ನಿರ್ಲಕ್ಷ್ಯ ಮಾಡುತ್ತಿದೆ : ಶಾಸಕ ಯು ಟಿ ಖಾದರ್ ಆರೋಪ.

Source: SO News | By Laxmi Tanaya | Published on 22nd January 2021, 8:31 PM | State News |

ಮಂಗಳೂರು‌ : ‌ಯುಪಿಎ ಸರ್ಕಾರ ಜಾರಿಗೆ ತಂದ ಆಹಾರ ಕಾಯ್ದೆಗಳನ್ನು ಕಾಪಾಡಬೇಕಾಗಿದೆ ಎಂದು ಮಂಗಳೂರಿನಲ್ಲಿ ಶಾಸಕ ಯು ಟಿ ಖಾದರ್ ಹೇಳಿದರು.

ಯಾರಿಗಾಗಿ ಸರ್ಕಾರ ಕಾನೂನು ಮಾಡುವುದು ಎಂದು ಪ್ರಶ್ನಿಸಿದ ಅವರು, 
ಮೂರು ತಿಂಗಳಿನಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಹಿಂದೆ ನೋವಿನ ಕಥೆ ಇದೆ.
ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ.  
ಜಲಫಿರಂಗಿ, ಲಾಠಿ ಮೂಲಕ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದರು.

ಈಗ ರಾಷ್ಟ್ರದಲ್ಲಿ, ಮುಂದೆ ಗ್ರಾಮಮಟ್ಟದಲ್ಲಿ ರೈತರ ಚಳವಳಿ ಆರಂಭವಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬ್ರಿಟಿಷರ ಆಡಳಿತ ಪುನಾರವರ್ತನೆಯಾಗಿದೆ ಎಂದು  ಖಾದರ್ ಹೇಳಿದರು.

Read These Next

ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು

ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು