ಭಟ್ಕಳ: ಧಾರ್ಮಿಕ ಸಂಪ್ರದಾಯದಂತೆ ಸರಳವಾಗಿ ಗಣೇಶ ಚತುರ್ಥಿ ಹಬ್ಬ ಆಚರಣೆ:ಕೇಲವು ಬಾಗದಲ್ಲಿ ಒಂದೇ ದಿನಕ್ಕೆ ಗಣಪತಿ ವಿಸರ್ಜನೆ

Source: sonews | By MV Bhatkal | Published on 11th September 2021, 6:57 PM | Coastal News | Don't Miss |

ಭಟ್ಕಳ:ವರ್ಷಂಪ್ರತಿ ಆಚರಿಸುವಂತ ಗಣೇಶೋತ್ಸವ ಈ ವರ್ಷವು ಸಹ ತಾಲೂಕಿನಾದ್ಯಂತ ಗಣೇಶ ಚತುರ್ಥೀಯನ್ನು ಸಂಭ್ರಮದ ಸಾಂಪ್ರದಾಯಿಕ,ಕಳೆದೆರಡು ವರ್ಷಗಳಿಂದ ತೀವ್ರ ಆತಂಕ ಸೃಷ್ಟಿಸಿ ಎಲ್ಲೆಡೆ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ಸ್ವಾತಂತ್ರ್ಯವನ್ನೇ ಕಸಿದುಕೊಂಡಿರುವ ಕರೋಣ ವೈರಾಣು ಕಾಯಿಲೆಯ ಪರಿಣಾಮ,ಭಟ್ಕಳ ತಾಲ್ಲೂಕಿನ ನಲ್ಲಿ ಕಳೆ ತೀರಾ ಮಂದವಾಗಿದೆ.


ಸಂಕಷ್ಟ ಹರಣ ವಿಘ್ನ ನಿವಾರಕ ಎಂದೆ ಖ್ಯಾತಿ ಪಡೆದಿರುವ ವಿಘ್ನ ನಿವಾರಕ ಗಣೇಶ ಚತುರ್ಥೀಯನ್ನು ಸಮಸ್ಥ ಭಕ್ತವೃಂದವು ತಾಲೂಕಿನಾದ್ಯಂತ ಸರಳವಾಗಿ ಆಚರಿಸುದರ ಮೂಲಕ ದೈವ ಕೃಪೇಗೆ ಪಾತ್ರರಾದರು. ಭಟ್ಕಳ ತಾಲೂಕಿನಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ  ತಾಲೂಕಿನಾದ್ಯಂತ ಗಣಪತಿ ವಿಗ್ರಹವನ್ನು ಮೇರವಣಿಗೆಯ ಮೂಖಾಂತರ ತಂದು ಗಣೇಶನ ವಿಗ್ರಹಗಳನ್ನು ಭಕ್ತರು ಭಕ್ತಿಪರವಶರಾಗಿ ಪೂಜಿಸುವುದರ ಮೂಲಕ  ತಾಲೂಕಿನಾದ್ಯಂತ ಹಬ್ಬವನ್ನು ಆಚರಿಸಿದರು.


ಮುಟ್ಟಳಿ ಮೂಡಭಟ್ಕಳದ  ಗಣಪ, ಕೆ.ಎಸ್ ಆರ್ ಟಿ ಸಿ  ನೌಕರರ ಸಂಘದ ವತಿಯಿಂದ ಪೂಜಿತ ಗಣಪ,  ಭಟ್ಕಳ ನ್ಯೂ ಇಂಗ್ಲೀಷ ಸ್ಕೂಲ್ ಗಣಪ.ಮಣ್ಕುಳಿ ಸರ್ವಾಜನಿಕ ಗಣಪತಿ,ಭಟ್ಕಳದ ಆಟೋಚಾಲಕ ಮಾಲಕರ ಗಣಪ, ನಿಚ್ಚಲಮಕ್ಕಿ ವೇಂಕಟರಮಣ ಗಣಪ, ಹನುಮಾನ್ ದೇವಸ್ಥಾನದ ಗಣಪ, ಪೋಲಿಸ್ ಠಾಣೇಯ ಗಣಪ, 
ತಲಗೋಡು ಕೋಟಿ ಮನೆ ಗಣಪ, ತಲಾಂದ ಸಾರ್ವಜನಿಕರ ಗಣಪತಿ, ಹೆಬ್ಬಳೆ ಗಾಂದಿನಗರದ ಸಾರ್ವಜನೀಕ ಗಣಪ, ಕೌವುರ್ ಸಾರ್ವಜನಿಕ ಗಣಪತಿ, ಸಬ್ಬತ್ತಿ ಜ್ವಾಳದ ಮುಲ್ಲಿ ಗಣಪ,ಅಲ್ಲದೆ  ಮುರ್ಡೆಶ್ವರ ಸಾರ್ವಜನಿಕ ಶ್ರೀ ಸಿದ್ದೀವಿನಾಯಕ ಸೇವಾ ಸಮೀತಿಯ ಗಣೇಶ, ಹೀಗೆ ತಾಲೂಕಿನಾದ್ಯಂತ ಕಳೆದ ವರ್ಷದಂತೆ ಈ ವರ್ಷವೂ ಕೂಡ ಗಣೇಶ ಚತುರ್ಥಿ ಉತ್ಸವಕ್ಕೆ ಕೊರೋನಾದ ಕರಿನೆರಳು ಬೀದಿದ್ದು, ಈ ಬಾರಿಯೂ ಸರಳವಾಗಿ ಆಚರಣೆ ಮಾಡುವ ಪರಿಸ್ಥಿತಿ ಎದುರು ರಾಗಿದ್ದು
ಮುಟ್ಟಳಿ ಮೂಡಭಟ್ಕಳ,ಕೋಕ್ತಿ,ಕರಿಕಲ್,ಜಾಲಿ,ಚೌಥನಿ,ಕೆ.ಎಸ್ ಆರ್ ಟಿ ಸಿ,ಗಣಪತಿ ಸೇರಿದಂತೆ ಗ್ರಾಮೀಣ ಬಾಗದಲ್ಲಿ ಕೇಲವು ಬಾಗದಲ್ಲಿ ಮೂರು,ನಾಲ್ಕು ದಿನ ಇರುತ್ತಿದ್ದ ಗಣಪತಿಯನ್ನು ಒಂದೇ ದಿನದಲ್ಲಿ ವಿಸರ್ಜನೆ ಮಾಡಲಾಯಿತು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...