ಕಾರವಾರ: ಟ್ಯಾಬ್ ನೊಂದಿಗೆ ಭವಿಷ್ಯ ಕೂಡ ವಿದ್ಯಾರ್ಥಿ ಕೈಯಲ್ಲೇ ಇದೆ : ಶಾಸಕಿ ರೂಪಾಲಿ ನಾಯ್ಕ

Source: S.O. News service | By S O News | Published on 23rd June 2021, 6:58 PM | Coastal News |

ಕಾರವಾರ: “ಇಂದು ವಿತರಿಸಲಾಗುತ್ತಿರುವ ಟ್ಯಾಬ್‍ನೊಂದಿಗೆ ಭವಿಷ್ಯ ಕೂಡ ನಿಮ್ಮ ಕೈಯಲ್ಲೇ ಇದೆ, ವಿದ್ಯಾರ್ಥಿಗಳು ಸರಕಾರ ನೀಡಿರುವ ಟ್ಯಾಬ್ ಪಿಸಿ ಗಳ ಸದುಪಯೋಗಪಡಿಸಿಕೊಳ್ಳಬೇಕೆಂದು” ಅಂಕೋಲಾ-ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ ಹೇಳಿದರು.

ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ, ಸ್ಮಾರ್ಟ ಕ್ಲಾಸ್ ರೂಮ್ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಪಿಸಿ ವಿತರಣಾ ಕಾರ್ಯಕ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು ಎನ್ನುವಂತೆ ಇಂದಿನ ವಿದ್ಯಾರ್ಥಿಗಳೇ ನಾಳೆಯ ದೇಶದ ಶಕ್ತಿ ಆಸ್ತಿ. ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸರಕಾರ ಪಿ ಸಿ ವಿತರಿಸುತ್ತಿದೆ. ಎಲ್ಲೂ ತಾರತಮ್ಯವಾಗಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಗೆ ಟ್ಯಾಬ್ ದೊರೆಯುವದರಿಂದ ಸಾಕಷ್ಟು ಅನಕೂಲ ಆಗಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅದರಲ್ಲೂ ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಈಗ ಪಿ ಸಿ ಟ್ಯಾಬ್ ಸಿಗುತ್ತಿರುವದರಿಂದ ಜಗತ್ತಿನ ಜ್ಞಾನ ಬಂಡಾರಿಗಳಾಗಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು, ವಿದ್ಯಾರ್ಥಿ ಜೀವನ ಒಮ್ಮೆ ಕಳೆದು ಹೊದರೆ ಮತ್ತೆ ಮರಳುವುದಿಲ್ಲ. ವಿದ್ಯೆಯೇ ಆಸ್ತಿ, ಅದನ್ನು ಯಾರೂ ಕಸಿದುಕೊಳ್ಳಲು ಆಗುವುದಿಲ್ಲ, ತಂತ್ರಜ್ಞಾನವನ್ನೆಲ್ಲ ಕಲೆತು ತಮ್ಮ ಬುದ್ಧಿ ಸಾಮಥ್ರ್ಯ ಏನೆಂಬುದನ್ನು ತೋರಿಸಿ. ಹಾಗೆಯೇ ಮಾನವೀಯತೆಯನ್ನೂ ಕೂಡ ಅಳವಡಿಸಿಕೊಂಡು ಅಗತ್ಯವಿದ್ದವರಿಗೆ ಸಹಾಯ ನೀಡುವಂತವರಾಗಬೇಕೆಂದು ಹೇಳಿದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಕಾರವಾರ ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ ಮಾತನಾಡಿ ಬಿ ಎ, ಬಿಕಾಂ, ಬಿಎಸ್‍ಸಿ ಹಾಗೂ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಮತ್ತು ಪಿ ಸಿ ಗಳನ್ನು ಸರಕಾರ ವಿತರಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳು ಟ್ಯಾಬ್ ಮತ್ತು ಪಿ ಸಿ ಪಡೆಯಲು ಸಾಧ್ಯವಾಗುವದಿಲ್ಲ, ಸರಕಾರ ನೀಡಿರುವ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕಾಲೇಜಿನ ಕೀರ್ತಿಯನ್ನು ಎಲ್ಲಡೆ ಬೆಳಗಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ್ ಡಾ. ವೆಂಕಟೇಶ ಗಿರಿ ಮಾತನಾಡಿ ಕ್ಲಾಸ್ ರೂಮ್ ಗಳನ್ನು ಪ್ರೊಜೆಕ್ಟರ್, ವೈಟ್ ಬೋರ್ಡ್, ಯು ಪಿ ಎಸ್ ಮತ್ತು ಇಂಟರ್‍ನೆಟ್ ಸೌಲಭ್ಯಗಳನ್ನು ಹೊಂದಿಸುವ ಮೂಲಕ ಸ್ಮಾರ್ಟ್ ಕ್ಲಾಸಗಳನ್ನಾಗಿ ಮಾಡಲಾಗುತ್ತಿದೆ. ಉಪನ್ಯಾಸಕರು ಪಿ ಪಿ ಟಿ ವಿಡಿಯೋ ಆಡಿಯೋ ಮತ್ತು ಇಮೇಜ್‍ಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಪಾಠ ಮಾಡಬಹುದು. ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಅವುಗಳನ್ನು ಕಲಿಯಬಹುದಾಗಿರುತ್ತದೆ ಎಂದರು.

ಸರಕಾರಿ ಕಲಾ ಹಾಗೂ ವಿಜ್ಞಾನ ಕಾಲೇಜಿನ 8 ಮತ್ತು ಮಹಿಳಾ ಕಾಲೇಜಿನ 3 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಇಂದು ಟ್ಯಾಬ್ ಪಿ ಸಿ ಗಳನ್ನು ವಿತರಿಸಲಾಯಿತು. ಡಾ. ವಿಜಯಾ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಭಟ್ ಪ್ರಾರ್ಥನೆ ಹಾಗೂ ನಾಡಗೀತೆ ನಡೆಸಿಕೊಟ್ಟರು. ಪ್ರೋ. ರಾಜೇಶ್ವರಿ ಭಟ್ ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐ ಟಿ ಸಂಯೋಜಕ ಡಾ. ಸುದೀರ ಮನವಾಡಿ, ಐ ಕ್ಯೂ ಎ ಸಿ ಸಂಯೋಜಕ ಡಾ. ವಸಂತಕುಮಾರ ಬಿ, ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ್, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿಧ್ಯಾರ್ಥಿ ವೃಂದ ಉಪಸ್ಥಿತರಿದ್ದರು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...