ಮುಂಡಗೋಡ:ಘನತಾಜ್ಯದ ಘಟಕದ ತ್ಯಾಜಕ್ಕೆ ಬೆಂಕಿ ಇಲಾಖೆ ದಿವ್ಯ ನಿರ್ಲಕ್ಷ್ಯ

Source: so news | By MV Bhatkal | Published on 29th June 2019, 9:55 PM | Coastal News | Don't Miss |

ಮುಂಡಗೋಡ: ಇಲ್ಲಿನ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿರುವ ತ್ಯಾಜಕ್ಕೆ ಪದೇ ಪದೇ ಬೆಂಕಿ ಬೀಳುತ್ತಿದ್ದು ಗುರುವಾರವೂ ಬೆಂಕಿ ಬಿದ್ದು ಈ ಹೊಗೆಯಿಂದ ಅಕ್ಕ ಪಕ್ಕದ ನಿವಾಸಿಗಳಿಗೆ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ ಎಂದು ಪ.ಪಂ. ವಿರುದ್ಧ ಸಾರ್ವಜನಿಕರು ದೂರುತ್ತಿದ್ದಾರೆ.  
ಪಟ್ಟಣದಿಂದ ಸಿಟಿ ಫಾರ್ಮಗೆ  ರಸ್ತೆಯ ಪಕ್ಕದಲ್ಲಿ ಪಟ್ಟಣ ಪಂಚಾಯಿತಿಯ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕವಿದೆ. ಈ ಘಟಕದಲ್ಲಿ ಪಟ್ಟಣದೊಳಗಿನ ಮನೆ, ಮನೆಗಳಿಂದ, ಅಂಗಡಿಗಳಿಂದ ವಿವಿಧ ತ್ಯಾಜ್ಯ ವಸ್ತುಗಳನ್ನು ತಂದು ಶೇಖರಣೆ ಮಾಡಿ ಹಾಕಲಾಗುತ್ತಿದೆ. ಆದರೆ ಈ ಘಟಕದಲ್ಲಿ ಪದೇ ಪದೇ ಬೆಂಕಿ ಬಿದ್ದು ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡಿದೆ. ಈ ಹಿಂದೆಯೂ ಘಟಕದಲ್ಲಿ ನಾಲ್ಲ್ಕೈದು ಬಾರಿ ಬೆಂಕಿ ಬಿದ್ದಿದ್ದು ಮತ್ತೆ ಗುರುವಾರ ಬೆಳಗ್ಗೆ ಬೆಂಕಿ ಬಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಉದ್ದೇಶಪೂರ್ವಕವಾಗಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆಯೇ ಇದನ್ನು ನೋಡಿದ ಪ.ಪಂ. ಸಿಬ್ಬಂದಿ ಕುರುಡಜಾಣರಂತೆ ವರ್ತಿಸುತ್ತಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಏಕೆಂದರೆ ಈ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಕಾವಲುಗಾರನಿದ್ದರೂ ಪದೇ ಪದೇ ಬೆಂಕಿ ಬೀಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಪ್ರತಿ ಬಾರಿ ಬೆಂಕಿ ಬಿದ್ದಾಗ ಅಗ್ನಿಶಾಮಕದಳದವರಿಗೆ ತಿಳಿಸುವುದು ಅವರು ಬಂದು ಬೆಂಕಿಯನ್ನು ನಂದಿಸುವುದು ಸಾಮಾನ್ಯವಾಗಿರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.     

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...