ಭಟ್ಕಳದಲ್ಲಿ ಹಿಂದು-ಮುಸ್ಲಿಂ ಐಕ್ಯತೆಯ ಭಾವ. ಮುಸಲ್ಮಾನ ಬಾಂಧವರಿಂದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಗೆ ಸ್ವಾಗತ.

Source: SO News | By Laxmi Tanaya | Published on 4th March 2021, 10:39 PM | Coastal News |

ಭಟ್ಕಳ : ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಗೆ  ಭಟ್ಕಳ ಮಗ್ದುಮ್ ಕಾಲೊನಿಯ ಮುಸ್ಲಿಮ ಬಾಂಧವರಿಂದ ಗುರುವಾರ  ಆತ್ಮೀಯ ಸ್ವಾಗತ ನೀಡಲಾಯಿತು.

ಇದು ಭಟ್ಕಳ  ಪಟ್ಟಣದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಗೆ ಅತ್ಯುತ್ತಮ ಉದಾಹರಣೆ ಎಂದು ಭಾವಿಸಲಾಗಿದೆ. ತಾಲೂಕಿನ  ಕರಿಕಲ್ ನ  ಧ್ಯಾನ ಕೇಂದ್ರದಲ್ಲಿನ ಕಾರ್ಯಕ್ರಮಕ್ಕಾಗಿ ಶ್ರೀಗಳು ತೆರಳುತ್ತಿದ್ದ ವೇಳೆ ಅವರನ್ನು ಮಗ್ದುಮ್ ಕಾಲೋನಿ ನಿವಾಸಿಗಳು ಸ್ವಾಗತಿಸಿದರು.

 ಈ ಸಂದರ್ಭದಲ್ಲಿ ಶಾಹೀನ್ ಕ್ರೀಡಾ ಕೇಂದ್ರದ ಭಟ್ಕಳ ಅಧ್ಯಕ್ಷ ಸಮಿಯುಲ್ಲಾ ಇಟ್ಟಲ್, ಟಿಎಂಸಿ ಕೌನ್ಸಿಲರ್ ಇಸ್ಮಾಯಿಲ್ ಇಮ್ಷಾದ್, ಮಾಜಿ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯಕ್, ಮುಬಾಶೀರ್ ಹಲ್ಲಾರೆ, ಮೌಲಾನಾ ಇರ್ಫಾನ್ ಮೆಡಿಕಲ್, ಮೌಲಾನಾ ಫೈಜಾನ್ ಎಸ್.ಎಂ, ಅಬ್ದುಲ್ ಖಯೂಮ್ ಕೊಲಂಬೊ, ಮುಖ್ತಾರ್ ಮುಕ್ಸೇನಾರ್ ಇನ್ನಿತರರು ಇದ್ದರು.

Read These Next

ಮಂಗಳ ಗ್ರಹದ ಆಚ್ಚಾದನೆ ವೀಕ್ಷಣೆ

ಮಂಗಳೂರು : ಖಗೋಳದ ಅಪರೂಪ ವಿದ್ಯಮಾನವಾದ ಚಂದ್ರನಿಂದ ಮಂಗಳ ಗ್ರಹದ ಆಚ್ಚಾದನೆಯನ್ನು  ಎಪ್ರಿಲ್ 17 ರಂದು ಸಂಜೆ ಪಿಲಿಕುಳ ಪ್ರಾದೇಶಿಕ ...

ಭಟ್ಕಳದಲ್ಲಿ ಉದ್ಯೋಗ ಸಂದರ್ಶನ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು, ...

ಭಟ್ಕಳ ರಥೋತ್ಸವಕ್ಕೆ ಮತ್ತೆ ಕೊರೊನಾ ವಿಘ್ನ; ಜಾತ್ರೆ ನಡೆಸದಂತೆ ಸೂಚನೆ; ಧಾರ್ಮಿಕ ವಿಧಿವಿಧಾನಗಳಿಗೆ ಒಪ್ಪಿಗೆ

ತಾಲೂಕಿನ ಪ್ರಸಿದ್ಧ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವ ಆಚರಣೆಗೆ ಸತತ 2ನೇ ವರ್ಷ ಕೊರೊನಾ ಸೋಂಕು ವಿಘ್ನವಾಗಿ ...