ಆರೋಗ್ಯ ಇಲಾಖೆ ತುಂಬಾ ಕಟ್ಟೇಚರ ವಹಿಸಬೇಕು : ಉಪವಿಭಾಗಧಿಕಾರಿ ಈಶ್ವರ ಉಳ್ಳಾಗಡ್ಡಿ

Source: sonews | By Staff Correspondent | Published on 28th March 2020, 3:09 PM | Coastal News |

ಮುಂಡಗೋಡ : ಆರೋಗ್ಯ ಇಲಾಖೆ ತುಂಬಾ ಕಟ್ಟೇಚರವಹಿಸುವಂತೆ ಶಿರಸಿ ಉಪವಿಭಾಗಧಿಕಾರಿ ಈಶ್ವರ ಉಳ್ಳಾಗಡ್ಡಿ ತಾಲೂಕ ಆರೋಗ್ಯ ಆಡಳಿತಾಧಿಕಾರಿ ಡಾ. ಎಚ್.ಎಫ್ ಇಂಗಳೆ ತಿಳಿಸಿದರು.

ಅವರು ಶುಕ್ರವಾರ ತಹಶೀಲ್ದಾರ ಕಚೇರಿಯಲ್ಲಿ ನಡೆದ ಕೊರೋನಾ ವೈರಸ್ ತಡೆಗೆ ಕ್ರಮವಹಿಸಿರುವ ತಾಲೂಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮೂರನೇ ಹಂತ ತಲುಪದಂತೆ ನೋಡಿಕೊಳ್ಳವುದು ಅತ್ಯಾವಶ್ಯವಾಗಿದೆ. ಆದ್ದರಿಂದ ಆಯಾ ಪ್ರದೇಶಗಳ ಆಶಾಕಾರ್ಯಕರ್ತರಿಂದ ಹೊರಗಿನ ವ್ಯಕ್ತಿಗಳು ಹಾಗೂ ಹೋಮ್ ಕ್ವಾಂಟರ್ಸನಲ್ಲಿರುವ ವ್ಯಕ್ತಿಗಳ  ಮಾಹಿತಿ ಪಡೆಯುತ್ತಿರಬೇಕು. ಕೊರೋನಾ ವೈರಸ್ ತಡೆಗೆ ಕಾರ್ಯನಿರ್ವಹಿತ್ತಿರುವ ಇಲಾಖೆಯ ಸಿಬ್ಬಂದಿಗಳಿಗೆ ಮಾಸ್ಕ ವಿತರಿಸಬೇಕು ಎಂದರು.

ಸಾರ್ವಜನಿಕರಿಗೆ ಆಹಾರ ಸಾಮಗ್ರೀಗಳು, ಔಷಧಿ, ತರಕಾರಿ ಹಣ್ಣು ಕುಡಿಯುವ ನೀರು ತಡೆಯಾಗದ ಹಾಗೆ ಕ್ರಮ ವಹಿಸಬೇಕು ಎಂದು ತಹಶೀಲ್ದಾರ ಶ್ರೀಧರ ಮುಂದಲಮನೆ ತಿಳಿಸಿದರು ಅವರ ಈ ಕುರಿತು ಕ್ರಮ ವಹಿಸಿರುವ ಬಗ್ಗೆ ಮಾಹಿತಿ ನೀಡಿ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಣಾಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ ಮನೆ ಮನೆಗಳಿಗೆ ಆಹಾರ ಸಾಮಗ್ರೀಗಳು, ಔಷಧಿ, ತರಕಾರಿ ಹಣ್ಣು ಕುಡಿಯುವ ನೀರು ಮಾರಾಟ ಮಾಡುವ ಕ್ರಮ ವಹಿಸಿದ ಮಾಹಿತಿ ನೀಡಿದರು. ಮನೆ ಮನೆಗಳಿಗೆ ತೆರಳಿ ಮಾರಾಟ ಮಾಡುವವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಂದ ಹಾಗೂ ಗ್ರಾಮಾಂತರ  ಪ್ರದೇಶಗಳ ತಾಲೂಕ ಪಂಚಾಯತ್ ಕಾರ್ಯನಿರ್ವಣಾಧಿಕಾರಿಗಳಿಂದ ಹಾಗೂ ಪಿಡಿಒ ಗಳಿಂದ ಪರವಾನಿಗೆ ಪಡೆಯಬೇಕು ಇವೇಲ್ಲವೂ ತಹಶೀಲ್ದಾರ ಗಮನಕ್ಕೆ ತರಬೇಕು ಎಂದರು. ಆಯಾ ಪದಾರ್ಥಗಳ ಮಾರಾಟಗಾರರಿಗೆ ಪರವಾನಿಗೆ ಪತ್ರ ನೀಡಲಾಗುತ್ತಿದೆ. ಮಾರಾಟಗಾರರು ಇಂತಹ ಸನ್ನಿವೇಶದಲ್ಲಿ ಲಾಭದ ದೃಷ್ಠಿ ಇರುಬಾರದು ಸಮಾಜೀಕ ಸೇವೆ ಎಂದು ಭಾವಿಸಿ ಮಾರಾಟ ಮಾಡಬೇಕು. ಅತಿ ಕಡಿಮೆ ಲಾಭ ಪಡೆಯುವಂತಾಗಬೇಕು. ಹೆಚ್ಚು ಲಾಭ ಪಡೆದು ಮಾರಾಟಮಾಡಿದ ಕುರಿತು ಮಾಹಿತಿ ಬಂದರೆ ಅವರ ಪರವಾನಿಗೆ ರದ್ದು ಮಾಡಿ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ ಮುಂದಲಮನೆ ತಿಳಿಸಿದರು.

ಕೊರೋನಾ ವೈರಸ್ ತಡೆಯಲ್ಲಿ ಸಾರ್ವಜನಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಜೀವ ವಿಮೆಯನ್ನು ಘೋಷಿಸಿರುವ ಸರಕಾರ  ಪತ್ರಕರ್ತರಿಗೂ ವಿಸ್ತರಿಸುವಂತೆ ಸರಕಾರಕ್ಕೆ ತಿಳಿಸಬೇಕು ಎಂದು ಪತ್ರಕರ್ತ ನಜೀರುದ್ದಿನ ತಾಡಪತ್ರಿ ವಿಭಾಗಧಿಕಾರಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಇಒ ಪ್ರವೀಣ ಕಟ್ಟಿ, ಆರೋಗ್ಯ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ, ಪಿಆಯ್ ಶಿವಾನಂದ ಚಲವಾದಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ್ ಪಟ್ಟಣಶಟ್ಟಿ ಇದ್ದರು.
 

Read These Next

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...