ಹಿರಿಯ ರಂಗಕರ್ಮಿ ನಾಡೋಜ ಸುಭದ್ರಮ್ಮ ಮನ್ಸೂರ ನಿಧನ

Source: sonews | By Staff Correspondent | Published on 16th July 2020, 12:26 PM | State News |

ಬೆಂಗಳೂರು: ಹಿರಿಯ ರಂಗಭೂಮಿ ಕಲಾವಿದೆ, ಗಾಯಕಿ, ಸುಭದ್ರಮ್ಮ ಮನ್ಸೂರ್‌ ಬುಧವಾರ ಮಧ್ಯರಾತ್ರಿ 11.30ರ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ಆಗಿತ್ತು.

ಬಳ್ಳಾರಿ ನಗರದ ರೇಡಿಯೋಪಾರ್ಕ್‌ ಪ್ರದೇಶದ ಅವರ ಮನೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಅಲ್ಲಿನ ವಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ. ಸುಭದ್ರಮ್ಮ ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಹಂಪಿ‌ ಕನ್ನಡ ವಿವಿಯ ನಾಡೋಜ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಯಲಯದ ಗೌರವ ಡಾಕ್ಟರೇಟ್, ರಾಜ್ಯೋತ್ಸವ, ನಾಟಲ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

Read These Next