ಶಿವಮೊಗ್ಗ: ಬಡವರ ಹಸಿವಿನ ಮೇಲೆ ಸರಕಾರದ ವ್ಯಾಪಾರ : ಶಿವಮೊಗ್ಗ ರೈತ ಮಹಾಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್ ಆಕ್ರೋಶ

Source: VB | By S O News | Published on 21st March 2021, 9:10 PM | National News |

ಶಿವಮೊಗ್ಗ: ಸರಕಾರ ದೇಶದ ಬಡವರ ಹಸಿವಿನ ಮೇಲೆ ವ್ಯಾಪಾರ ನಡೆಸುತ್ತಿದೆ. ಬಂಡವಾಳಶಾಹಿಗಳು ರೈತರ ರೊಟ್ಟಿ, ಅನ್ನವನ್ನು ತಮ್ಮ ತಿಜೋರಿಗಳಲ್ಲಿ ಬಂಧಿಸಿಡಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು. ಅದಕ್ಕಾಗಿ ರೈತ ಹೋರಾಟ ತೀವ್ರಗೊಳಿಸಬೇಕು ಎಂದು ಬಿಕೆಯು ವಕ್ತಾರ, ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಶಿವಮೊಗ್ಗ ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆದ ರೈತ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ರೈತರನ್ನು ಮೋಸ ಮಾಡಲು ಯತ್ನಿಸುತ್ತಿದೆ. ಸರಕಾರ ರೈತರ ಹಾಲು, ಬೀಜ, ವಿದ್ಯುತ್, ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಯುವ ಜನರನ್ನು ಭೂಮಿ ಜೊತೆ ಬೆಸೆಯುವ ಕೆಲಸ ಮಾಡಬೇಕು ಎಂದ ಅವರು, ದೊಡ್ಡ ಕಂಪೆನಿಗಳು ಬಂದು

ಹದಿನೈದು ಸಾವಿರಕ್ಕೂ ಅಧಿಕ ರೈತರು ಭಾಗಿ
 ದಕ್ಷಿಣ ಭಾರತದ ಮೊದಲ ಐತಿಹಾಸಿಕ ರೈತ ಮಹಾಪಂಚಾಯತ್‌ಗೆ ಸಮಾಜವಾದಿ ಹೋರಾಟದ ತವರು ನೆಲ, ರೈತ ಚಳವಳಿಯ ಹೋರಾಟದ ನೆಲವಾದ ಶಿವಮೊಗ್ಗ ಸಾಕ್ಷಿಯಾಯಿತು. ಐತಿಹಾಸಿಕ ಮಹಾಪಂಚಾಯತ್‌ನಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರಣಕಹಳೆ ಮೊಳಗಿಸಿದರು.

ಪ್ರಜಾತಾಂತ್ರಿಕ ವ್ಯವಸ್ಥೆಯ ಕಗ್ಗೋಲೆ

ಕೇಂದ್ರರ ಸರಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಕಾನೂನುಗಳು
ಹಾಗೂ ರಾಜ್ಯ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಂದಿರುವ ತಿದ್ದುಪಡಿ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಸಂಸತ್ತಿನಲ್ಲಿ ಕನಿಷ್ಠ ಚರ್ಚೆಯೂ ಆಗದೆ, ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲಾಗಿದೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಯ ಕಗ್ಗೂಲೆ ಎಂದು ರಾಜ್ಯ ರೈತ ಸಂಘದ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಟೀಕಿಸಿದ್ದಾರೆ.

ನೃತ್ಯಗಾರ್ತಿ ಗಾಯಗೊಂಡರೆ ಟೀಟ್ ಮಾಡುವ ಪ್ರಧಾನಿಯವರು ರೈತರು ಸತ್ತರೂ ಪ್ರತಿಕ್ರಿಯಿಸುವುದಿಲ್ಲ

ದಿಲ್ಲಿಯಲ್ಲಿ ಒಬ್ಬ ವ್ಯಕ್ತಿ ದೇಶವನ್ನು ది ಮಾರಾಟಮಾಡುತ್ತಿದ್ದಾನೆ. ಆದರೆ, ನೀವು ಕೂತು ಮಾರಾಟ ಮಾಡುವುದನ್ನು ನೋಡುತ್ತಿದ್ದೀರಿ. 'ವಾರೆ ವಾ ಮೇರೆ ದೇಶ್ ಕಿ ಜನತಾ' ಎಂದು ರೈತ ಮುಖಂಡ ಯುದ್ಧವೀರ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ರೈತಮಹಾ ಪಂಚಾಯತ್‌ನಲ್ಲಿ ಮಾತನಾಡಿದ ಅವರು, ಮುಂಬೈಯಲ್ಲಿ ಯಾರೋ ಡ್ಯಾನ ಮಹಿಳೆ ಗಾಯಗೊಂಡರೆ ಟ್ವೀಟ್ ಮಾಡುವ ಪ್ರಧಾನಿ ಮೋದಿಯವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಸತ್ತರೂ ಪ್ರತಿಕ್ರಿಯೆ ಸಿಲ್ಲ. ಇದು ಈ ದೇಶದ ದುರಂತ ಎಂದು ಹೇಳಿದರು.

 

ಮಹಾಪಂಚಾಯತ್ ನಿರ್ಣಯಗಳು

ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ರದ್ದುಮಾಡುವಂತೆ ಆಗ್ರಹಿಸಿ ನಗರದ ಸೈನ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್‌ನಲ್ಲಿ ಮೂರು ರೈತ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯುವುದು ಸೇರಿದಂತೆ ಹತ್ತು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

1. ಕೇಂದ್ರ ಸರಕಾರ ಸರ್ವಾಧಿಕಾರಿ ರೀತಿಯಲ್ಲಿ ಜಾರಿಗೊಳಿಸಿರುವ ಮೂರು ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ಕಾಯ್ದೆಗಳನ್ನು ಬೇಷರತಾಗಿ ಈ ಕೂಡಲೇ ಹಿಂಪಡೆಯಬೇಕು.

2. ರಾಜ್ಯ ಸರಕಾರ ಜನವಿರೋಧಿಯಾಗಿ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳಿಗೆ ತಂದ ತಿದ್ದುಪಡಿಗಳನ್ನು ಕೂಡಲೇ ರದ್ದುಪಡಿಸಬೇಕು.

3.  ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿ, ಈಗ ರೈತ ವಿರೋಧಿಯಾದ ಕಾಯ್ದೆಗಳನ್ನು ಜಾರಿಗೆ ತರುತ್ತಿರುವ ಮತ್ತು ಕರ್ನಾಟಕದ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಕನಿಷ್ಠ ಸೌಜನ್ಯಕ್ಕೂ ರೈತ ಸಂಘಟನೆಗಳನ್ನು ಕರೆದು ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಡೆಯನ್ನು ಮಹಾ ಪಂಚಾಯತ್ ಖಂಡಿಸಿದೆ.

4  ಸ್ವಾಮಿನಾಥನ್ ಮತ್ತು ಪ್ರಕಾಶ್ ಕಮ್ಮರಡಿಯವರ ವರದಿಗಳನ್ನು ಆಧರಿಸಿ, 'ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಿ, ಅದರ ಅನುಷ್ಠಾನವನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತರಬೇಕು.
5. ಬಗರ್ ಹುಕುಂ ರೈತರ ಭೂಮಿಗಳನ್ನು ಮತ್ತು ಸರಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವ ಬಡಜನರ ಜಾಗಗಳನ್ನು ಕೂಡಲೇ
ಮಂಜೂರುಗೊಳಿಸಬೇಕು.

6. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂಮಿ ಪರಬಾರೆ ತಡೆ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆ ತರುವಂತೆ ಕಂದಾಯ ನ್ಯಾಯಾಲಯಗಳು ಆದೇಶ ನೀಡುತ್ತಿರುವುದರಿಂದ ಕೂಡಲೇ ಸದರಿ PTCL ಕಾಯ್ದೆಗೆ ತಿದ್ದುಪಡಿ ತಂದು ಮೂಲ ಕಾಯ್ದೆಯನ್ನು ಬಲಪಡಿಸಬೇಕು.

7. ಜನಸಾಮಾನ್ಯರಿಗೆಲ್ಲರಿಗೂ, ಎಲ್ಲಾ ಮೂಲ ಅಗತ್ಯ ಧಾನ್ಯಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು.

8. ಮಲೆನಾಡಿನ 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡುವ ಸಲುವಾಗಿ ಐದು ವರ್ಷಗಳ ಹಿಂದೆ ಸಂಪೂರ್ಣ ಸ್ಥಗಿತಗೊಂಡಿರುವ MPM ಕಾರ್ಖಾನೆ ಹೆಸರಿಗೆ, ಕಾನೂನು ಬಾಹಿರವಾಗಿ 40 ವರ್ಷಕ್ಕೆ ಲೀಸ್ ಮಾಡಿರುವ ಕ್ರಮವನ್ನು ಈ ಮಹಾಪಂಚಾಯತ್ ಖಂಡಿಸುತ್ತದೆ ಮತ್ತು ಸದರಿ ಭೂಮಿಯನ್ನು ಅರಣ್ಯ ಇಲಾಖೆ ವಾಪಸ್ ಪಡೆಯಬೇಕು.

9. ಪಶ್ಚಿಮಘಟ್ಟ ಮತ್ತು ಮಲೆನಾಡಿನ ಜನರನ್ನು ಅಭದ್ರತೆಯಿಂದ ಬದುಕುವಂತೆ ಮಾಡಿರುವ ಕಸ್ತೂರಿರಂಗನ್, ಸೆಕ್ಷನ್-4, ಹುಲಿಯೋಜನೆ, ಆಭಯಾರಣ್ಯ, ರಕ್ಷಿತಾರಣ್ಯ ಮುಂತಾದ ಯೋಜನೆಗಳನ್ನು ಕೂಡಲೇ ರದುಗೊಳಿಸಬೇಕು.

10. ಜನರೊಡನೆ ಸಮಾಲೋಚನೆ ನಡೆಸಿ ಮಲೆ ಮತ್ತು ನಾಡು ಎರಡೂ ಉಳಿಯುವಂತಹ ಜನಸ್ನೇಹಿ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು.

ನಿಮ್ಮ ಜಮೀನನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡುತ್ತವೆ. ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಸಾಲ ಕೊಡುತ್ತಾರೆ. ರೈತರ ಬೆಳೆಗೆ ಬೆಲೆ ಸಿಗದೆ ಸಾಲ ವಾಪಸ್ ಮಾಡದಿದ್ದರೆ ಭೂಮಿ ಕಿತ್ತುಕೊಳ್ಳುತ್ತಾರೆ. ರೈತ ತನ್ನದೇ ಜಮೀನಿನಲ್ಲಿ ಜೀತ ಮಾಡುವ ಕಾಲಬರ ಲಿದೆ. ಅದನ್ನು ತಡೆಯಲು ನಮ್ಮ ಹೋರಾಟೆ  ನಡೆಯುತ್ತಿದ ಎಂದರು.

ಸರಕಾರದ ವ್ಯಾಪಾರ

ಸರಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಸರಕಾರಿ ನೌಕರರ ಪಿಂಚಣಿ ಕಿತ್ತುಕೊಂಡು ಸಂಸದರು, ಶಾಸಕರಿಗೆ ಸೌಲಭ್ಯಗಳನ್ನು ನೀಡುತ್ತಿದೆ. ಪೊಲೀಸರನ್ನು ಸರಕಾರಶೋಷಿಸುತ್ತಿದೆ. ರೈತರ ಬೆಳೆಗಳಿಗೆ ಬೆಲೆ ನಿಗದಿಪಡಿಸಬೇಕಾದವರು ಸರಕಾರವಲ್ಲ, ಬದಲಿಗೆ ರೈತರು. ಆ ದಿನ ಬರುವವರೆಗೂ ಹೋರಾಡೋಣ. ಯಾವಾಗ ಜೈರಾಮ್ ಮತ್ತು ಜೈಭೀಮ್ ಎಂಬ ಎರಡು ಘೋಷಣೆಗಳು ಒಟ್ಟಿಗೆ ಮೊಳಗುತ್ತವೆಯೋ ಆಗ ಜಯ ನಮ್ಮದಾಗುತ್ತದೆ. ಅದಕ್ಕೆ ಕಾರ್ಮಿಕರು ಜೊತೆಗೂಡಬೇಕು ಎಂದರು.

ಕಾಯ್ದೆ ಹಿ೦ಪಡೆ ಯುವ೦ತೆ ಮಾತನಾಡುತ್ತಿರುವ ಯುವಜನರು, ಸರಕಾರವನ್ನು ಹಿಂಪಡೆದರೆ ಏನಾಗುತ್ತದೆ ಎಂದು ಸರಕಾರಯೋಚಿಸಬೇಕು. ಯುವಜನರು ರೊಚ್ಚಿಗೇಳುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು. ಬೇರೆ ಸರಕಾರ ವಾಗಿದ್ದರೆ ಎಚ್ಚೆತ್ತುಕೊಳ್ಳುತ್ತಿತ್ತು. ಆದರೆ, ಈ ಸರಕಾರವನ್ನು ಕಾರ್ಪೊರೇಟ್ ಕುಳಗಳು ನಡೆಸುತ್ತಿದ್ದು, ಅದನ್ನು ಕಿತ್ತೊಗೆಯುವ ಕೆಲಸ ನಮ್ಮದು ಎಂದರು.

 

ಇಂದು ದಿಲ್ಲಿಯಲ್ಲಿ ಎಲ್ಲಾ ಗಡಿಗಳಲ್ಲಿ ಹೋರಾಟ ನಡೆಯುತ್ತಿದೆ.
ಇದು ದೀರ್ಘ ಹೋರಾಟ.ದಿಲ್ಲಿ ಮಾದರಿಯಲ್ಲಿ ಬೆಂಗಳೂರನ್ನು ನಾಲ್ಕು ದಿಕ್ಕುಗಳಲ್ಲಿ ಸುತ್ತುವರಿದು ಹೋರಾಟ ಮುನ್ನಡೆಸಬೇಕು. ಕರಾಳ ಕಾನೂನುಗಳು ವಾಪಸ್ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಈ ಹೋರಾಟವನ್ನು ಮುಂದುವರಿಸಬೇಕು.
| ರಾಕೇಶ್ ಟಿಕಾಯತ್, ಬಿಕೆಯು ವಕ್ತಾರ, ರೈತ ಹೋರಾಟಗಾರ

 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...