ಹೊಸದಿಲ್ಲಿ: ಕೃಷಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರಕಾರ ಸಿದ್ದ; ನರೇಂದ್ರ ಸಿಂಗ್ ತೋಮರ್

Source: VB | By S O News | Published on 9th March 2021, 9:15 AM | National News |

ಹೊಸದಿಲ್ಲಿ: ನೂತನ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.

ಶನಿವಾರ ಕೃಷಿ ದೃಷ್ಟಿಕೋನದ ಕುರಿತ 5ನೇ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಭಟನೆ ನಡೆಸುತ್ತಿರುವ ರೈತರ ಭಾವನೆಗಳಿಗೆ ಗೌರವ ನೀಡಿ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಸಿದ್ಧವಿದೆ ಎಂದಿದ್ದಾರೆ.

ಆದರೆ, ಕೇಂದ್ರ ಸರಕಾರದ ಈ ಪ್ರಸ್ತಾವ ಸುಧಾರಿತ ಕಾಯ್ದೆಗಳಲ್ಲಿ ಯಾವುದಾದರೂ ದೋಷಗಳು ಇವೆ ಎಂದು ಅರ್ಥವಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಕಳೆದ ತಿಂಗಳು ರಾಜ್ಯ ಸಭೆಯಲ್ಲಿ ಅವರು ಇದೇ ಹೇಳಿಕೆ ನೀಡಿದ್ದರು.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಪಡೆದುಕೊಳ್ಳಲು ರೈತರಿಗೆ ನೆರವು ನೀಡಲು ಸಂಸತ್ತಿನಲ್ಲಿ ಸೆಪ್ಟೆಂಬರ್‌ನಲ್ಲಿ ಈ ಮೂರು ಕಾಯ್ದೆಗಳನ್ನು ಅಂಗೀಕರಿಸಲಾಗಿತ್ತು. ಈ ಕಾಯ್ದೆಗಳು ಕೃಷಿ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಭಿನ್ನಮತ, ವಿರೋಧ, ಅಭಿಪ್ರಾಯ ಭೇದಕ್ಕೆ ಅವಕಾಶ ಇದೆ. ಆದರೆ, ದೇಶಕ್ಕೆ ಹಾನಿಕರವಾದ ವಿರೋಧ ಇರಬಾರದು ಎಂದು ಅವರು ಹೇಳಿದರು. ಈ ಪ್ರತಿಭಟನೆಗಳು ರೈತರ ಹಿತದೃಷ್ಟಿಯಿಂದ ನಡೆಯುತ್ತಿವೆ ಎಂಬ ಬಗ್ಗೆ ಮಾತನಾಡಲು ಯಾರೊಬ್ಬರೂ ಸಿದ್ಧರಿಲ್ಲ ಎಂದು ತೋಮರ್‌ ಹೇಳಿದರು. ಅಲ್ಲದೆ, ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ಪ್ರತಿಪಕ್ಷವನ್ನು ಅವರು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರಕಾರ ಸಿದ್ಧ: ಈ ಕಾನೂನಿನಲ್ಲಿ ಇರುವ ದೋಷಗಳನ್ನು ಗುರುತಿಸುವಲ್ಲಿ ರೈತರ ಒಕ್ಕೂಟ ಹಾಗೂ ಪ್ರತಿಪಕ್ಷಗಳು ವಿಫಲವಾಗಿವೆ ಎಂದು ತೋಮರ್‌ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಯಾವುದೇ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಸ್ವತಂತ್ರರು. ಆದರೆ ರೈತರನ್ನು ಬಲಿ ಕೊಟ್ಟು ಅಥವಾ ಕೃಷಿ ಹಿತಾಸಕ್ತಿಗೆ ಉಂಟು ಮಾಡಿ ಅಥವಾ ಕೃಷಿ ಧಕ್ಕೆ ಆರ್ಥಿಕತೆಗೆ ಬೆಲೆ ತೆತ್ತು ರಾಜಕೀಯ ಮಾಡುವ ಅಗತ್ಯ ಇದೆಯೇ? ಎಂಬ ಬಗ್ಗೆ ಹೊಸ ತಲೆಮಾರು ಆಲೋಚಿಸಬೇಕು ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ರೈತರ ಗೌರವವನ್ನು ಎತ್ತಿ ಹಿಡಿಯುವುದು ಸರಕಾರದ ಆದ್ಯತೆ. ಆದುದರಿಂದ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರಲು ಸರಕಾರ ಸಿದ್ದವಾಗಿದೆ ಎಂದು ಅವರು ಹೇಳಿದರು.

ದೊಡ್ಡ ರೀತಿಯ ಸುಧಾರಣೆಗೆ ಯಾವಾಗಲೂ ವಿರೋಧ ಇರುತ್ತದೆ. ಆದರೆ, ಉದ್ದೇಶ ಹಾಗೂ ನೀತಿಗಳು ಸರಿಯಾಗಿದ್ದರೆ, ಜನರು ಅದನ್ನು ಒಪ್ಪಿಕೊಳ್ಳಬೇಕು ಎಂದು ನರೇಂದ್ರ ಸಿಂಗ್ ತೋಮರ್‌ ಹೇಳಿದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...