ಸುಳ್ಳಿನ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ-ಎಚ್.ಕೆ.ಪಾಟೀಲ್

Source: sonews | By Staff Correspondent | Published on 25th October 2020, 12:48 AM | Coastal News |

ಭಟ್ಕಳ:ದುಷ್ಟಾಲೋಚನೆಯೊಂದಿಗೆ ಅಧಿಕಾರಿಕ್ಕೆ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಅವರು ಶನಿವಾರ ಇಲ್ಲಿನ ಹೊಟೇಲ್‍ವೊಂದರಲ್ಲಿ  ಪಶ್ಚಿಮ ಪದವಿಧರ ಕೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ.ಕುಬೇರಪ್ಪ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.  

ಅಕ್ಟೋಬರ್ 28ರಂದು ನಡೆಯುವ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡ ಅವರು, ಈ ಕ್ಷೇತ್ರ ತಮ್ಮ ರಾಜಕೀಯ ಭವಿಷ್ಯವನ್ನೇ ಬದಲಾಯಿಸಿದೆ. ಇದರ ಋಣ ತೀರಿಸಲು ಸಾಧ್ಯವಿಲ್ಲ. ಕಳೆದ 12 ವರ್ಷಗಳಿಂದ ನಮ್ಮಿಂದ ದೂರವಾಗಿದ್ದ ಈ ಕ್ಷೇತ್ರ ಈಗ ಮತ್ತೆ ನಮಗೆ ಒಲಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಜ್ಞಾವಂತ ಪದವಿಧರ ಮತದಾರ ಈಗ ಶೋಷಣೆಯ ವಿರುದ್ಧ ದ್ವನಿ ಎತ್ತಲಿದ್ದಾನೆ. ಈ ಚುನಾವಣೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದ ಅವರು, ಮೋದಿಜಿಯವರ ಸುಳ್ಳು ಈಗ ಅವರಿಗೆ ಮುಳುವಾಗಲಿದೆ ದೇಶದ ಜನರಿಗೆ ಸುಳ್ಳು ಹೇಳುವುದರ ಮೂಲಕ ಇಲ್ಲಿಯ ತನಕ ವಂಚಿಸುತ್ತ ಬಂದಿದ್ದು ಎಲ್ಲವನ್ನೂ ಜನರು ನೆನಪಿಟ್ಟುಕೊಂಡಿದ್ದಾರೆ ಎಂದರು. 

ಈ ಚುನಾವಣೆಯಿಂದ ವಾತಾವರಣ ಬದಲಾಗುತ್ತಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೇ, ಬಿಜೆಪಿ ಜನರ ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ಆಡಳಿತ ನಡೆಸಿದೆ. ಕೃಷಿ ವಿರೋಧಿ ಕಾನೂನನ್ನು ಪಾಸ್ ಮಾಡುವ ಸಲುವಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನ ಧಿಕ್ಕರಿಸಿ, ರಾಷ್ಟ್ರದ ಸಂಸದೀಯ ವ್ಯವಸ್ಥೆ ಗೆ ಅಪಮಾನ ಮಾಡಿದ್ದಾರೆಂದು ಆಪಾದಿಸಿದ ಎಚ್ ಕೆ ಪಾಟೀಲ್,  ಸ್ವಿಜಲ್ಯಾರ್ಂಡ್ ನಿಂದ ಬ್ಲಾಕ್ ಮನಿ ತರ್ತೇವೆ. ಅದನ್ನ ನಿಮ್ಮ ಅಕೌಂಟ್ ಗೆ ಹಾಕ್ತೀವಿ ಅಂತ ಬಡವರಿಗೆ ಹೇಳಿದ್ರು. ಆದರೆ ಇದುವರೆಗೆ ಭರವಸೆ  ಈಡೇರಿಲ್ಲ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇವೆ ಎಂದಿದ್ದರು. ಆದರೆ ಉದ್ಯೋಗ ನಷ್ಟ ಮಾಡಿದ್ದಾರೆ. ಬಿಜೆಪಿಯ ಮೋಸ, ಸುಳ್ಳುಗಾರಿಕೆಗೆ ಜನ ಬೇಸತ್ತಿದ್ದಾರೆ. ಈಡಿ, ಸಿಬಿಐ, ಇನ್ಕಮ್ ಟ್ಯಾಕ್ಷ್ ದುರಪಯೋಗಪಡಿಸಿಕೊಂಡಿದ್ದಾರೆ.

ಬಿಹಾರದಲ್ಲಿ  ಸರ್ಕಾರ  ಬಂದ್ರೆ ವ್ಯಾಕ್ಸಿನ್ ಕೊಡುವ ಭರವಸೆಗೆ ಅರ್ಥವಿಲ್ಲ. ಶವವನ್ನ ಕೊಡುವುದಕ್ಕೆ  ಲಂಚಾವತಾರ ಆಗಿದೆ. ಇನ್ನು ವ್ಯಾಕ್ಸಿನ್ ಮಾತೆಲ್ಲಿ ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ಆಡಳಿತದಲ್ಲಿ ಯುವಕರು ಭೃಮ ನಿರಸನವಾಗಿದ್ದಾರೆ. ಕುಬೇರಪ್ಪನವರು ಹೋರಾಟಗಾರರು. ಹೀಗಾಗಿ ಅವರನ್ನ ಆಯ್ಕೆ ಮಾಡಿ. ಕುಬೇರಪ್ಪನವರಿಗೆ ವೋಟ್ ಮಾಡಿದರೇ, ತಮಗೆ, ಆರ್ ವಿ ದೇಶಪಾಂಡೆ ಅವರಿಗೆ ಬಲ ನೀಡಿದಂತಾಗಿದೆ ಎಂದು ಪಾಟೀಲ್ ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಮಾಂಕಾಳ್ ವೈದ್ಯ, ತಂಝೀಮ್ ಅಧ್ಯಕ್ಷ ಪರ್ವೇಝ್ ಯಸ್ ಯಂ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ್ ನಾಯ್ಕ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ್ ಮತ್ತಿತರರು ಉಪಸ್ಥಿತರಿದ್ದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...