ಸಾವಿರಾರು ಭಕ್ತರ ಸಮೂಹ ದಲ್ಲಿ ನಡೆದ ಚೆನ್ನಪಟ್ಟಣ ಹನುಮಂತ ದೇವರ ಬಹ್ಮ ರಥೋತ್ಸವ

Source: so news | By Manju Naik | Published on 14th April 2019, 1:28 AM | Coastal News | Don't Miss |

ಭಟ್ಕಳ:ಪ್ರಸಿದ್ಧ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಮಹಾ ರಥೋತ್ಸವವು ಸಾವಿರಾರು ಭಕ್ತಾಧಿಗಳ ಜಯಫೋಷಗಳ ನಡುವೆ ವೈಭವಯುತವಾಗಿ ಶನಿವಾರದಂದು ರಾಮನವಮಿಯಂದು ಸಂಪನ್ನಗೊಂಡಿತು.
ಮಹಾರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ರಥಕಾಣಿಕೆಗಾಗಿ ಸರತಿಯ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀದೇವರಿಗೆ ಅರ್ಪಿಸಿದರು.ಸಂಜೆ 5.00ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. 
ಇದಕ್ಕೂ ಪೂರ್ವದಲ್ಲಿ ವಾಡಿಕೆಯಂತೆ ಶಿರ್ಕಿನ ಅನ್ಸಾರಿ, ಶಾಬಂದ್ರಿ ಮನೆ ಮತ್ತು ಜೈನ ಮನೆತನಕ್ಕೆ ಆಮಂತ್ರಣ ನೀಡಲಾಯಿತು. ಮಹಾರಥವನ್ನು ದೇವಸ್ಥಾನದ ಎದುರಿನ ಹೂವಿನ ಪೇಟೆಯಿಂದ ಮಾರಿಗುಡಿಯ ಮೂಲಕ ಜನತಾ ಬ್ಯಾಂಕಿನ ಎದುರಿನಿಂದ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಎಳೆಯಲಾಯಿತು. ರಥೋತ್ಸವದ ಸಂದರ್ಬದಲ್ಲಿ ಸುಮಾರು 20ಸಾವಿಕ್ಕೂ ಅಧಿಕ ಭಕ್ತಾಧಿಗಳು ಪಾಲ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ.
ಭಟ್ಕಳ ಶಾಸಕ ಸುನೀಲ ನಾಯ್ಕ,ಹಾಗೂ ಮತ್ತೀತರ ಗಣ್ಯರು ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಮೊಗೇರ ಹಾಗೂ ಸರ್ವ ಸದಸ್ಯರು ಹಾಜರಿದ್ದರು. 
ಜಾತ್ರಾ ಮಹೋತ್ಸವಕ್ಕೆ ಭಟ್ಕಳ ಉಪವಿಭಾಗದ ಡಿವೈಎಸ್‍ಪಿ ವೆಲೆಂಟೈನ್ ಡಿಸೋಜಾ ನೇತೃತ್ವದಲ್ಲಿ 2 ಡಿವೈಎಸ್ಪಿ ಸಹಿತ ಸಿಪಿಐ ಗಣೇಶ ಕೆ.ಎಲ್., ಪಿಎಸ್‍ಐಗಳು, ಕಾನಸ್ಟೇಬಲ್ಸಗಳು ಸುರಕ್ಷತೆಯನ್ನು ಒದಗಿಸಿದ್ದು ಶಾಂತಿಯುತವಾಗಿ ಮಹಾರಥೋತ್ಸವ ಜರುಗಿತು.

Read These Next

ಜು.27,28 ರಂದು ಭಟ್ಕಳದ ವೇಲ್ಪೇರ ಆಸ್ಪತ್ರೆಯಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

ಕೇರಳದ ಪ್ರಖ್ಯಾತ ಮೈತ್ರಾ ಆಸ್ಪತ್ರೆ ಹಾಗು ವೆಲ್ಫೇರ್ ಆಸ್ಪತ್ರೆ ಭಟ್ಕಳ ಇದರ ಸಹಯೋಗದೊಂದಿಗೆ ಜುಲೈ 27 ಮತ್ತು 28ರಂದು ಉಚಿತ ಹೃದ್ರೋಗ್ರ ...

ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'