ಇಂದೇ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದ ಬಿಜೆಪಿ; ರಾತ್ರಿಯಿಡಿ ಸದನದಲ್ಲಿ ಧರಣಿ ನಡೆಸಲು ನಿರ್ಧಾರ

Source: S.O. News Service | By Manju Naik | Published on 18th July 2019, 8:01 PM | State News | Don't Miss |

ಬೆಂಗಳೂರು: ಮೈತ್ರಿ ಸರ್ಕಾರದ ರೆಬಲ್‌ ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರಕ್ಕೆ ಬಹುಮತದ ಕೊರತೆ ಎದುರಾಗಿದ್ದು, ಇಂದು ವಿಶ್ವಾಸ ಮತಯಾಚನೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ, ಸುಪ್ರೀಂ ತೀರ್ಪಿನ ವಿಚಾರವನ್ನು ಹಿಡಿದು ಮೈತ್ರಿ ನಾಯಕರು ಹಗ್ಗಜಗ್ಗಾಟ ಮುಂದುವರಿಸಿದ್ದರೆ, ಇತ್ತ ಬಿಜೆಪಿ ಇಂದು ಎಷ್ಟು ಹೊತ್ತು ಕಳೆದರೂ ವಿಶ್ವಾಸ ಮತಯಾಚನೆ ಮಾಡಿಯೇ ತೀರಬೇಕು ಎಂದು ಪಟ್ಟು ಹಿಡಿದಿದೆ.
ಸದನದಲ್ಲಿ ಮಾತನಾಡಿದ ಬಿಜೆಪಿ ವಿಪಕ್ಷ ನಾಯಕ ಬಿ ಎಸ್‌ ಯಡಿಯೂರಪ್ಪ, ನಮ್ಮೆಲ್ಲ ಶಾಸಕರು ತೀರ್ಮಾನಿಸಿದ್ದು, ಇಲ್ಲೇ ರಾತ್ರಿ ಉಳಿಯುತ್ತೇವೆ. ಸಂವಿಧಾನದ ಚೌಕಟ್ಟನ್ನು ಮೀರಿ ಯಾವ ಕಾರ್ಯಕಲಾಪ ಆರಂಭವಾಗಬೇಕಿತ್ತೋ ಅದನ್ನು ನಿಲ್ಲಿಸಿ ಬೇರೆ ವಿಚಾರಗಳಿಗೆ ಅವಕಾಶ ಮಾಡಿಕೊಟ್ಟು ವಿಶ್ವಾಸ ಮತಯಾಚನೆಯನ್ನು ಮುಂದೂಡಿರುವುದು ದೇಶದ ಇತಿಹಾಸದಲ್ಲಿ ನಡೆದಿಲ್ಲ. ಇದಕ್ಕೆ ಸ್ಪೀಕರ್‌ ಅವರೇ ಅವಕಾಶ ಮಾಡಿಕೊಟ್ಟಿದ್ದಾರೆ. ವಿಶ್ವಾಸಮತ ಆಗದ ಹೊರತು ಸದನದಿಂದ ಹೊರಹೋಗುವುದಿಲ್ಲ ಎಂದು ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ತಡರಾತ್ರಿ 12 ಗಂಟೆಯಾದರೂ ನಾವು ಸಿದ್ಧ. ಇಂದೇ ವಿಶ್ವಾಸಮತ ಯಾಚನೆ ಮಾಡಲಿ. ವಾಮಮಾರ್ಗ ಮೂಲಕ ಷಡ್ಯಂತ್ರ ಮಾಡುತ್ತಿದ್ದಾರೆ. ವಿಶ್ವಾಸಮತ ಯಾಚನೆ ಮುಂದೂಡುವ ಕೆಲಸ ಆಗುತ್ತಿದೆ. ಸದನದೊಳಗೆ ಗಲಾಟೆ ಎಬ್ಬಿಸುವಂತೆ ಡಿಕೆಶಿ ಸೂಚನೆ ನೀಡಿದ್ದಾರೆ. ಮಧ್ಯರಾತ್ರಿಯಾದ್ರೂ ಚರ್ಚೆ ನಡೆಸಲು ನಾವು ಸಿದ್ಧ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ತಿಳಿಸಿದರು.
ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಅಧಿವೇಶನ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಸಭಾನಾಯಕ ಮಂಡಿಸಿದ ವಿಶ್ವಾಸ ಮತಯಾಚನೆಗೆ ಪಾಯಿಂಟ್ ಆಫ್ ಆರ್ಡರ್ ತಂದು ಅಡ್ಡಿ ಪಡಿಸಲಾಯಿತು. ಈಗ ಸಾಂವಿಧಾನಿಕ ಬಿಕ್ಕಟ್ಟು ಹೆಸರಿನಲ್ಲಿ ವಿಶ್ವಾಸಮತ ಮುಂದೂಡುವ ಕೆಲಸವಾಗುತ್ತಿದೆ ಎಂದರು.
ಈ ಹಿಂದೆ ಸುಪ್ರೀಂ ಮಧ್ಯರಾತ್ರಿಯಲ್ಲಿ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಆದೇಶಿಸಿತ್ತು. ಬಹುಮತವಿಲ್ಲದೆ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟರು. ಈಗ ದೋಸ್ತಿ ನಾಯಕರು ಹುನ್ನಾರ ನಡೆಸುತ್ತಿದ್ದಾರೆ. ಮಧ್ಯರಾತ್ರಿವರೆಗೂ ಚರ್ಚೆ ನಡೆಸಲಿ. ಇವತ್ತೇ ಮತಕ್ಕೆ ಹಾಕಬೇಕು. ವಾಮಮಾರ್ಗದ ಮೂಲಕ ಅಧಿಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...