ಬಾಯಿಗೆ ರುಚಿ, ದೇಹಕ್ಕೆ ಹಿತ ನೀಡುವ ಅಣಬೆಗೆ ಮಾರು ಹೋಗುವ ಭಟ್ಕಲಿ ನವಾಯತರು

Source: sonews | By Staff Correspondent | Published on 5th August 2019, 6:49 PM | Coastal News | Special Report | Don't Miss |

•    ನೂರು ಅಣಬೆ ಗೆ 6ರಿಂದ 7 ನೂರು ಬೆಲೆ; ಗ್ರಾಮೀಣರಿಗೆ ಭರಪೂರ ಆದಾಯ

ಭಟ್ಕಳ: ಬಾಯಿಗೆ ರುಚಿ ದೇಹಕ್ಕೆ ಹಿತ ನೀಡುವ ಅಣಬೆ ಭರಪೂರ ಪೋಷಕಾಂಶಗಳನ್ನು ಹೊಂದಿದ್ದು ಮಳೆಗಾಲದಲ್ಲಿ ಆರಂಭದಲ್ಲಿ ಕಾಡಿನ ಮದ್ಯೆ ಹುತ್ತಗಳ ಒಡಲಲ್ಲಿ ಬೆಳೆಯುವ ಅಪರೂಪದ ಬೆಳೆಯಾಗಿದ್ದು ಗ್ರಾಮೀಣರಿಗೆ ಭರಪೂರ ಆದಾಯ ತಂದುಕೊಡುತ್ತದೆ.

ಉ.ಕ. ಜಿಲ್ಲೆಯ ಗ್ರಾಮೀಣ ಭಾಗದ ಪ್ರಕೃತಿ ಮಡಿಲಲ್ಲಿ ಹೊಲ, ಗದ್ದೆ, ಹುತ್ತಗಳಡಿ ಬೆಳೆಯುವ ಈ ಅಣಬೆಗಳು ತಮ್ಮೊಳಗೆ ಯಥೇಚ್ಛವಾಗಿ ಪ್ರೋಟಿನ್, ವಿಟಮಿನ್, ಖನಿಜಾಂಶ, ಅಮೈನೋ ಆಮ್ಲ ಮತ್ತು ಆಂಟಿ ಅಕ್ಸಿಡೆಂಟ್‍ಗಳನ್ನು ಹುದುಗಿಸಿಕೊಂಡಿರುತ್ತವೆ. ಭಟ್ಕಳದಲ್ಲಿ ಅತಿ ಹೆಚ್ಚು ಹೆಚ್ಚು ಮಾರಾಟವಾಗುವ ಹೆಗ್ಗಲಿ(ಅಣಬೆ)ಗಳು ಇಲ್ಲಿನ ನವಾಯತ್ ಮುಸ್ಲಿಮರ ಅತಿ ಹೆಚ್ಚು ಇಷ್ಟದ ಭೋಜನವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. 

ತಾಲೂಕಿನ ಗ್ರಾಮೀಣ ಪ್ರದೇಶವಾದ ಹಾಡುವಳ್ಳಿ, ಕೋಣಾರ, ಮಾರುಕೇರಿ. ಶಿರಾಲಿ, ಶಿರಾಣಿ, ಕಟಗಾರಕೊಪ್ಪ ಮುಂತಾದ ಕಡೆಗಳಲ್ಲಿ ಅರಣ್ಯದಲ್ಲಿ ಇರುವ ಹುತ್ತದ ಮೇಲೆ ಇಲ್ಲವೇ ಹುಲುಸಾಗಿ ಇರುವ ಮಣ್ಣು ದಿಣ್ಣೆಯ ಮೇಲೆ ಹೆಗ್ಗಲಿ ಬೆಳೆಯುತ್ತಿದ್ದು, ಎರಡು ತಿಂಗಳುಗಳ ಕಾಲ ಮಾತ್ರ ಇದು ದೊರೆಯುತ್ತದೆ. ಗ್ರಾಮೀಣ ಭಾಗದಲ್ಲಿ ಹಲವರು ಹೆಗ್ಗಲಿ ಮಾರಾಟವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವುದುಂಟು. ಭಟ್ಕಳದಲ್ಲಿ ಸಿಗಲಿರುವ ಅಣಬೆಗೆ ದುಬೈ ತನಕ ಬೇಡಿಕೆಯಿದ್ದು ಇಲ್ಲಿನ ನವಯಾತ್  ಮುಸ್ಲಿಂರಿಗೆ ಇದು ಫೇವರೇಟ್ ಆಗಿದೆ. 

ಮಳೆಗಾಲ ಆರಂಭದಲ್ಲಿಯೇ ಕಾಡಿನಲ್ಲಿ ಬೆಳೆಯುವ ಹೆಗ್ಗಲಿ (ಅಣಬೆ)ಗಳನ್ನು ಗ್ರಾಮೀಣ ಭಾಗದ ಜನರು ಬೆಳಗಿನ ಜಾವವೇ ಕಾಡಿಗೆ ಹೋಗಿ ಕಾಡಿನಲ್ಲಿ ಹುತ್ತಗಳಲ್ಲಿ ಹಾಗೂ ಅತ್ಯಂತ ಹುಲುಸಾಗಿರುವ ಪ್ರದೇಶದಲ್ಲಿ ಬೆಳೆದಿರುವ ಅಣಬೆಗಳನ್ನು ಕಿತ್ತು ತರುತ್ತಾರೆ. ಭಟ್ಕಳ ಪೇಟೆಗೆ ಬಂದರೆ ಅಣಬೆಗೆ ಎಲ್ಲಿಲ್ಲದ ಡಿಮಾಂಡ್! ಪ್ರತಿ ವರ್ಷವೂ ಹಳೆ ಬಸ್ ನಿಲ್ದಾಣದ ತಹಸೀಲ್ದಾರ ಕಛೇರಿ ಪಕ್ಕದ ರಸ್ತೆಯಲ್ಲಿ ಮಹಿಳೆ ಪುರುಷರೆನ್ನದೇ ಅಣಬೆ ವ್ಯಾಪಾರ ಮಾಡುತ್ತಿದ್ದು, ಕಳೆದ ಬಾರಿ ಅರಣ್ಯ ಇಲಾಖೆಯಿಂದ ಕೆಲವು ಗೊಂದಲದ ನಿರ್ಧಾರದಿಂದಾಗಿ ಅಣಬೆ ವ್ಯಾಪಾರಕ್ಕೆ ಅವಕಾಶ ನೀಡದೇ ಸರಿಯಾದ ಕಾಲದಲ್ಲಿ ಗ್ರಾಹಕರಿಗೆ ಅಣಬೆ ಸಿಗದೇ ಇರುವ ಸ್ಥಿತಿ ಎದುರಾಗಿದ್ದು, ಈ ಬಾರಿ ಅದ್ಯಾವುದೇ ಗೊಂದಲವಿಲ್ಲದೇ ವ್ಯಾಪಾರ ನಡೆಯುತ್ತಿರುವದು ಕಂಡು ಬಂದಿದೆ. ನಗರದ ತಾ. ಪಂ ಎದುರುಗಡೆ, ಹಳೇ ಬಸ್ ನಿಲ್ದಾಣದ ಬಳಿ ಗ್ರಾಮೀಣ ಪ್ರದೇಶದ ಜನರು ಹೆಗ್ಗಲಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾರೆ. ಬೆಳಿಗ್ಗೆ ಬಂದರೆ ಒಮ್ಮೊಮ್ಮೆ ಸಂಜೆಯ ತನಕವೂ ವ್ಯಾಪಾರ ನಡೆದೇ ಇರುತ್ತದೆ. 

ಮೊದ ಮೊದಲು ಬರುತ್ತಿದ್ದ ಅಣಬೆಗೆ 100ಕ್ಕೆ 700 ರೂಪಾಯಿ ತನಕವಿದ್ದರೆ ಇಂದು ಸ್ವಲ್ಪ ದರ ಕಡಿಮೆಯಾಗಿದ್ದು ಉತ್ತಮ ಜಾತಿಯ ಅಣಬೆಗೆ 500 ರೂಪಾಯಿ ಇದ್ದರೆ ಸ್ವಲ್ಪ ಅರಳದೇ ಇರುವ ಅಣಬೆಗೆ 400 ರಿಂದ 500 ರೂಪಾಯಿ ಇದೆ. ಇದಕ್ಕೆ ಕಾರಣ ಅನಿವಾಸಿ ಮುಸ್ಲಿಂ ಬಾರತೀಯರು ಭಟ್ಕಳಕ್ಕೆ ಬಂದಿದ್ದು ಅಪರೂಪದ ಹೆಗ್ಗಲಿ ಎಷ್ಠೆ ದರವಿದ್ದರೂ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. 

ಗ್ರಾಮೀಣ ಭಾಗದ ತಾಜಾ ಹೆಗ್ಗಲಿಯಿಂದ ಮಾಡಿದ ಪದಾರ್ಥ ಹೆಚ್ಚಿನ ರುಚಿ ನೀಡುತ್ತಿದಾದ್ದರಿಂದ ಇದಕ್ಕೆ ಹೆಚ್ಚು ಹೆಚ್ಚು ಬೇಡಿಕೆಯಿದೆ. ಹೆಗ್ಗಲಿಯಿಂದ ಸಂಬಾರು, ಪಲ್ಯ, ಸುಕ್ಕ, ಚಟ್ನೆ ಮುಂತಾದ ಪದಾರ್ಥಗಳನ್ನು ರುಚಿಕರವಾಗಿ ತಯಾರಿಸಬಹುದಾಗಿದೆ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿದೆ. 

ಅಣಬೆ ಮತ್ತು ಆರೋಗ್ಯ: ರುಚಿಯಲ್ಲಿ ಸಾಟಿಯಿಲ್ಲದ ಅಣಬೆ ಆರೋಗ್ಯಕ್ಕೂ ಕೂಡ ಹಿತ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಅಣಬೆಗಳ ನಿರಂತರ ಸೇವನೆಯಿಂದಾಗಿ ನಿಯಾಸಿನ್, ಸೆಲೆನಿಯಂ ಮತ್ತು ರೈಬೊಫ್ಲಾವಿನನ್ ನಂತಹ ಪೋಷಕಾಂಶಗಳು ದೊರೆಯುತ್ತವೆ. ಜೊತೆಗೆ ಇವು ಪೊಟಾಶಿಯಂ ಮತ್ತು ವಿಟಮಿನ್ ‘ಡಿ’ಗಳನ್ನು ಭಾರಿ ಪ್ರಮಾಣದಲ್ಲಿ ಹೊಂದಿರುತ್ತವೆ. ಅಣಬೆಗಳಿಂದ ದೊರೆಯುವ ಆರೋಗ್ಯದ ಪ್ರಯೋಜನಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇವು ತಮ್ಮೊಳಗೆ ಆರೋಗ್ಯಕಾರಿ ಅಂಶಗಳನ್ನು ಹುದುಗಿಸಿಕೊಂಡಿವೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹಾಗಾಗಿ ಇದು ದೇಹಕ್ಕೆ ಅನಾರೋಗ್ಯವನ್ನು ತರುವ ಅಂಶಗಳ ಮೇಲೆ ಹೋರಾಡುತ್ತದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ದೇಹವನ್ನು ಹಲವಾರು ಡಿಸಾರ್ಡರ್‍ಗಳು ಮತ್ತು ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳಿಂದ ಸಹ ತಡೆಯುತ್ತದೆ ಎಂದು ಅದ್ಯಯನಗಳು ತಿಳಿಸುತ್ತವೆ.  
 

•    ಎಂ.ಆರ್.ಮಾನ್ವಿ

Read These Next

ಖಾಸಗಿ ಕಾರ್ಯಕ್ರಮಕ್ಕೆ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಉತ್ತರ ಕನ್ನಡ ಜಿಲ್ಲೆ ಕಾರವಾರಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ತ ಗುರುವಾರ ಆಗಮಿಸಿದ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟಾ ...

ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮುದಾಯ ಬದುಕಿನ ಶಿಬಿರ ಹಾಗೂ ಎನ್.ಎಸ್.ಎಸ್. ಘಟಕಕ್ಕೆ  ಚಾಲನೆ

ಭಟ್ಕಳ: ಇಲ್ಲಿನ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮುದಾಯ ಬದುಕಿನ ಶಿಬಿರ ಹಾಗೂ ಎನ್.ಎಸ್.ಎಸ್. ಘಟಕದ ಉದ್ಘಾಟನೆ ನಡೆಯಿತು. ...

ಪ್ರಧಾನಮಂತ್ರಿ ಎಲ್ಪಿಜಿ ಪಂಚಾಯತಿ ಕಾರ್ಯಕ್ರಮದಲ್ಲಿ ಉಚಿತ ಗ್ಯಾಸ್ ಒಲೆ ಮತ್ತು ಸಿಲೆಂಡರ್ ವಿತರಣೆ

ಭಟ್ಕಳ: ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತರಾದ ತೀರ ಬಡವರ್ಗದ ಜನರು ಗ್ಯಾಸನಂತಹ ಸಾಧನಗಳ ಉಪಯೋಗ ಪಡೆದುಕೊಳ್ಳಬೇಕು ಎಂಬ ...

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...

'ಸಸಿಕಾಂತ್ ಸೆಂಥಿಲ್ ಮೇಲಿನ ಸಂಘಟಿತ ದಾಳಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸುವ ಫ್ಯಾಸಿಸ್ಟ್ ಷಡ್ಯಂತ್ರ'

ಮಂಗಳೂರು: 'ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯಕ್ಕೊಳಗಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿ ಭಾರತ ಆಡಳಿತ ಸೇವೆಯ ...

ಶರಾವತಿ ಅಭಯಾರಣ್ಯಕ್ಕೆ ಅರಣ್ಯ ಪ್ರದೇಶ ಸೇರ್ಪಡೆ ವಿರೋಧಿಸಿ ಅ.೧೦ ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಭಟ್ಕಳ: ಶರಾವತಿ ಅಭಯಾರಣ್ಯಕ್ಕೆ ಭಟ್ಕಳ ತಾಲೂಕಿನ ಅರಣ್ಯ ಪ್ರದೇಶವನ್ನು ಸೇರ್ಪಡಿಸಿದ್ದನ್ನು ಖಂಡಿಸಿ ಹಾಗೂ ಸೇರ್ಪಡೆಗೊಂಡ ...