ಥಾಯ್ಲೆಂಡ್: ಶಿಶುವಿಹಾರದಲ್ಲಿ ಗುಂಡಿನ ದಾಳಿ; 22 ಮಕ್ಕಳ ಸಹಿತ 34 ಮಂದಿ ಮೃತ್ಯು

Source: Vb | By I.G. Bhatkali | Published on 7th October 2022, 6:04 PM | Global News |

ಬ್ಯಾಂಕಾಕ್: ಥಾಯ್ಲೆಂಡ್‌ನ ಶಿಶುವಿಹಾರದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ 22 ಮಕ್ಕಳ ಸಹಿತ 34 ಮಂದಿ ಸಾವಿಗೀಡಾಗಿದ್ದಾರೆ. ದಾಳಿ ನಡೆಸಿದ ಮಾಜಿ ಪೊಲೀಸ್ ಅಧಿಕಾರಿ ಬಳಿಕ ತನ್ನ ಪತ್ನಿ ಮತ್ತು ಮಗುವನ್ನು ಹತ್ಯೆ ಮಾಡಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈಶಾನ್ಯ ಪ್ರಾಂತದ ನಾಂಗ್‌ಬುವಾ ಲ್ಯಾಂಪುವಿನ ಉತೈಸಾವನ್ ಪಟ್ಟಣದಲ್ಲಿರುವ ಶಿಶುವಿಹಾರದಲ್ಲಿ ಈ ದುರಂತ ಸಂಭವಿಸಿದೆ.

ಮಾದಕವಸ್ತು ಪ್ರಕರಣದ ಆರೋಪಿ: ಶಿಶು ವಿಹಾರ ಕೇಂದ್ರದಲ್ಲಿ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿ ಗುಂಡಿನ ದಾಳಿ ನಡೆಸುವುದಕ್ಕೂ ಮುನ್ನ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ವಿಚಾರಣೆಯಲ್ಲಿ ಹಾಜರಾಗಿ ಶಿಶುವಿಹಾರ ಕೇಂದ್ರಕ್ಕೆ ಆಗಮಿಸಿದ್ದ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ. 

ಶಿಶುವಿಹಾರಕ್ಕೆ ಬಂದಾಗ ತನ್ನ ಮಗು ಅಲ್ಲಿಲ್ಲದಿರುವುದನ್ನು ಕಂಡು ಆಕ್ರೋಶದಿಂದ ಹೊರತೆರಳಿ ಪಕ್ಕದಲ್ಲಿದ್ದವರ ಮೇಲೆ ಗುಂಡು ಹಾರಿಸಿ ತನ್ನ ವಾಹನವನ್ನು ಅವರ ಮೇಲೆ ಚಲಾಯಿಸಿದ. ಬಳಿಕ ಮನೆಗೆ ಮರಳಿ ತನ್ನ ಪತ್ನಿ ಮತ್ತು ಮಗುವನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ವಕ್ತಾರ ಪೈಸಾನ್ ಲ್ಯುಸೊಂಬನ್ ಮಾಹಿತಿ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಾದಕ ವಸ್ತು ಹೊಂದಿದ ಆರೋಪದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡಿರುವ ವ್ಯಕ್ತಿ ಈ ದಾಳಿ ನಡೆಸಿದ್ದಾನೆ. ಮಧ್ಯಾಹ್ನ ಊಟದ ಸಮಯ ಶಿಶುವಿಹಾರಕ್ಕೆ ನುಗ್ಗಿದ ಆರೋಪಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಆಗ ಶಿಶುವಿಹಾರದಲ್ಲಿ 30 ಮಕ್ಕಳಿದ್ದರು. ಹತರಾದವರಲ್ಲಿ 2 ವರ್ಷದ ಮಗುವೂ ಸೇರಿದೆ ಎಂದು ಜಿಲ್ಲಾ ಅಧಿಕಾರಿ ಜಿದಾಪ್ ಬೂನ್ನೋಮ್ ರನ್ನು ಉಲ್ಲೇಖಿಸಿ ರಾಸ್ಟರ್ಸ್ ವರದಿ ಮಾಡಿದೆ.

ದಾಳಿ ನಡೆಸಿದ ಬಂದೂಕುಧಾರಿಯನ್ನು ಕಳೆದ ವರ್ಷ ಪೊಲೀಸ್ ಪಡೆಯಿಂದ ವಜಾಗೊಳಿಸಲಾಗಿತ್ತು. ಶಿಶು ವಿಹಾರಕ್ಕೆ ನುಗ್ಗಿದ ಆತ ಮೊದಲು 8 ತಿಂಗಳ ಗರ್ಭಿಣಿ ಶಿಕ್ಷಕಿಯ ಸಹಿತ 5 ಸಿಬ್ಬಂದಿಗೆ ಗುಂಡು ಹಾರಿಸಿ ದ್ದಾನೆ ಎಂದು ನಾಕ್ಲಾಂಗ್ ಪೊಲೀಸ್ ಠಾಣೆಯ ಸುಪರಿಂ ಟೆಂಡೆಂಟ್ ಛಕ್ರಪಾತ್ ವಿಚಿತ್ ವೈದ್ಯ ಹೇಳಿದ್ದಾರೆ. ಆರಂಭ ದಲ್ಲಿ ಇದು ಪಟಾಕಿ ಸಿಡಿಸಿದ ಸದ್ದು ಎಂದು ಭಾವಿಸಿದ್ದೆವು ಎಂದು ಸ್ಥಳೀಯರು ಹೇಳಿದ್ದಾರೆ.

ಬಂದೂಕುಧಾರಿ ಮಾದಕ ವಸ್ತುವಿನ ನಶೆಯಲ್ಲಿದ್ದ ಎಂಬ ಶಂಕೆಯಿದೆ. ಇದೊಂದು ಆಘಾತಕಾರಿ ದುರಂತ ಎಂದಿರುವ ಥಾಯ್ಲೆಂಡ್ ಪ್ರಧಾನಿ ಪ್ರಯೂಥ್ ಚಾನ್-ಒಚ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿಸುವಂತೆ ಅವರು ಎಲ್ಲಾ ಏಜೆನ್ಸಿಗಳಿಗೆ ಆದೇಶಿಸಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...