ಟೆಸ್ಟ್ ಕ್ರಿಕೆಟ್: 500ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್

Source: Prajavani | Published on 30th July 2020, 12:08 AM | Sports News | Don't Miss |

 

ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಮುಕ್ತಾಯವಾದ ಮೂರು ಪಂದ್ಯಗಳ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ಅನುಭವಿ‌ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಳನೇ ಬೌಲರ್‌ ಎನಿಸಿದರು.
ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಮುನ್ನಡೆಸಿದ್ದರು. ಈ ಪಂದ್ಯದಿಂದ ಬ್ರಾಡ್‌ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿತ್ತು. ಪಂದ್ಯವನ್ನು ಪ್ರವಾಸಿ ಪಡೆ‌ 4 ವಿಕೆಟ್‌ ಅಂತರದಲ್ಲಿ ಗೆದ್ದುಕೊಂಡಿದ್ದರಿಂದ ನಾಯಕನ ನಿರ್ಧಾರಕ್ಕೆ ಟೀಕೆ ವ್ಯಕ್ತವಾಗಿತ್ತು. ಅದಾದನಂತರ ಉಳಿದ ಪಂದ್ಯಗಳಲ್ಲಿ ಸ್ಥಾನ ಗಳಿಸಿದ ಬ್ರಾಡ್‌, ಸಾಮರ್ಥ್ಯ ಸಾಬೀತು ಮಾಡಿದರು. ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌‌ನಲ್ಲೂ ಮಿಂಚಿದ ಅವರು ಸರಣಿ ಶ್ರೇಷ್ಠ ಎನಿಸಿದರು.
ಕೊರೊನಾ ಕಾಲದ ಮೊಟ್ಟಮೊದಲ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2–1 ಅಂತರದಿಂದ ಗೆದ್ದು ಬೀಗಿತು.
2007ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬ್ರಾಡ್‌ ಖಾತೆಯಲ್ಲಿ ಈ ಸರಣಿಗೂ ಮುನ್ನ 485 ವಿಕೆಟ್‌ಗಳಿದ್ದವು. ಎರಡನೇ ಪಂದ್ಯದಲ್ಲಿ ಒಟ್ಟು ಆರು ವಿಕೆಟ್‌ ಪಡೆದ ಬ್ರಾಡ್‌, ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 6 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಉರುಳಿಸಿದರು. ಮಾತ್ರವಲ್ಲದೆ, ಮೊದಲ ಇನಿಂಗ್ಸ್‌ನಲ್ಲಿ 62 ರನ್‌ ಗಳಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಇದರೊಂದಿಗೆ ತಮ್ಮ 140ನೇ ಟೆಸ್ಟ್‌ ಪಂದ್ಯದ 258ನೇ ಇನಿಂಗ್ಸ್‌ನಲ್ಲಿ 501 ವಿಕೆಟ್‌ ಪಡೆದ ಸಾಧನೆ ಮಾಡಿದರು

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...